ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀಯಾ? ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2022 | 8:00 PM

ಸಾರಿಗೆ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಡಲಿಲ್ಲ ಎಂದು ಹೇಳಿದ್ದಾರೆ.

ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀಯಾ? ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ
ಶ್ರೀರಾಮುಲು, ಸಿದ್ದರಾಮಯ್ಯ
Follow us on

ಗದಗ: ಸಾರಿಗೆ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಎಲ್ಲವೂ ಗೊತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಡಲಿಲ್ಲ ಎಂದು ಹೇಳಿದ್ದಾರೆ.

ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಅಂತಾ ಇದೆ. ಇದನ್ನು ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇವತ್ತು ಎಸ್​​ಸಿ, ಎಸ್​ಟಿಗೆ ಬಿಜೆಪಿ ಸರ್ಕಾರ ಮೀಸಲಾತಿ ಕೊಟ್ಟಿದೆ. ನಮ್ಮ ಸರ್ಕಾರ ಕೊಟ್ಟ ಬಳಿಕ ಏನೇನೋ ಹೇಳ್ತಾ ಇದ್ದೀರಲ್ಲಾ, ಈಗ ನಿಮ್ಮ ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಜನ ನಿನ್ನ ಅಹಂಕಾರ ಇಳಿಸುವ ಕೆಲಸ ಮಾಡುತ್ತಾರೆ. ನೀನು ಅಧಿಕಾರದಲ್ಲಿದ್ದಾಗ ಏನು ಮಾಡಿದೆ ಎಂದು ನಮಗೆ ಗೊತ್ತಾ ಎಂದು ಸಚಿವ ಶ್ರೀರಾಮುಲು ಗದಗನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

ರಾಮುಲು ಎಲ್ಲಿದ್ರು ಅಂತಾ ಗೋತ್ತಿಲ್ಲಾ, ನೀನು ಅಧಿಕಾರದಲ್ಲಿದ್ದಾಗ ಏನು? ಮಾಡಿದ್ದೀಯಾ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿಯಾ..? ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಹೇಳಿದ್ದಾರೆ. ಜನರು ನಿನ್ನನ್ನೂ ತಿರಸ್ಕಾರ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿನ್ನ ಅಹಂಕಾರ ಜಾಸ್ತಿಯಾದ್ರೆ ಖಂಡಿತ ನೀನು ಮನೆಗೆ ಹೋಗುತ್ತೀಯಾ ನಿನ್ನ ಅಹಂಕಾರವನ್ನು ಚುನಾವಣೆಯಲ್ಲಿ ಜನರು ಇಳಿಸುವ ಕೆಲಸ ಮಾಡುತ್ತಾರೆ. 220 ದಿನದ ಹೋರಾಟ ಅಲ್ಲಾ, ನಾಲ್ಕು ದಶಕಗಳ ಹೋರಾಟ ಇದು. ಅಂದು ನಾನು ಮೀಸಲಾತಿ ಕೊಡಿಸುತ್ತೇನೆ ಎಂದು ಮಾತು ಕೊಟ್ಟಿದೆ. ನನ್ನ ಸರ್ಕಾರ ಬಂದ್ ಮೇಲೆ ನಮ್ಮ ಸಿಎಂ ಮೀಸಲಾತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

Published On - 8:00 pm, Sat, 29 October 22