Murder 9 ತಿಂಗಳ ಹಿಂದಷ್ಟೇ.. ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಪತಿರಾಯ

ಕಳೆದ 9 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪಾಪಿ ಪತಿರಾಯನೊಬ್ಬ ಕೊಲೆಗೈದಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ನೂರ್ ಅಸ್ಮಾ(30) ಎಂಬ ಮಹಿಳೆಯನ್ನು ಆಕೆಯ ಪತಿ ಶಫಿ ಹತ್ಯೆಮಾಡಿದ್ದಾನೆ.

Murder 9 ತಿಂಗಳ ಹಿಂದಷ್ಟೇ.. ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಪತಿರಾಯ
ಪ್ರಾತಿನಿಧಿಕ ಚಿತ್ರ

Updated on: Feb 11, 2021 | 10:56 PM

ವಿಜಯನಗರ: ಕಳೆದ 9 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪಾಪಿ ಪತಿರಾಯನೊಬ್ಬ ಕೊಲೆಗೈದಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ನೂರ್ ಅಸ್ಮಾ(30) ಎಂಬ ಮಹಿಳೆಯನ್ನು ಆಕೆಯ ಪತಿ ಶಫಿ ಹತ್ಯೆಮಾಡಿದ್ದಾನೆ.

ಕಳೆದ ಒಂಬತ್ತು ತಿಂಗಳ ಹಿಂದಷ್ಟೇ ಇಬ್ಬರ ಮದುವೆಯಾಗಿತ್ತು. ಪರಸ್ಪರ ಪ್ರೀತಿಸಿ‌ ವಿವಾಹವಾಗಿದ್ದ ದಂಪತಿಯ ನಡುವೆ ಇಷ್ಟು ಬೇಗ ವಿರಸ ಮೂಡಲು ಕಾರಣವೇನು ಎಂದು ಸದ್ಯ ತಿಳಿದುಬಂದಿಲ್ಲ. ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಪುಟ್ಟಮ್ಮಳ ಕುಟುಂಬ
ಇತ್ತ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಮನೆ ಹೊತ್ತಿ ಉರಿದ ಘಟನೆ ವರದಿಯಾಗಿದೆ.

ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಪುಟ್ಟಮ್ಮಳ ಕುಟುಂಬ

ದುರಂತದಲ್ಲಿ ಮನೆಯಲ್ಲಿದ್ದ ನಗದು, ದವಸ ಧಾನ್ಯ, ಬಟ್ಟೆಗಳು ಬೆಂಕಿಗಾಹುತಿಯಾಗಿದೆ. ಪುಟ್ಟಮ್ಮ ಎಂಬುವವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಎಲ್ಲವನ್ನೂ ಕಳೆದುಕೊಂಡ ಪುಟ್ಟಮ್ಮ ಕುಟುಂಬ ಇದೀಗ ಬೀದಿಗೆ ಬಿದ್ದಿದೆ. ಹಾಗಾಗಿ, ಪುಟ್ಟಮ್ಮ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.