ಮಂತ್ರಿಯಾದವನಿಗೆ ಸಂಸ್ಕಾರವಿರಬೇಕು ಜಮೀರ್ ಅಹ್ಮದ್​ಗೆ ಅದಿಲ್ಲ: ವಿ ಸೋಮಣ್ಣ

ಮಂತ್ರಿಯಾದವನಿಗೆ ಸಂಸ್ಕಾರವಿರಬೇಕು ಜಮೀರ್ ಅಹ್ಮದ್​ಗೆ ಅದಿಲ್ಲ: ವಿ ಸೋಮಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2024 | 5:38 PM

ಜಮೀರ್ ಅಹ್ಮದ್​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ, ಕುಮಾರಸ್ವಾಮಿ ಇಲ್ಲದಿದ್ದರೆ ಅವರು ಬಸ್ಸಿನ ವ್ಯವಹಾರ ನೋಡಿಕೊಂಡಿರಬೇಕಾಗುತಿತ್ತು, ಮಂತ್ರಿಯಾದವರಿಗೆ ಸಂಸ್ಕಾರ ಬೇಕು, ಜಮೀರ್ ಈ ಮಟ್ಟಕ್ಕೆ ಬೀಳುತ್ತಾರೆಂಬ ನಿರೀಕ್ಷೆ ಖಂಡಿತವಾಗಿಯೂ ತನಗಿರಲಿಲ್ಲ ಎಂದು ಸೋಮಣ್ಣ ಹೇಳಿದರು.

ನೆಲಮಂಗಲ: ತುಮಕೂರಿಂದ ಬೆಂಗಳೂರಿಗೆ ವಾಪಸ್ಸು ಹೋಗುವಾಗ ನೆಲಮಂಗಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನು ಯಾರೊಂದಿಗೂ ಕಂಪೇರ್ ಮಾಡಲಾಗಲ್ಲ, ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿ ಅದರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ, ಸತ್ಯಗಾಲದಿಂದ ನೀರು ತಂದು ಕೆರೆಗಳನ್ನು ತುಂಬಿಸಿದ್ದಾರೆ, ಜಮೀರ್ ಅಹ್ಮದ್ ಬಾಯಿಗೆ ಬಂದಂತೆ ಮಾತಾಡುತ್ತಾರೆ, ಹೇಳೋರಿಲ್ಲ ಕೋಳೋರಿಲ್ಲ, ರಾಜ್ಯ ಸರ್ಕಾರ ಸತ್ತ ಹೆಣದಂತಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸರ್ಕಾರದ ತೊಳಲಾಟವನ್ನು ಹೊರಹಾಕಿದ ಶಿವಕುಮಾರ್​ರನ್ನು ಅಭಿನಂದಿಸುತ್ತೇನೆ: ವಿ ಸೋಮಣ್ಣ