ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹಳ್ಳಿ ಹೈದ ಹನುಮಂತ ಸಿಟಿಗೆ ಬಂದರೂ ಗ್ರಾಮೀಣ ಭಾಗದ ಉಡುಗೆ-ತೊಡುಗೆ ಬಿಟ್ಟಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಅವರು ಪಂಚೆ ಧರಿಸಿಯೇ ಆಟ ಆಡುತ್ತಿದ್ದಾರೆ. ಈಗ ಅವರ ಜೊತೆ ನಟಿ ಗೌತಮಿ ಜಾದವ್ ಕೂಡ ಪಂಜೆ ಧರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಮತ್ತು ಗೌತಮಿ ಜಾಧವ್ ಅವರು ಜೋಡಿ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ‘ಜೋಡಿ ಟಾಸ್ಕ್’ ನೀಡಲಾಗಿದೆ. ಇದರ ಅನುಸಾರ ಗೌತಮಿ ಜಾದವ್ ಮತ್ತು ಹನುಮಂತ ಅವರು ಜೋಡಿಯಾಗಿ ಆಟ ಆಡುತ್ತಿದ್ದಾರೆ. ಅವರ ಕಾಸ್ಟ್ಯೂಮ್ ಕೂಡ ಒಂದೇ ರೀತಿಯಲ್ಲಿ ಇದೆ. ಹನುಮಂತನ ರೀತಿಯೇ ಗೌತಮಿ ಜಾದವ್ ಕೂಡ ಪಂಜೆ ಧರಿಸಿರುವುದು ವಿಶೇಷ. ನವೆಂಬರ್ 12ರ ಸಂಚಿಕೆಯ ಪ್ರೋಮೋ ಇಲ್ಲಿದೆ. ಹನುಮಂತ ಮತ್ತು ಗೌತಮಿ ಜಾದವ್ ಅವರ ವೇಷ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಪಂಜೆ ಧರಿಸಿದ ಬಳಿಕ ಗೌತಮಿ ಅವರು ಹನುಮಂತನ ರೀತಿಯೇ ವರ್ತಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos