ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಜನಕ್ಕೂ ಒಳ್ಳೆಯದು ನಮಗೂ ಒಳ್ಳೆಯದು: ಕೃಷ್ಣ ಭೈರೇಗೌಡ
ತನ್ನ ಕೆಲಸ ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ತಾನು ಮಾತಾಡಲ್ಲ ಎಂದ ಸಚಿವ ಕೃಷ್ಣ ಭೈರೇಗೌಡ, ಮಾಡಲು ಬೇಕಾದಷ್ಟು ಕೆಲಸವಿದೆ, ಜನರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಶೇಕಡ 5ರಷ್ಟನ್ನು ಬಗೆಹರಿಸಿದರೂ ಕೆಲಸ ಮಾಡಿದ ಸಂತೃಪ್ತಿ ಸಿಗುತ್ತದೆ ಬದುಕು ಸಾರ್ಥಕ ಅನಿಸುತ್ತದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಮೈಸೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು ಮೈಸೂರಲ್ಲಿದ್ದರು. ಸಭೆಯೊಂದರಲ್ಲಿ ಭಾಗವಹಿಸುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ವಿನಾಕಾರಣ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುತ್ತಿರುವ ಮತ್ತು ವಿರೋಧ ಪಕ್ಷದ ನಾಯಕರಿಗೆ ಟೀಕಿಸುವ ಅವಕಾಶ ಕಲ್ಪಿಸುತ್ತಿರುವ ತಮ್ಮ ಪಕ್ಷದ ನಾಯಕರಿಗೆ ಸಲಹೆ ಮತ್ತು ಕಿವಿಮಾತು ಹೇಳಿದರು. ಸರ್ಕಾರದ ಭಾಗವಾಗಿರುವವರೆಲ್ಲ ವೃಥಾ ಹೇಳಿಕೆಗಳನ್ನು ನೀಡದೆ ತಮಗಿರುವ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಜನಸೇವೆಯಲ್ಲಿ ತೊಡಗಿದರೆ ಅದು ತಮಗೂ ಒಳ್ಳೆಯದು ಮತ್ತು ಸರ್ಕಾರಕ್ಕೂ ಒಳ್ಳೆಯದು ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಎಚ್ಚರಿಕೆ ನೀಡಿದ ನಂತರವೂ ಮಂತ್ರಿಗಳು ಮಾತಾಡುವುದನ್ನು ಮುಂದುವರಿಸಿದ್ದಾರಲ್ಲ? ಅಂತ ಕೇಳಿದ ಪ್ರಶ್ನೆಗೆ ಅವರು, ಪಕ್ಷದ ವರಿಷ್ಠರು ಎಲ್ಲವನ್ನು ಗಮನಿಸುತ್ತಿದ್ದಾರೆ, ಅವರು ತಾಳ್ಮೆಯಿಂದ ಎಲ್ಲ ಸಂಗತಿಗಳನ್ನು ಅವಲೋಕಿಸುತ್ತಿದ್ದಾರೆ, ಒಮ್ಮೆ ಅವರು ಕ್ರಮ ಜರುಗಿಸಲು ಅರಂಭಿಸಿದರೆ ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುವವರು ಸಮಸ್ಯೆಗೀಡಾಗಲಿದ್ದಾರೆ ಎಂದು ಕೃಷ್ಣ ಭೈರೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬರ ಪರಿಹಾರ ನಿಧಿ ಬಿಡುಗಡೆ ವಿಳಂಬ; ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆ ಬಗ್ಗೆ ಕೃಷ್ಣ ಭೈರೇಗೌಡ ವಿವರಣೆ