ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪತಿ-ಪತ್ನಿ ಮುಖಾಮುಖಿ: ಗಮನ ಸೆಳೆದಿದೆ ದಂಪತಿ ಸ್ಪರ್ಧೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 1:10 PM

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 7ನೇ ಹೊಸಕೋಟೆ ಗ್ರಾಮ ಪಂಚಾಯತಿ ಇಂತಹ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ‌ ಗಂಡನಿಗೆ ಎದುರಾಳಿಯಾಗಿ ಹೆಂಡತಿಯೇ ಅಖಾಡಕ್ಕೆ ದುಮುಕಿದ್ದಾಳೆ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪತಿ-ಪತ್ನಿ ಮುಖಾಮುಖಿ: ಗಮನ ಸೆಳೆದಿದೆ ದಂಪತಿ ಸ್ಪರ್ಧೆ
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಒಂದೇ ವಾರ್ಡ್​ನಿಂದ ಸ್ಪರ್ಧಿಸಿರುವ ಪತಿ ಕಿಶೋರ್ ಮತ್ತು ಪತ್ನಿ ಶ್ರೀಜಾ
Follow us on

ಕೊಡಗು: ಚುನಾವಣೆ ಎಂದಾಗ ಗೆಲುವು, ಸೋಲು ಕಾಮನ್. ಎದುರಾಳಿ ವಿರುದ್ಧ ಗೆದ್ದು ಬೀಗಬೇಕು ಎನ್ನುವುದು ಪ್ರತಿಯೊಬ್ಬ ಅಭ್ಯರ್ಥಿಯ ಗುರಿ ಆಗಿರುವುದು ಅಷ್ಟೇ ನಿಜ. ಆದ್ರೆ ಹೆಂಡತಿಯೇ ಚುನಾವಣೆಯ ಸ್ಪರ್ಧೆಯಲ್ಲಿ ಎದುರಾಳಿ ಆದಾಗ ಹೇಗಿರ್ಬೇಡ ಹೇಳಿ!

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 7ನೇ ಹೊಸಕೋಟೆ ಗ್ರಾಮ ಪಂಚಾಯತಿ ಇಂತಹ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ‌ ಗಂಡನಿಗೆ ಎದುರಾಳಿಯಾಗಿ ಹೆಂಡತಿಯೇ ಅಖಾಡಕ್ಕೆ ದುಮುಕಿದ್ದಾಳೆ.

ಪತಿ-ಪತ್ನಿ ಒಟ್ಟಿಗೆ ಮತಯಾಚನೆ ಮಾಡಿದರು.

ಪಂಚಾಯತಿಯ 2ನೇ ವಾರ್ಡ್​ನಲ್ಲಿರುವ ಕಂಬಿಬಾಣೆಯಲ್ಲಿ ಕಿಶೋರ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರ ಪತ್ನಿ ಶ್ರೀಜಾ ಕೂಡ ಸ್ಪರ್ಧೆಗೆ ಇಳಿದಿದ್ದಾರೆ. ಡಿ.22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ, ಮನೆಯಲ್ಲಿ ಅಷ್ಟೇ ನಾವು ಪತಿಪತ್ನಿ ಹೊರಗೆ, ಅಂದರೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು‌ ಎಂದು ಉತ್ತರಿಸಿದ್ದಾರೆ.

ಇಬ್ಬರು ಒಟ್ಟಿಗೆ ಮತ ಪ್ರಚಾರ ಮಾಡುತ್ತಿರುವ ದೃಶ್ಯ

ಒಟ್ಟಿಗೆ ಮತಯಾಚನೆ: ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತಹಾಕಿ ಗೆಲ್ಲಿಸುತ್ತಾರೆ ಎನ್ನುವುದು ಈ ದಂಪತಿಯ ಅಭಿಪ್ರಾಯ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಸೂಕ್ತ ಎಂದು ಎನಿಸುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

ಪತಿ-ಪತ್ನಿ ಮತಯಾಚನೆಗೆ ಹೊರಟಿರುವ ಚಿತ್ರಣ

ಇಬ್ಬರು ಒಟ್ಟಿಗೆ ಮತಯಾಚನೆ ಮಾಡುತ್ತಿದ್ದು, ನಮಗೆ ಮತ ನೀಡಿ ಎಂದು ಇಬ್ಬರೂ ಕೇಳುತ್ತಿದ್ದಾರೆ. ಇವರನ್ನು ಹೊರತುಪಡಿಸಿ ಇದೇ ವಾರ್ಡ್​ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಾಗಿದೆ.

ಮತದಾರರನ್ನು ಓಲೈಸುವಲ್ಲಿ ನಿರತರಾದ ಪತಿ-ಪತ್ನಿ

ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಹರಾಜು ಪ್ರಕರಣ: 44 ಜನರ ವಿರುದ್ಧ FIR