AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ: 100 ಹಂದಿಗಳು ಸಾವು!

ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿತ್ತು. ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದ ಬಳಿಯಿರುವ ಫಾರ್ಮ್‌ ಒಂದರಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಈಗಾಗಲೇ 100 ಹಂದಿಗಳು ಸಾವನ್ನಪ್ಪಿದ್ದು, 57 ಹಂದಿಗಳನ್ನು ಕೊಲ್ಲಲು ನಿರ್ಧಾರ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲಿಟ್ಟ ಆಫ್ರಿಕನ್ ಹಂದಿ ಜ್ವರ: 100 ಹಂದಿಗಳು ಸಾವು!
ಪ್ರಾತಿನಿಧಿಕ ಚಿತ್ರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Aug 28, 2025 | 10:35 PM

Share

ಚಿಕ್ಕಬಳ್ಳಾಪುರ, ಆಗಸ್ಟ್​ 28: ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಹೆಬ್ಬರಿ ಗ್ರಾಮದ ಬಳಿಯಿರುವ ಫಾರ್ಮ್‌ ಒಂದರಲ್ಲಿ ಆಫ್ರಿಕನ್ ಹಂದಿ ಜ್ವರ (African swine flu) ಕಾಣಿಸಿಕೊಂಡಿದೆ. ಯಾರ್ಕ್ ಶೇರ್ ತಳಿಯ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದ್ದು, ಈಗಾಗಲೇ 100 ಹಂದಿಗಳು ಸಾವನ್ನಪ್ಪಿವೆ. 57 ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಆಫ್ರಿಕನ್ ಹಂದಿ ಜ್ವರದಿಂದ ಜನರಿಗೆ ಯಾವುದೇ ಆತಂಕಬೇಡ ಎಂದು ಉಪ ನಿರ್ದೇಶಕ ಡಾ.ರಂಗಪ್ಪ ಮಾಹಿತಿ ನೀಡಿದ್ದಾರೆ.

ಉಪ ನಿರ್ದೇಶಕ ಡಾ.ರಂಗಪ್ಪ ಹೇಳಿದ್ದಿಷ್ಟು

ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ, ಕಳೆದ ಒಂದು ವಾರದಿಂದ ಫಾರ್ಮ್‌ನಲ್ಲಿ ಹಂದಿಗಳು ಸಾವನ್ನಪ್ಪಿದ್ದವು. ಹೀಗಾಗಿ ಸಾಕಾಣಿಕೆಯ ಫಾರ್ಮ್‌ ಹೌಸ್​ಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಸುಪ್ರೀಂ ಆದೇಶ ಬೆನ್ನಲ್ಲೆ ಫೀಲ್ಡ್​ಗಿಳಿದ ಬಿಬಿಎಂಪಿ; ಬೀದಿನಾಯಿಗಳಿಗೆ ಆಹಾರ ನೀಡೋಕೆ ಜಾಗ ಗುರ್ತಿಸಲು ಮುಂದಾದ ಪಾಲಿಕೆ

ಹಂದಿಜ್ವರ ಶಂಕೆ ಹಿನ್ನಲೆ ಸ್ಯಾಂಪಲ್​​ ಅನ್ನು ಭೋಪಾಲ್‌ನ ರಾಷ್ಟ್ರೀಯ ಲ್ಯಾಬ್‌ಗೆ ಸ್ಯಾಂಪಲ್ ಕಳಿಸಲಾಗಿತ್ತು. ಇಂದು ಬಂದಿರುವ ವರದಿಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಫಾರ್ಮ್‌ನಿಂದ ಹಂದಿಗಳ ಸಾಗಾಟ, ಮಾರಾಟ ನಿಷೇಧ ಮಾಡಲಾಗಿದೆ ಎಂದು ಅವರು ತಿಳಿಸಿದ್ದರು.

ಸೋಂಕಿತ ಹಂದಿಗಳಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ

ಹಂದಿಗಳನ್ನು ಹೊಸಕೋಟೆ ಮೂಲಕ ನಾಗಲ್ಯಾಂಡ್‌ಗೆ ರವಾನಿಸುತ್ತಿದ್ದರು. ಹಂದಿಗಳಿಗೆ ಆಫ್ರಿಕನ್ ಜ್ವರ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸೋಂಕಿತ ಹಂದಿಗಳಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ. ಹಾಗಾಗಿ ಆಫ್ರಿಕನ್ ಹಂದಿ ಜ್ವರದಿಂದ ಜನರಿಗೆ ಯಾವುದೇ ಆತಂಕಬೇಡ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಲಿ ಜ್ವರದ ಟೆನ್ಷನ್: ಡೆಂಘಿ, ಚಿಕುನ್ ಗುನ್ಯಾ ನಡುವೆ ಮತ್ತೊಂದು ಆತಂಕ

ಈ ಆಫ್ರಿಕನ್ ಹಂದಿ ಜ್ವರವು ಒಂದು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಇದು ದೇಶೀಯ ಮತ್ತು ಕಾಡು ಹಂದಿಗಳಿಂದ ಹರಡುತ್ತದೆ. ಈ ಕಾಯಿಲೆಗೆ ಒಳಗಾಗುವ ಹಂದಿಗಳು ಸಾವನ್ನಪ್ಪುತ್ತವೆ. ಇನ್ನು ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಔಷಧಗಳು ಲಭ್ಯವಿಲ್ಲ. ಜ್ವರ ದೃಢಪಟ್ಟ ಸ್ಥಳದಿಂದ ಒಂದು ಕಿ.ಮೀ. ಪ್ರದೇಶದ ಸುತ್ತಮುತ್ತಲಿನ ಹಂದಿಗಳನ್ನು ಕೊಲ್ಲಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.