ಮಂಡ್ಯ: ‘ಕೆಆರ್‌ಎಸ್ ಅಣೆಕಟ್ಟೆ ಬಿರುಕುಬಿಟ್ಟಿದೆ ಎಂದು ಆರೋಪಿಸಿ, ಅದರ ಸಮ್ಮುಖದಲ್ಲಿ ಕಾವೇರಿ ಕಣಿವೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ವಿಚಾರವನ್ನು ಮುನ್ನೆಲೆಗೆ ತಂದುಬಿಟ್ಟು… ಸ್ಥಳೀಯ ಗಣಿ ಉದ್ಯಮಿಗಳನ್ನು ಹರಾಜಿಗೆ ಇಟ್ಟ ಪ್ರಸಂಗ ಇತ್ತೀಚೆಗೆ ಕಂಡುಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಕೇಳಿಬಂದಿರುವ ಆರೋಪ-ಪ್ರತ್ಯಾರೋಪಗಳಿಂದ ಗಣಿ ಮಾಲೀಕರು ವಿಚಲಿತರಾದಂತೆ ಕಂಡುಬಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಮಂಡ್ಯದಲ್ಲಿ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕು ವ್ಯಾಪ್ತಿಯ ಗಣಿ ಮಾಲೀಕರು ಸಭೆ ನಡೆಸಿ, ಪ್ರಸಕ್ತ ಗಣಿ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಮಂಡ್ಯದಲ್ಲಿ ಖಾಸಗಿ ಸಮುದಾಯ ಭವನದಲ್ಲಿ ಗಣಿ ಮಾಲೀಕರ ಸಭೆ ನಡೆದಿದೆ. ನಮ್ಮನ್ನು ಬದುಕಲು ಬಿಡಿ. ನಾವು ರಾಜಧನ ಕಟ್ಟುತ್ತಿದ್ದೇವೆ ಎನ್ನುತ್ತಿದ್ದಾರೆ ಮಾಲೀಕರು. ಗಣಿ ಮಾಲೀಕ ಎಂ.ಪಿ. ನೃಪತುಂಗ ಅವರು ಮಾತನಾಡಿ ರಾಜಧನ ಕಟ್ಟುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಕ್ರಷರ್ ಮಾಲೀಕರು 80 % ನೋಂದಾಯಿತ ಗುತ್ತಿಗೆದಾರರು. ಇವರು ರಾಜಧನವನ್ನು ಕಟ್ಟೇ ಕಟ್ಟುತ್ತಾರೆ. 95% ರಾಜಧನ ಸರ್ಕಾರಕ್ಕೆ ಜಮೆ ಆಗುತ್ತಿದೆ. ತಾಂತ್ರಿಕವಾಗಿ ಇದು ಎಲ್ಲೂ ಸಹ ಡಿಸ್ಕಸ್ ಆಗುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ 5,000 ಗಾಡಿಗಳು ಇವೆ. ಸರ್ಕಾರದ ಕಾಮಗಾರಿಗಳಿಗೆ ಎಷ್ಟು ಪ್ರಮಾಣದ ಕಲ್ಲು ಬೇಕು ಅಷ್ಟು ಮಾತ್ರ ತೆಗೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮಗೆ ಕುಮಾರಣ್ಣನು ಗೊತ್ತಿಲ್ಲ, ಸುಮಲತಾ ಅವರೂ ಗೊತ್ತಿಲ್ಲ. ನಮಗೆ ದುಡಿಮೆಯೇ ದೇವರು. ಕೆಆರ್‌ಎಸ್ ವಿಚಾರವಾಗಿ 2018 ರಲ್ಲಿ ಬಂದಿರುವುದು ಒಂದೇ ವರದಿ. ಇನ್ನೂ ಮೂರು ಬಾರಿ ವರದಿಯನ್ನು ನೀಡಬೇಕು. ಕೆಆರ್‌ಎಸ್‌ಗಿಂತ ನಮಗೆ ದೊಡ್ಡದು ಏನೂ ಇಲ್ಲ. ಕೆಆರ್‌ಎಸ್‌ನಲ್ಲಿ ಬಿರುಕು ಇದ್ದಿದ್ರೆ ಇಷ್ಟೊತ್ತಿಗೆ ಇರುತ್ತಿರಲಿಲ್ಲ. ಇವೆಲ್ಲವೂ ಇಲ್ಲ ಸಲ್ಲದ ಆರೋಪಗಳು. ನಮ್ಮನ್ನು ಬದುಕಲು ಬಿಡಿ, ನಮಗೊಂದು ಅವಕಾಶ ಕೊಡಿ ಬದುಕಲು. ನಾವು ನಡೆಸುತ್ತಿರುವುದು ಸಕ್ರಮ ಮೈನ್ಸ್ ಎಂದು ಗಣಿ ಮಾಲೀಕರು ತಿಳಿಸಿದ್ದಾರೆ.
ಕೆಆರ್‌ಎಸ್ ಒಡೆದಿಲ್ಲ ಅಂತಿದ್ದಾರೆ ಅಧಿಕಾರಿಗಳು, ಈಗಲಾದರೂ ಕ್ಷಮೆ ಕೇಳಿ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ -ದಳಪತಿಗಳಿಂದ ಹಸಿರು ಬಾವುಟ
(We are not indulging in Illegal Mining pay royalty says Mining Owners in Mandya District)
Published On - 1:28 pm, Sat, 10 July 21