Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರ ರಾಜ್ಯಾಧ್ಯಕ್ಷ: ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ದ್ವೇಷಿಸುವ ಬಿಜೆಪಿ ನಾಯಕರು ಈಗ್ಯಾಕೆ ಸುಮ್ಮನಿದ್ದಾರೆ? ಪ್ರಿಯಾಂಕ್ ಖರ್ಗೆ

ವಿಜಯೇಂದ್ರ ರಾಜ್ಯಾಧ್ಯಕ್ಷ: ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ದ್ವೇಷಿಸುವ ಬಿಜೆಪಿ ನಾಯಕರು ಈಗ್ಯಾಕೆ ಸುಮ್ಮನಿದ್ದಾರೆ? ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 11, 2023 | 2:33 PM

ಬಿಜೆಪಿ ವರಿಷ್ಠರು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೆ, ತಾನು ಮಲ್ಲಿಕಾರ್ಜುನ ಖರ್ಗೆ ಅವರ ಮಗನಾಗಿದ್ದರಿಂದ ರಾಜಕಾರಣದಲ್ಲಿ ಅವಕಾಶಗಳು ಸಿಗುತ್ತಿವೆ ಅಂತ ಹೇಳುತ್ತಾರೆ, ಅದರೆ ತಾನು ಯುವ ಕಾಂಗ್ರೆಸ್ಸಿಗನಾಗಿ ಪಟ್ಟ ಶ್ರಮವನ್ನು ತೇಜಸ್ವೀ ಸೂರ್ಯನಂಥವರು ಕಡೆಗಣಿಸುತ್ತಾರೆ ಎಂದು ಹೇಳಿದ ಖರ್ಗೆ, ಈಗ ಬಿಜೆಪಿ ನಾಯಕರಲ್ಲಿ ಉತ್ತರವಿದೆಯಾ? ಎಂದರು.

ಬೆಂಗಳೂರು: ಬಿವೈ ವಿಜಯೇಂದ್ರ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸಹ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮೊದಲಿಗೆ ವಿಜಯೇಂದ್ರ ಅವರನ್ನು ಅಭಿನಂದಿಸಿ ವಯಸ್ಸಿನಲ್ಲಿ ತನಗಿಂತ ನಾಲ್ಕೈದು ವರ್ಷ ದೊಡ್ಡವರಾಗಿರುವ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಬಿಜೆಪಿ ಪುನಶ್ಚೇತನಗೊಳ್ಳಲಿ ಅಂತ ಹೇಳಿದರು. ಮುಂದುವರಿದು ಮಾತಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು ಮತ್ತು ಭ್ರಷ್ಟಾಚಾರದ ಅರೋಪಗಳ ಹಿನ್ನೆಲೆಯಲ್ಲೇ ಯಡಿಯೂರಪ್ಪ ಎರಡು ಬಾರಿ ರಾಜೀನಾಮೆ ಸಲ್ಲಿಸಬೇಕಾಗಿತ್ತು, ಬಿಜೆಪಿ ನಾಯಕರೇ ಒಮ್ಮೆ ಅವರನ್ನು ಕಣ್ಣೀರು ಹಾಕುತ್ತಾ ವೇದಿಕೆಯಿಂದ ಕೆಳಗಿಳಿಯುವಂತೆ ಮಾಡಿದ್ದರು ಎಂದು ಹೇಳಿದರು. ಬಿಜೆಪಿ ವರಿಷ್ಠರು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೆ, ತಾನು ಮಲ್ಲಿಕಾರ್ಜುನ ಖರ್ಗೆ ಅವರ ಮಗನಾಗಿದ್ದರಿಂದ ರಾಜಕಾರಣದಲ್ಲಿ ಅವಕಾಶಗಳು ಸಿಗುತ್ತಿವೆ ಅಂತ ಹೇಳುತ್ತಾರೆ, ಅದರೆ ತಾನು ಯುವ ಕಾಂಗ್ರೆಸ್ಸಿಗನಾಗಿ ಪಟ್ಟ ಶ್ರಮವನ್ನು ತೇಜಸ್ವೀ ಸೂರ್ಯನಂಥವರು ಕಡೆಗಣಿಸುತ್ತಾರೆ ಎಂದು ಹೇಳಿದ ಖರ್ಗೆ, ಈಗ ಬಿಜೆಪಿ ನಾಯಕರಲ್ಲಿ ಉತ್ತರವಿದೆಯಾ? ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ