ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಶವವಾಗಿ ಪತ್ತೆ ಆಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದ ಬಾವಿಯಲ್ಲಿ ಶವ ಪತ್ತೆ ಆಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಪಿಸಿ ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ
ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:Jul 01, 2024 | 6:25 PM

ಬೆಂಗಳೂರು, ಜೂನ್​ 01: ನಗರದ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದ ಬಾವಿಯಲ್ಲಿ ಪೊಲೀಸ್ ಕಾನ್ಸ್​ಟೇಬಲ್ (police constable)​ ಶವ ಪತ್ತೆ (dead body) ಆಗಿರುವಂತಹ ಘಟನೆ ನಡೆದಿದೆ. ಮಡಿವಾಳ ಠಾಣೆಯ ಕಾನ್ಸ್​ಟೇಬಲ್ ಶಿವರಾಜ್(29) ಮೃತ ವ್ಯಕ್ತಿ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಕಾನ್ಸ್​ಟೇಬಲ್ ಶಿವರಾಜ್ ಜೂ.26ರಂದು ಮನೆಯಿಂದ ನಾಪತ್ತೆಯಾಗಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

3 ತಿಂಗಳ ಹಿಂದೆ ದಾವಣಗೆರೆ ಮೂಲದ ಭಾಗ್ಯ ಎಂಬುವವರನ್ನು ಶಿವರಾಜ್ ವಿವಾಹವಾಗಿದ್ದರು. ಶಿವರಾಜ್ ಅಣ್ಣನ ಮಗನಿಗೆ 2 ವರ್ಷದ ಹಿಂದೆ ವಾಣಿ ಎಂಬಾಕೆ ಜತೆ ಮದುವೆಯಾಗಿತ್ತು. ಬಳಿಕ ಕೌಟುಂಬಿಕ ಕಲಹದಿಂದ ವಾಣಿ ಮತ್ತು ಪತಿ ದೂರವಾಗಿದ್ದರು. ಇದೇ ಕಾರಣಕ್ಕೆ ಶಿವರಾಜ್ ಬಗ್ಗೆ ವಾಣಿ ಕೆಟ್ಟದಾಗಿ ಮಾತಾಡುತ್ತಿದ್ದರು. ಜಾಲತಾಣದಲ್ಲೂ ವಿರುದ್ಧ ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಶಿವರಾಜ್ ಸಾಕಷ್ಟು ನೊಂದಿದ್ದರು.

ಮೃತ ಶಿವರಾಜ್​ನ ಇಡೀ ಕುಟುಂಬದ ವಿರುದ್ಧ ವಾಣಿ ದಾವಣಗೆರೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. ದಾವಣಗೆರೆ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ನೀಡಿದ ಬಳಿಕ ಮತ್ತೆ ಶಿವರಾಜ್​ಗೆ ವಾಣಿ ಬೆದರಿಕೆ ಹಾಕಿದ್ದರು.

ಇದನ್ನೂ ಓದಿ: ಹಾಸನ ಎಸ್​ಪಿ ಕಚೇರಿ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದು ಕೊಂದ ಕಾನ್ಸ್ಟೇಬಲ್

ವಾಣಿ ಕಿರುಕುಳದಿಂದ ಶಿವರಾಜ್ ಬೇಸತ್ತಿದ್ದನೆಂದು, ಕರ್ತವ್ಯಕ್ಕೆ ತೆರಳಿದ್ದ ಪಿಸಿ ಶಿವರಾಜ್ ನಾಪತ್ತೆ ಎಂದು ಶಿವರಾಜ್ ಸಂಬಂಧಿಕರಿಂದ ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಲಾಗಿತ್ತು. ಎಫ್​ಐಆರ್​ ದಾಖಲಿಸಿಕೊಂಡು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.

ಕಾರು ಮತ್ತು ಬೈಕ್ ನಡುವೆ ಅಪಘಾತ: ಸವಾರ ಸಾವು 

ಕೊಪ್ಪಳ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವಂತ ಘಟನೆ ಕಾರಟಗಿ ಪಟ್ಟಣದ ನವ್ಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ರಾಜು (45) ಮೃತ ಬೈಕ್ ಸವಾರ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರ ನಿವಾಸಿ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಗ್ಯಾಂಗ್​ವಾರ್​ಗೆ ನಡೆದಿದ್ಯಾ ತಯಾರಿ? ಕೊಲೆ ಸಂಚು ಆರೋಪದಡಿ ಕೇಸ್ ಬುಕ್

ಕಾರಟಗಿ ತಾಲೂಕಿನ ಯರಡೋಣ ಗ್ರಾಮಕ್ಕೆ ಮಗಳ ಮನೆಗೆ ಹೊರಟಿದ್ದರು. ಬೈಕ್​ಗೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ರಾಜು ಮೃತಪಟ್ಟಿದ್ದಾರೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:36 pm, Mon, 1 July 24