ಬಾಗಲಕೋಟೆ: ಕಡಿದು ಹಾಕಿದ್ದ 43 ಮೆಟ್ರಿಕ್ ಟನ್ ಕಬ್ಬನ್ನು ಒಂದೇ ರಾತ್ರಿಯಲ್ಲಿ ಟ್ರ್ಯಾಕ್ಟರ್ನಲ್ಲಿ ಹೇರುವ ಮೂಲಕ ಕೂಲಿ ಕಾರ್ಮಿಕರೊಬ್ಬರು ಸಾಹಸ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ.
ಕಬ್ಬು ಕಡಿಯುವ ಗ್ಯಾಂಗ್ನಲ್ಲಿ ಕೂಲಿ ಕೆಲಸ ಮಾಡುವ ಶ್ರೀನಿವಾಸ ನಾಯಕ ಎನ್ನುವ 21 ವರ್ಷದ ಯುವಕ ಈ ಸಾಹಸ ಮಾಡಿದ್ದಾರೆ. ಶ್ರೀನಿವಾಸ ಅವರು ರಾತ್ರಿ 11.50 ಕ್ಕೆ ಕಬ್ಬು ಹೇರುವ ಕೆಲಸವನ್ನು ಆರಂಭಿಸಿ, ಬೆಳಗ್ಗೆ 6.20 ರವರೆಗೆ ಮೂರು ಟ್ರ್ಯಾಲಿಗಳಲ್ಲಿ ಒಟ್ಟು 43 ಟನ್ ಕಬ್ಬು ಲೋಡ್ ಮಾಡಿದ್ದಾರೆ.
ಗ್ರಾಮದ ಶ್ರೀನಿವಾಸ ಲೆಂಡಿ ಎನ್ನುವ ರೈತರ ಜಮೀನಿನಲ್ಲಿ ಕಡಿದು ಹಾಕಿದ್ದ ಕಬ್ಬನ್ನು ಕಾರ್ಮಿಕರಾದ ಶ್ರೀನಿವಾಸ ಹೊತ್ತುಕೊಂಡು ಟ್ರ್ಯಾಕ್ಟರ್ನಲ್ಲಿ ಹಾಕಿದ್ದು, ಈ ಹಿಂದೆ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಒಂದು ರಾತ್ರಿಯಲ್ಲಿ 34 ಟನ್ ಕಬ್ಬು ಲೋಡ್ ಮಾಡಿದ್ದರು. ಆದರೆ ಈಗ ಈ ದಾಖಲೆ ಮುರಿಯಲು ಶ್ರೀನಿವಾಸ 43 ಟನ್ ಕಬ್ಬು ಲೋಡ್ ಮಾಡಿ, ಕಬ್ಬಿನ ಗ್ಯಾಂಗ್ನವರಿಂದ ಶಹಬ್ಬಾಸ್ಗಿರಿ ಪಡೆದಿದ್ದಾರೆ.
ಕಬ್ಬು ಕಟಾವು ಕಾರ್ಮಿಕರ ಅಲೆದಾಟ, ಶಿಕ್ಷಣವಿಲ್ಲದೆ ಮಕ್ಕಳ ಭವಿಷ್ಯ ಅತಂತ್ರ..!
Published On - 12:32 pm, Tue, 19 January 21