ಉದ್ಯಮಿಯ ಅಪಹರಿಸಿ ಮುಸ್ಲಿಂ ಯುವತಿ ಜೊತೆ ಮದುವೆ; ಮಂಗಳೂರಿನ ಬಿಲ್ಡರ್ ಪತ್ನಿಯಿಂದ ಪೊಲೀಸರಿಗೆ ದೂರು

|

Updated on: Mar 24, 2021 | 1:41 PM

ಬಿಲ್ಡರ್ ಮತ್ತು ಅಲೂಗಡ್ಡೆ, ಈರುಳ್ಳಿ ಹೋಲ್ ಸೇಲ್ ವ್ಯಾಪಾರಿ ಗಂಗಾಧರ, ವ್ಯವಹಾರದ ಹಿನ್ನೆಲೆಯಲ್ಲಿ ಜನವರಿಯಲ್ಲಿ ‌ಮನೆಯಿಂದ ಹೊರ ಹೋಗಿದ್ದರು. ಅದರೆ ನಂತರದಲ್ಲಿ ಫೋನ್ ಸಂಪರ್ಕಕ್ಕೂ ಸಿಗದೇ ಗಂಗಾಧರ ನಾಪತ್ತೆಯಾಗಿದ್ದರು. ಆದರೆ ವ್ಯವಹಾರ ನಿಮಿತ್ತ ಹೋದ ಕಾರಣ ನಾಪತ್ತೆ ದೂರನ್ನು ಯಶೋಧ ನೀಡಿರಲಿಲ್ಲ.

ಉದ್ಯಮಿಯ ಅಪಹರಿಸಿ ಮುಸ್ಲಿಂ ಯುವತಿ ಜೊತೆ ಮದುವೆ; ಮಂಗಳೂರಿನ ಬಿಲ್ಡರ್ ಪತ್ನಿಯಿಂದ ಪೊಲೀಸರಿಗೆ ದೂರು
ಪತಿ ಗಂಗಾಧರ ಮುಸ್ಲಿಂ ಯುವತಿ ಜೊತೆ ಮದುವೆಯಾಗಿರುವ ಚಿತ್ರಣ
Follow us on

ದಕ್ಷಿಣ ಕನ್ನಡ: ಬಿಲ್ಡರ್‌ನನ್ನು ಅಪಹರಿಸಿ ಮದುವೆ ಮಾಡಿಸಿದ ಆರೋಪದ ಮೇಲೆ ಬಿಲ್ಡರ್​ನ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಠಾಣೆಗೆ ಬೋಳಾರದ ಯಶೋಧಾ (54) ಎಂಬವವರು ದೂರು‌ ನೀಡಿದ್ದು, ತನ್ನ ಪತಿ ಗಂಗಾಧರ (62) ಎಂಬವರನ್ನ ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದು ಅಷ್ಟೇ ಅಲ್ಲದೇ ಪತಿಗೆ ಬೇರೆ ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಲ್ಡರ್ ಮತ್ತು ಅಲೂಗಡ್ಡೆ, ಈರುಳ್ಳಿ ಹೋಲ್ ಸೇಲ್ ವ್ಯಾಪಾರಿ ಗಂಗಾಧರ, ವ್ಯವಹಾರದ ಹಿನ್ನೆಲೆಯಲ್ಲಿ ಜನವರಿಯಲ್ಲಿ ‌ಮನೆಯಿಂದ ಹೊರ ಹೋಗಿದ್ದರು. ಅದರೆ ನಂತರದಲ್ಲಿ ಫೋನ್ ಸಂಪರ್ಕಕ್ಕೂ ಸಿಗದೇ ಗಂಗಾಧರ ನಾಪತ್ತೆಯಾಗಿದ್ದರು. ಆದರೆ ವ್ಯವಹಾರ ನಿಮಿತ್ತ ಹೋದ ಕಾರಣ ನಾಪತ್ತೆ ದೂರನ್ನು ಯಶೋಧ ನೀಡಿರಲಿಲ್ಲ. ಸದ್ಯ ಮುಸ್ಲಿಂ ಯುವತಿ ಜೊತೆ ಗಂಗಾಧರ್​ಗೆ ವಿವಾಹವಾಗಿರುವ ಮಾಹಿತಿ‌ ಸಿಕ್ಕಿದೆ.

ಈ ಮಾಹಿತಿಯನ್ನು ವಿವಾಹದ ಫೋಟೋಗಳ ಸಹಿತ ಗಂಗಾಧರ್ ಸ್ನೇಹಿತನಿಂದ ಪಡೆದ ಯಶೋಧಾ, ದುಷ್ಕರ್ಮಿಗಳು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿ ಮತಾಂತರ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮತಾಂತರದ ಬಳಿಕ ಮುಸ್ಲಿಂ ಯುವತಿ ಜೊತೆ ಬಲವಂತವಾಗಿ ಮದುವೆ ಮಾಡಿದ್ದಾರೆ. ನನ್ನ ಪತಿಯನ್ನು ಹುಡುಕಿ ಕೊಡಿ ಎಂದು ಮದುವೆ ಫೋಟೋಗಳ ಸಹಿತ ಪಾಂಡೇಶ್ವರ ಠಾಣೆಗೆ ಯಶೋಧಾ ದೂರು ನೀಡಿದ್ದಾರೆ. ಇನ್ನು ಈ ಪ್ರಕರಣದ ವಿಶೇಷ ತನಿಖೆಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿದ್ದು, ಸದ್ಯ ದೂರಿನ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರತಿ

ಗಂಡನನ್ನು ಹುಡುಕಿ ಕೊಡುವಂತೆ ಠಾಣೆಯಲ್ಲಿ ದೂರು

ಇದನ್ನೂ ಓದಿ:

ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್; ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೇರಿ ಮೂವರು ಅರೆಸ್ಟ್

ವರ್ತೂರು ಪ್ರಕಾಶ್​ ಅಪಹರಣದ ಹಿಂದೆ ಮಹಿಳೆ? ಮಾಜಿ ಸಚಿವರು ಹೇಳಿದ ಕಿಡ್ನಾಪ್​ ಪ್ರಸಂಗದ ಸುತ್ತ ಅನುಮಾನದ ಹುತ್ತ!