ಶಿಂಡೇನಹಳ್ಳಿಯಲ್ಲಿ ಅಪರೂಪದ ಬಿಳಿ ಗೂಬೆ ಮರಿಗಳ ರಕ್ಷಣೆ

| Updated By: ಆಯೇಷಾ ಬಾನು

Updated on: Jan 22, 2021 | 8:38 AM

ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್​ಲ್ಲಿದ್ದ ಅಪರೂಪದ ಬಿಳಿ ಗೂಬೆ‌ ಮರಿಗಳನ್ನು ಹೆಚ್​. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.

ಶಿಂಡೇನಹಳ್ಳಿಯಲ್ಲಿ ಅಪರೂಪದ ಬಿಳಿ ಗೂಬೆ ಮರಿಗಳ ರಕ್ಷಣೆ
ಬಿಳಿ ಗೂಬೆ ಮರಿಗಳನ್ನು ರಕ್ಷಿಸಿದ ಉರಗ ಸಂರಕ್ಷಕ ಸೂರ್ಯ ಕೀರ್ತಿ
Follow us on

ಮೈಸೂರು: ರೈತ ಚಂದ್ರಮೌಳಿ ಅವರ ಫಾರ್ಮ್ ಹೌಸ್​ಲ್ಲಿದ್ದ ಅಪರೂಪದ ಬಿಳಿ ಗೂಬೆ‌ ಮರಿಗಳನ್ನು ಹೆಚ್​. ಡಿ ಕೋಟೆ ತಾಲ್ಲೂಕಿನ ಶಿಂಡೇನಹಳ್ಳಿ ಗ್ರಾಮದ ಉರಗ ಸಂರಕ್ಷಕ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.

ತಾಯಿ ಸಾವನ್ನಪ್ಪಿದ ನಂತರ ಮರಿಗಳು ಅನಾಥವಾಗಿದ್ದವು. ಮರಿಗಳು ಸ್ವತಂತ್ರವಾಗಿ ಬದುಕುವ ತನಕ ಅವುಗಳಿಗೆ ರಕ್ಷಣೆ ನೀಡಿ, ನಂತರದಲ್ಲಿ ಮರಿಗಳನ್ನು ಅದರ ಸ್ವಸ್ಥಾನಕ್ಕೆ ಬಿಡಲು ಶಿಂಡೇನಹಳ್ಳಿಯ ಸ್ನೇಕ್​ ಶ್ಯಾಂ ಅವರ ಪುತ್ರ ಸೂರ್ಯ ಕೀರ್ತಿ ಮುಂದಾಗಿದ್ದಾರೆ.

ಅಪರೂಪದ ಬಿಳಿ ಗೂಬೆ ಮರಿಗಳು

ಮೈಸೂರಿನಲ್ಲಿ ಪುನುಗು ಬೆಕ್ಕು ರಕ್ಷಣೆ:

ಆಹಾರ ಅರಸಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದದಿಂದ ಬಂದಂತಹ ಪುನುಗು ಬೆಕ್ಕನ್ನು ರಕ್ಷಿಸಲಾಗಿದೆ. ಬೆಕ್ಕು ಬೆಟ್ಟದ ಪಾರ್ಕಿಂಗ್ ಜಾಗದಲ್ಲಿ ಸುಳಿದಾಡುತ್ತಿತ್ತು. ಇದನ್ನು ಕಂಡ ಸ್ನೇಕ್ ಕುಮಾರ್​ ಬೆಕ್ಕನ್ನು ಹಿಡಿದು ಮರಳಿ ಅದರ ವಾಸಸ್ಥಾನವಾದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

ಪುನುಗು ಬೆಕ್ಕು ರಕ್ಷಿಸಿ ಮರಳಿ ವಾಸಸ್ಥಾನಕ್ಕೆ ತಲುಪಿಸಿದ ಸ್ನೇಕ್ ಕುಮಾರ್

ಈ ಪ್ರಾಣಿ, ಪಕ್ಷಿಗಳು ಅಡ್ಡ ಬಂದ್ರೆ ಶುಭ ಶಕುನ ಎಂದೇ ತಿಳಿಯಿರಿ