
ಬೆಂಗಳೂರು: ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಆರ್.ಆರ್.ನಗರದ 678 ಮತಗಟ್ಟೆಗಳಲ್ಲಿ ಮತದಾನ ಶುರುವಾಗಿದ್ದು, ಶಿರಾದ 330 ಮತಗಟ್ಟೆಗಳಲ್ಲೂ ಮತದಾನ ನಡೆಯುತ್ತಿದೆ. ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸ್ತಿದ್ದಾರೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಹಾಗೂ ಸಂಜೆ 5ರಿಂದ ಸಂಜೆ 6 ಗಂಟೆವರೆಗೆ ಸೋಂಕಿತರಿಗೆ ಮತ ಹಾಕಲು ಅವಕಾಶ ನೀಡಲಾಗುತ್ತೆ. ಎರಡೂ ಕ್ಷೇತ್ರಗಳಲ್ಲಿ ಮತದಾನ ಈಗ ಆರಂಭವಾಗಿದ್ದರೂ ಆಗಲೇ ಆರ್.ಆರ್.ನಗರ ಕ್ಷೇತ್ರದ ಒಂದು ಬೂತ್ನಲ್ಲಿ ಅವ್ಯವಸ್ಥೆ ಕಂಡು ಬಂದಿದೆ.
ಹೆಚ್ಎಂಆರ್ ಕಾನ್ವೆಂಟ್ನ ಬೂತ್ನಲ್ಲಿ ಕರೆಂಟ್ ಕಟ್ ಆಗಿದೆ. ವಿದ್ಯುತ್ ಇಲ್ಲದೇ ಮೇಣದ ಬತ್ತಿ ಬಳಸಿ ಮತದಾನಕ್ಕೆ ಸಿಬ್ಬಂದಿ ಸಿದ್ಧತೆ ನಡೆಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮತ ಹಾಕೋ ಬೂತ್ ಇದು. ಸದ್ಯ ಬೆಂಗಳೂರಿನ ಜ್ಞಾನಭಾರತಿ ವಾರ್ಡ್‌ನಲ್ಲಿರುವ ಹೆಚ್ಎಂಆರ್ ಕಾನ್ವೆಂಟ್ ಮತಗಟ್ಟೆಯಲ್ಲಿ ಕುಟುಂಬಸ್ಥರ ಜತೆ ಆಗಮಿಸಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮತದಾನ ಮಾಡಿದ್ದಾರೆ.