AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯದಿದ್ರು ವ್ಯಕ್ತಿ ಕುಡಿದಿರುವುದಾಗಿ ತೋರಿಸಿದ ಮಷಿನ್: ಕೋರ್ಟ್ ಕಟಕಟೆಯಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಯಂತ್ರ

ಬೆಂಗಳೂರಿನಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಪತ್ತೆ ಹಚ್ಚುವ ಯಂತ್ರದಲ್ಲೇ ಲೋಪ ಉಂಟಾಗಿರುವ ಆರೋಪ ಒಂದು ಕೇಳಿಬಂದಿದೆ. ಎರಡು ಬಾರಿ ನೆಗೆಟಿವ್ ತೋರಿಸಿ ಬಳಿಕ 3ನೇ ಬಾರಿಗೆ ಪಾಸಿಟಿವ್ ತೋರಿಸಿದೆ. ಪೊಲೀಸರು ಕಾರು ಸೀಜ್ ಮಾಡಿ ದಂಡ ವಿಧಿಸಿದ್ದಾರೆ. ಸದ್ಯ ವಿಚಾರವಾಗಿ ಚಾಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

ಕುಡಿಯದಿದ್ರು ವ್ಯಕ್ತಿ ಕುಡಿದಿರುವುದಾಗಿ ತೋರಿಸಿದ ಮಷಿನ್: ಕೋರ್ಟ್ ಕಟಕಟೆಯಲ್ಲಿ ಡ್ರಿಂಕ್ ಆ್ಯಂಡ್ ಡ್ರೈವ್ ಯಂತ್ರ
ಡ್ರಿಂಕ್ ಆ್ಯಂಡ್ ಡ್ರೈವ್ ಪತ್ತೆ ಹಚ್ಚುವ ಯಂತ್ರ, ಹೈಕೋರ್ಟ್
Ramesha M
| Edited By: |

Updated on: Aug 28, 2025 | 8:54 PM

Share

ಬೆಂಗಳೂರು, ಆಗಸ್ಟ್​ 28: ಐಟಿ ಬಿಟಿ ಕಂಪನಿಗಳು ಹೆಚ್ಚಿರುವ ಸಿಲಿಕಾನ್​ ಸಿಟಿಯಲ್ಲಿ (Bangaluru) ಡ್ರಿಂಕ್ಸ್​ ಪಾರ್ಟಿಗಳು ಸಾಮಾನ್ಯ. ಅದರಲ್ಲೂ ವೀಕೆಂಡ್​ನಲ್ಲಿ ಮದ್ಯದ ಕಿಕ್‌ ಜೋರಾಗಿರುತ್ತದೆ. ಹೀಗಾಗಿ ನಗರದಲ್ಲಿ ನೂರಾರು ಡ್ರಿಂಕ್ ಆ್ಯಂಡ್ ಡ್ರೈವ್​ ಪ್ರಕರಣಳು ದಾಖಲಾಗುತ್ತಿರುತ್ತವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಆ ಡ್ರಿಂಕ್ ಆ್ಯಂಡ್ ಡ್ರೈವ್ (Drink and Drive) ಪತ್ತೆ ಹಚ್ಚುವ ಯಂತ್ರದಲ್ಲೇ ಲೋಪ ಕಂಡುಬಂದಿದ್ದು, ಓರ್ವ ಚಾಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ವಾರವಿಡೀ ದುಡಿಯುವ ಜನರು ತಮ್ಮ ಸ್ನೇಹಿತರೊಂದಿಗೆ ಸೇರಿ ಕಂಠಪೂರ್ತಿ ಕುಡಿದು ಮೋಜು ಮಸ್ತಿ ಮಾಡುತ್ತಾರೆ. ಇತ್ತ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಂಚಾರ ಪೊಲೀಸರು ಈ ಡ್ರಿಂಕ್ ಆ್ಯಂಡ್ ಡ್ರೈವ್ ಮಾಡುವವರ ವಿರುದ್ಧು ದೂರು ದಾಖಲಿಸಿಕೊಂಡು ದಂಡ ವಿಧಿಸುತ್ತಾರೆ. ಆದರೆ ಕೆಲವೊಮ್ಮೆ ಮದ್ಯಪಾನ ಮಾಡದಿದ್ದರೂ ಯಂತ್ರದಲ್ಲಿ ಪಾಸಿಟಿವ್ ತೋರಿಸುತ್ತದೆ. ಇದೀಗ ಅಂತಹದೇ ಒಂದು ಘಟನೆ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ನೂರು ಟ್ರಾಫಿಕ್ ಕೇಸ್​: ಬೈಕ್​ ಬಾಳುವ ಬೆಲೆಯಷ್ಟೇ ಶೇ 50 ಆಫರ್​ನಲ್ಲಿ ದಂಡ ಕಟ್ಟಿದ ಮಾಲೀಕ, ಎಷ್ಟು ಗೊತ್ತಾ?

ಅಜಯ್ ಕುಮಾರ್ ಕಶ್ಯಪ್ ಎಂಬುವವರು ಕಾರು ಚಾಲನೆ ಮಾಡುವಾಗ ಟ್ರಾಫಿಕ್ ಪೊಲೀಸರು ತಡೆದಿದ್ದರು. ಮದ್ಯಪಾನ ಮಾಡದಿದ್ದರೂ ಯಂತ್ರದಲ್ಲಿ ಎರಡು ಬಾರಿ ನೆಗೆಟಿವ್ ತೋರಿಸಿ 3ನೇ ಬಾರಿ ಪಾಸಿಟಿವ್ ತೋರಿಸಿದೆ. ತಾನು ಕುಡಿದಿಲ್ಲವೆಂದು ಹೇಳಿದರೂ ಒಪ್ಪದ ಪೊಲೀಸರು ಅವರ ಕಾರು ಸೀಜ್ ಮಾಡಿ 10 ಸಾವಿರ  ರೂ. ದಂಡ ವಿಧಿಸಿದ್ದಾರೆ.

ಬಳಿಕ ಅಜಯ್ ಕುಮಾರ್ ಕಶ್ಯಪ್​ ಅವರು ತಾವೇ ಖಾಸಗಿ ಲ್ಯಾಬ್​ನಲ್ಲಿ ಟೆಸ್ಟ್ ಮಾಡಿಸಿದ್ದು ಆಗಲೂ ನೆಗೆಟಿವ್ ಬಂದಿದೆ. ಹೀಗಾಗಿ ಡ್ರಿಂಕ್ ಆ್ಯಂಡ್​​​ ಡ್ರೈವ್ ಪತ್ತೆ ಯಂತ್ರದಲ್ಲೇ ಲೋಪವಿದೆ ಎಂದು ಆರೋಪಿಸಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಸರ್ಕಾರ ಮತ್ತು ಟ್ರಾಫಿಕ್ ಪೊಲೀಸರಿಗೆ ನೋಟಿಸ್ 

ಇಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​, ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಯಂತ್ರದಲ್ಲೇ ಲೋಪವಿದ್ದಾಗ ಕುಡಿತದ ಆರೋಪ ಒಪ್ಪಲಾಗುವುದಿಲ್ಲ. ಹೀಗಾಗಿ ಈ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ನ್ಯಾ.ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೊತೆಗೆ ಸರ್ಕಾರ ಮತ್ತು ಟ್ರಾಫಿಕ್ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.