ಎಚ್​ಡಿಕೆ ಬೆನ್ನಿಗೆ ನಿಂತ ಒಕ್ಕಲಿಗರ ಸಂಘ: ಸಚಿವ ಸ್ಥಾನದಿಂದ ಜಮೀರ್ ಅಹಮ್ಮದ್ ವಜಾಕ್ಕೆ ಆಗ್ರಹ

|

Updated on: Nov 12, 2024 | 6:58 PM

ಕುಮಾರಸ್ವಾಮಿ ಕರಿಯಣ್ಣ ಅಂತ ಜಮೀರ್ ಅಹಮ್ಮದ್​ ಹೇಳಿದ್ದು ದೊಡ್ಡ ವಾಗ್ಯುದ್ಧಕ್ಕೆ ವೇದಿಕೆ ಕೊಟ್ಟಿದೆ.. ಈ ವಿಚಾರವಾಗಿ ಜಮೀರ್ ಅಹ್ಮದ್​ ಕ್ಷಮೆ ಕೇಳಿದರೂ ಸಹ ಜೆಡಿಎಸ್​ ನಾಯಕರು ಹಾಗೂ ಕಾರ್ಯಕರ್ತರು ಜಮೀರ್ ಅಹಮ್ಮದ್ ಖಾನ್ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕಾಳಗದಲ್ಲಿ ರಾಜ್ಯ ಒಕ್ಕಲಿಗರ ಸಂಘ ಎಂಟ್ರಿ ಕೊಟ್ಟಿದ್ದು, ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿದೆ.

ಎಚ್​ಡಿಕೆ ಬೆನ್ನಿಗೆ ನಿಂತ ಒಕ್ಕಲಿಗರ ಸಂಘ: ಸಚಿವ ಸ್ಥಾನದಿಂದ ಜಮೀರ್ ಅಹಮ್ಮದ್ ವಜಾಕ್ಕೆ ಆಗ್ರಹ
ಜಮೀರ್ ಅಹ್ಮದ್
Follow us on

ಬೆಂಗಳೂರು, (ನವೆಂಬರ್ 12): ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದ್ರೆ ಹೋಯ್ತು ಅಂತರಲ್ವಾ. ಹಾಗಾಗಿದೆ ನೋಡಿ ಸಚಿವ ಜಮೀರ್​ ಅಹ್ಮದ್​ ಖಾನ್​ ಪರಿಸ್ಥಿತಿ. ಬಿಜೆಪಿಗಿಂತ ಅಪಾಯಕಾರಿ ಕಾಲಿಯಾ ಕುಮಾರಸ್ವಾಮಿ. ನಮ್ಮ ಕಾಲಾ ಕುಮಾರಸ್ವಾಮಿ ಎಂದು ಅದ್ಯಾವಾಗ ದಳಪತಿ ವಿರುದ್ಧ ಮಾತಿನ ಬಾಣಗಳನ್ನ ಬಿಟ್ರೋ, ಆಗಿನಿಂದಲೂ ರಾಜ್ಯ ರಾಜಕಾರಣದಲ್ಲಿ ಬಣ್ಣ ಬಡಿದಾಟ ರಣರಣ ಅಂತಿದೆ. ಸಚಿವ ಜಮೀರ್ ಮಾತಿಗೆ ಬಿಜೆಪಿ, ಜೆಡಿಎಸ್​ ನಾಯಕರು ಉರಿದುರಿದು ಬೀಳ್ತಿದ್ರೆ, ದಳ ಕಾರ್ಯಕರ್ತರು ಪ್ರತಿಭಟನೆಗೆ ರಣಕಹಳೆ ಮೊಳಗಿಸಿದ್ದಾರೆ. ಇನ್ನೊಂದೆಡೆ ರಾಜ್ಯ ಒಕ್ಕಲಿಗರ ಸಂಘಟ ಸಹ ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದು, ಸಚಿವ ಸ್ಥಾನದಿಂದ ಜಮೀರ್ ಅಹಮ್ಮದ್ ಖಾನ್ ಅವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಒಕ್ಕಲಿಗರ ಸಂಘ, ಕುಮಾರಸ್ವಾಮಿ ಕರಿಯ ಎಂದು ಜಮೀರ್ ಅಹ್ಮದ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಮೂಲಕ ಜಮೀರ್ ಕ್ಷಮೆ ಕೇಳಲು ಒತ್ತಾಯಿಸಿದೆ. ಅಲ್ಲದೇ ಸಚಿವ ಸ್ಥಾನದಿಂದ​ ವಜಾ ಮಾಡಬೇಕೆಂದು ಆಗ್ರಹಿಸಿದೆ.

ಇದನ್ನೂ ಓದಿ: ಹೆಚ್​​ಡಿ ಕುಮಾರಸ್ವಾಮಿಗೆ ಕರಿಯ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಜಮೀರ್​​​

ಇನ್ನು ಜಮೀರ್​ ಮಾತನ್ನ ಕಾಂಗ್ರೆಸ್​ ನಾಯಕರು ಸಮರ್ಥಿಸಿಕೊಳ್ಳುತ್ತ ಪ್ರೀತಿಯ ಅಸ್ತ್ರ ಹೂಡಿದ್ದಾರೆ.. ಡಿಕೆ, ಪರಮೇಶ್ವರ್​, ಈಶ್ವರ್​ ಖಂಡ್ರೆ ಮಾತನಾಡಿ ಆತ್ಮೀಯತೆಯಿಂದ ಕರೆಯುತ್ತಾರೆ ಎಂದು ಹೇಳಿದ್ದಾರೆ.

ಜಮೀರ್ ವಿರುದ್ಧ ಪ್ರತಿಭಟನೆ

ಕುಮಾರಸ್ವಾಮಿಗೆ ಕರಿಯಾ ಎಂದಿದ್ದರ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಪ್ರತಿಭಟನೆಗಳು ನಡೆಗಳು ನಡೆದಿವೆ. ನಾಯಕರ ವಾಕ್ಸಮರಗಳ ನಡುವೆ ಮೈಸೂರು, ಮಂಡ್ಯ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಚಿವ ಜಮೀರ್​ ವಿರುದ್ಧ ಜೆಡಿಎಸ್-ಬಿಜೆಪಿ​​ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಜಮೀರ್ ಫೋಟೋ ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.

ಕ್ಷಮೆಯಾಚಿಸಿದ ಜಮೀರ್

ಕುಮಾರಸ್ವಾಮಿಗೆ ಕರಿಯಾ ಎಂದಿದ್ದರ ಬಗ್ಗೆ ನಿನ್ನೆಯಷ್ಟೇ ಜಮೀರ್ ಸ್ಪಷ್ಟನೆ ಕೊಟ್ಟು ಸಮರ್ಥನೆ ಮಾಡಿಕೊಂಡಿದ್ರು.. ಆದ್ರೆ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಜೋರಾಗುತ್ತಿದ್ದಂತೆಯೇ ಜಮೀರ್  ನೇರವಾಗಿ ತಮ್ಮ ಮಾತಿಗೆ ಕ್ಷಮೆ ಕೇಳಿದ್ದಾರೆ. ನನ್ನ ಮಾತಿನಿಂದ ಯಾರಿದ್ರೂ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ನಾನು ಮೊದಲ ಬಾರಿ ಈ ರೀತಿ ಹೇಳಿಲ್ಲ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:08 pm, Tue, 12 November 24