India-Pakistan War Updates; ಯುದ್ಧದ ಸನ್ನಿವೇಶ ಉಂಟಾದರೆ ತಯಾರಿಗಳನ್ನು ಮಾಡಿಕೊಳ್ಳುವ ಬಗ್ಗೆ ಕೇಂದ್ರದಿಂದ ಸೂಚನೆ ಬಂದಿದೆ: ಪರಮೇಶ್ವರ್

Updated on: May 10, 2025 | 12:50 PM

ಪ್ರತಿಯೊಂದು ಜಿಲ್ಲೆಯನ್ನು ಸೆನ್ಸಿಟೈಸ್ ಮಾಡಬೇಕಿದೆ ಮತ್ತು ಇದೇ ದಿಶೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಸಾಯಂಕಾಲ 4 ಗಂಟೆಗೆ ಸಭೆಯೊಂದನ್ನು ಕರೆದಿದ್ದಾರೆ, ಇದರಲ್ಲಿ ಗೃಹ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ, ಯುದ್ಧ ಶುರುವಾದರೆ ಅಗತ್ಯ ವಸ್ತುಗಳನ್ನು ಹೇಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಅನ್ನೋದನ್ನು ಅವರು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು, ಮೇ 10: ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwar), ಭಾರತದ ಗಡಿಭಾಗದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು ನಿಲ್ಲದಿದ್ದರೆ ಯುದ್ಧದಂಥ ಸನ್ನಿವೇಶ ನಿರ್ಮಾಣವಾಗಬಹುದು, ಹಾಗಾಗಿ ಅಂಥ ಸನ್ನಿವೇಶಕ್ಕೆ ಸಿದ್ಧವಾಗಿರಿ ಮತ್ತು ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಿ ಅಂತ ಕೇಂದ್ರದಿಂದ ಸೂಚನೆ ಬಂದಿದೆ ಎಂದು ಹೇಳಿದರು. ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದೆ ಎಂದು ಗೃಹ ಸಚಿವ ಹೇಳಿದರು.

ಇದನ್ನೂ ಓದಿ:  Operation Sindoor Live : ಪಹಲ್ಗಾಮ್ ದಾಳಿಗೆ ಭಾರತದ ಪ್ರತೀಕಾರ, ಇಲ್ಲಿಯವರೆಗೆ ಏನೇನಾಯ್ತು? ಇಲ್ಲಿದೆ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ