ಮಸೀದಿ ಮತ್ತು ಚರ್ಚ್​ಗಳಿಗೆ ಹೋದ ಮಾತ್ರಕ್ಕೆ ಅವು ನಮ್ಮವಾಗಲು ಸಾಧ್ಯವೇ? ವಿ ಸೋಮಣ್ಣ, ಕೇಂದ್ರ ಸಚಿವ

Updated on: Aug 29, 2025 | 11:59 AM

ಧರ್ಮಸ್ಥಳಕ್ಕೆ ಕೇವಲ ಬಿಜೆಪಿ ಮಾತ್ರವಲ್ಲ, ಯಾವ ಪಕ್ಷದವರು ಬೇಕಾದರೂ ಹೋಗಬಹುದು, ಅಸಲಿಗೆ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಬೇಕು, ಎಲ್ಲರಿಗಿಂತ ದೊಡ್ಡವನು ದೇವರು, ದೇಶ ದೇವರಿಗಿಂತ ದೊಡ್ಡದು, ನಾವು ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಕೆಲಸ ಮಾಡುತ್ತಿದ್ದೇವೆ, ಮೊನ್ನೆ ಜಮ್ಮು ಮತ್ತು ಕಾಶ್ಮೀರದಲ್ಲಿ ವೈಷ್ಣೋದೇವಿ ದೇವಾಲಯಕ್ಕೆ ಹೋಗಿಬರಲು ಅನುಕೂಲವಾಗುವಂತೆ ₹51,000 ಕೋಟಿಗಳ ರೇಲ್ವೇ ಯೋಜನೆ ದೇಶಕ್ಕೆ ಸಮರ್ಪಿಸಿದ್ದೇವೆ, ಧರ್ಮಸ್ಥಳಕ್ಕೂ ಕೆಲ ಯೋಜನೆಗಳನ್ನು ಅಂದುಕೊಂಡಿದ್ದೇವೆ ಎಂದು ಸೋಮಣ್ಣ ಹೇಳಿದರು.

ಬೆಂಗಳೂರು, ಆಗಸ್ಟ್ 28: ನಗರದಲ್ಲಿಂದು ನಮ್ಮ ವರದಿಗಾರನೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಚಾಮುಂಡಿ ಬೆಟ್ಟದ ವಿಷಯದಲ್ಲಿ ಡಿಕೆ ಶಿವಕುಮಾರ್ (DCM DK Shivakumar) ಅಪಾರ್ಥ ಉಂಟಾಗುವಂತೆ ಮಾತಾಡಿದ್ದಾರೆ, ಅದು ತಪ್ಪು, ಒಬ್ಬ ಸ್ನೇಹಿತನಾಗಿ ಅವರಿಗೆ ಹೇಳುತ್ತೇನೆ, ಹೇಳಿಕೆಗಳನ್ನು ನೀಡುವಾಗ ಸ್ವಲ್ಪ ಎಚ್ಚರವಹಿಸಬೇಕು, ಚಾಮುಂಡಿ ಬೆಟ್ಟದ ವಿಷಯದಲ್ಲಿ ತಾವಾಡಿರುವ ಮಾತನ್ನು ವಾಪಸ್ಸು ಪಡೆಯಬೇಕು ಇಲ್ಲವೇ ಇಂಥ ಮಾತುಗಳನ್ನು ಅಡುವ ಉಸಾಬರಿಗೆ ಹೋಗಬಾರದು ಎಂದು ಹೇಳಿದರು. ಹಿಂದೂಗಳಿಗೆ ಭವ್ಯ ಪರಂಪರೆಯನ್ನು ಒದಗಿಸಿರುವ ರಾಷ್ಟ್ರ ಭಾರತ, ನಾನು ಸಹ ಚರ್ಚ್ ಮತ್ತು ಮಸೀದಿಗಳಿಗೆ ಹೀಓಗುತ್ತನೆ, ಶಿವಕುಮಾರ್ ಸಹ ಹೋಗುತ್ತಾರೆ, ಹಾಗೆಂದ ಮಾತ್ರಕ್ಕೆ ಚರ್ಚ್​ ನನ್ನದು, ಮಸೀದಿ ನನ್ನದು ಅಂತ ಹೇಳಲಾದೀತೇ? ಕೇವಲ ಒಂದು ವರ್ಗವನ್ನು ಓಲೈಸಿಕೊಳ್ಳಲು, ಅದನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಶಿವಕುಮಾರ್ ಹಾಗೆಲ್ಲ ಮಾತಾಡಬಾರದು, ಆರೆಸ್ಸೆಸ್ ಗೀತೆ ಹೇಳುವ ಮೂಲಕ ಅವರು ತಮ್ಮ ಜಾತ್ಯಾತೀತ ಮನೋಧರ್ಮ ಪ್ರದರ್ಶಿಸಿದ್ದಾರೆ, ಅದರೆ ಚಾಮುಂಡಿ ಬೆಟ್ಟದ ವಿಷಯದಲ್ಲಿ ಅವರು ಸರಿಯಾಗಿ ಮಾತಾಡಿಲ್ಲ ಎಂದು ಸೋಮಣ್ಣ ಹೇಳಿದರು.

ಇದನ್ನೂ ಓದಿ:  Dharmasthala Mask Man Arrested; ಸತ್ಯ ಎಷ್ಟೇ ಕಹಿಯಾದರೂ ಅದು ಸತ್ಯವೇ, ಸರ್ಕಾರಕ್ಕೆ ಅರ್ಥವಾಗಲಿಲ್ಲ: ಸೋಮಣ್ಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 28, 2025 09:10 PM