ವೈರ್ಲೆಸ್ ಇನ್ಸ್ಪೆಕ್ಟರ್ ಶವ ಕಲಬುರಗಿಯಲ್ಲಿ ರೈಲ್ವೆ ಹಳಿ ಮೇಲೆ ಪತ್ತೆ
ವೈರ್ಲೆಸ್ ವಿಭಾಗದಲ್ಲಿ ಇನ್ಸ್ಪೆಕ್ಟರ್ (Inspector) ಆಗಿದ್ದ ಬಾಪುಗೌಡ ಎಂಬುವವರ ಶವ ಕಲಬುರಗಿ(Kalaburagi)ಯ ಬಿದ್ದಾಪೂರ ಕಾಲೋನಿ ಬಳಿಯ ರೈಲು ಹಳಿ ಮೇಲೆ ಪತ್ತೆಯಾಗಿದೆ. ಕಳೆದ ಕೆಲ ದಿನಗಳಿಂದ ಮೌತ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಈ ಕಾಯಿಲೆಯಿಂದಲೇ ಮಾನಸಿಕವಾಗಿ ನೊಂದು ಡಿಪ್ರೆಷನ್ ಗೊಳಗಾಗಿದ್ದರು ಎನ್ನಲಾಗಿದೆ.
ಕಲಬುರಗಿ, ಜು.02: ಕಲಬುರಗಿ(Kalaburagi)ಯ ಬಿದ್ದಾಪೂರ ಕಾಲೋನಿ ಬಳಿಯ ರೈಲು ಹಳಿ ಮೇಲೆ ಇನ್ಸ್ಪೆಕ್ಟರ್ರೊಬ್ಬರ ಶವ ಪತ್ತೆಯಾಗಿದೆ. ಅವರನ್ನು ವೈರ್ಲೆಸ್ ವಿಭಾಗದಲ್ಲಿ ಇನ್ಸ್ಪೆಕ್ಟರ್ (Inspector) ಆಗಿದ್ದ ಬಾಪುಗೌಡ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳಿಂದ ಮೌತ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು, ಈ ಕಾಯಿಲೆಯಿಂದಲೇ ಮಾನಸಿಕವಾಗಿ ನೊಂದು ಡಿಪ್ರೆಷನ್ ಗೊಳಗಾಗಿದ್ದರು. ಇದೇ ಕಾರಣಕ್ಕೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದಾಗ್ಯೂ ಸಾವಿಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ರೈಲ್ಬೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಶವವನ್ನ ಕಲಬುರಗಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ವಿದ್ಯುತ್ ವೈರ್ ತುಂಡಾಗಿ ಬಿದ್ದು ಬೈಕ್ ಸವಾರ ಸಾವು
ಬೆಳಗಾವಿ: ವಿದ್ಯುತ್ ವೈರ್ ತುಂಡಾಗಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಾದರವಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗಯ್ಯ ವನ್ನೂರ(32) ಮೃತ ಬೈಕ್ ಸವಾರ. ಬೈಕ್ನಲ್ಲಿ ಜಮೀನಿಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ
ಬಸ್ ಹತ್ತುವ ವೇಳೆ ಕಟ್ಟಾದ ಡೋರ್ ಲಾಕ್; ಮಹಿಳೆಗೆ ಗಂಭೀರ ಗಾಯ
ಚಿಕ್ಕಮಗಳೂರು: ತಾಲೂಕಿನ ಐದಳ್ಳಿ ಗ್ರಾಮದ ಬಳಿ ಸರ್ಕಾರಿ ಬಸ್ ಹತ್ತುವ ವೇಳೆ ಡೋರ್ ಲಾಕ್ ತುಂಡಾಗಿ ಬಿದ್ದು ಮಹಿಳೆಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಐದಳ್ಳಿ ಗ್ರಾಮದ ಶಕುಂತಲಮ್ಮ ಗಂಭೀರ ಗಾಯವಾದ ಮಹಿಳೆ. ಅವರನ್ನು ಆಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಇದಾಗಿದ್ದು, ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ