ರಾಜ್ಯಕ್ಕೆ ತಾರತಮ್ಯ ಆಗಿಲ್ಲ; ದೆಹಲಿಗೆ ತೆರಳಿ ಲಸಿಕೆ ಹೆಚ್ಚಿಗೆ ನೀಡುವಂತೆ ಮನವಿ ಮಾಡ್ತೀನಿ: ಆರೋಗ್ಯ ಸಚಿವ ಸುಧಾಕರ್

| Updated By: ಸಾಧು ಶ್ರೀನಾಥ್​

Updated on: Jul 02, 2021 | 10:38 AM

Corona Vaccine: ಲಸಿಕೆ ಹಂಚಿಯಲ್ಲಿ ಯಾವುದೇ ತಾರತಮ್ಯ ರಾಜ್ಯದಲ್ಲಿ ಮಾಡಿಲ್ಲ. ಹಂಚಿಕೆ ಮಾಡಬೇಕಾದ ವಾಡಿಕೆಗಿಂತ ಹೆಚ್ಚಾಗಿಯೇ ರಾಜ್ಯಕ್ಕೆ ಕಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಹೆಚ್ಚು ಲಸಿಕೆಗೆ ಬೇಡಿಕೆ ಇದೆ. ಹೀಗಾಗಿ ಸೋಮವಾರ ದೆಹಲಿಗೆ ತೆರಳಿ ಲಸಿಕೆ ಹೆಚ್ಚಿಗೆ ನೀಡುವಂತೆ ಮನವಿ ಮಾಡುತ್ತೇನೆ -ಆರೋಗ್ಯ ಸಚಿವ ಸುಧಾಕರ್ 

ರಾಜ್ಯಕ್ಕೆ ತಾರತಮ್ಯ ಆಗಿಲ್ಲ; ದೆಹಲಿಗೆ ತೆರಳಿ ಲಸಿಕೆ ಹೆಚ್ಚಿಗೆ ನೀಡುವಂತೆ ಮನವಿ ಮಾಡ್ತೀನಿ: ಆರೋಗ್ಯ ಸಚಿವ ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us on

ಬೆಂಗಳೂರು: ಭಾರತದಲ್ಲಿ ಕೊವಿಡ್ ಸಾವಿನ ಸಂಖ್ಯೆ 4 ಲಕ್ಷದ ಗಡಿ ದಾಟಿದ್ದು,  ದೇಶದಲ್ಲಿ ಕೊರೊನಾಗೆ ಒಟ್ಟು 4,00,312 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿಯೂ ಕೊರೊನಾ ಸಾವು ನೋವಿನ ಸಂಖ್ಯೆ ಅಗಾಧವಾಗಿದೆ. ಇದನ್ನು ತಡೆಗಟ್ಟಲು ಕೊರೊನಾ ಲಸಿಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರವಾಗಿ ಆಗಾಗ ದೂರುಗಳು ಕೇಳಿಬರುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದು, ಕೇಂದ್ರದಿಂದ ರಾಜ್ಯಕ್ಕೆ ಕೊರೊನಾ ಲಸಿಕೆ ಹಂಚಿಕೆ ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ವಾಡಿಕೆಗಿಂತ 4.5 ಲಕ್ಷ ಡೋಸ್ ಹೆಚ್ಚಾಗಿ ಕಳಿಸಿದ್ದಾರೆ.  ನಿನ್ನೆ 7.5 ಲಕ್ಷ ಡೋಸ್ ಕೋವಿಶೀಲ್ಟ್ ಲಸಿಕೆ ಬಂದಿದೆ. ಬಾಕಿ ಇರೋದು ಲಸಿಕೆ ಇವತ್ತು ಕಳಿಸ್ತಾರೆ ಎಂದು ಆರೋಗ್ಯ ಸಚಿವ ಸುಧಾಕರ್  ಮಾಹಿತಿ ನೀಡಿದ್ದಾರೆ.

ಲಸಿಕೆ ಹಂಚಿಯಲ್ಲಿ ಯಾವುದೇ ತಾರತಮ್ಯ ರಾಜ್ಯದಲ್ಲಿ ಮಾಡಿಲ್ಲ: 
ಲಸಿಕೆ ಹಂಚಿಯಲ್ಲಿ ಯಾವುದೇ ತಾರತಮ್ಯ ರಾಜ್ಯದಲ್ಲಿ ಮಾಡಿಲ್ಲ. ಹಂಚಿಕೆ ಮಾಡಬೇಕಾದ ವಾಡಿಕೆಗಿಂತ ಹೆಚ್ಚಾಗಿಯೇ ರಾಜ್ಯಕ್ಕೆ ಕಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಹೆಚ್ಚು ಲಸಿಕೆಗೆ ಬೇಡಿಕೆ ಇದೆ. ಹೀಗಾಗಿ ಸೋಮವಾರ ದೆಹಲಿಗೆ ತೆರಳಿ ಲಸಿಕೆ ಹೆಚ್ಚಿಗೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಆರೋಗ್ಯ ಸಚಿವ ಸುಧಾಕರ್  ತಿಳಿಸಿದ್ದಾರೆ.

ಸಾಂದ್ರತೆ, ಜನ ಸಂಖ್ಯೆ ಆಧಾರ, ಆದ್ಯತಾ ಗುಂಪುಗಳ ಆಧಾರದಲ್ಲಿ ಲಸಿಕೆ ಕೊಡ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಯಾವುದೇ ತಾಲೂಕು, ಜಿಲ್ಲೆ  ಎಂದು ತಾರತಮ್ಯ ಮಾಡ್ತಿಲ್ಲ ಎಂದು ಸಚಿವ ಸುಧಾಕರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಸಲಹೆ:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಳಕ್ಕೆ ಸೂಚಿಸಿದ್ದಾರೆ. ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 50 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ. CSR ಫಂಡ್ ಬಳಿಸಿ ಜಯನಗರ, ಬೌರಿಂಗ್ ಆಸ್ಪತ್ರೆಗಳು ಸೇರಿದಂತೆ ಅಗತ್ಯ ಇರೋ ಕಡೆ ಮೂಲಭೂತ ಸೌಕರ್ಯ ಹೆಚ್ಚಿಸಿಕೊಳ್ಳಲು ಕೇಂದ್ರ ಅನುಮತಿ ಕೊಟ್ಟಿದೆ. ಅವ್ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಅಂತಾ ಸಚಿವ ಸುಧಾಕರ್ ಹೇಳಿರು.

(will plead for more vaccine for karnataka says health minister dr k sudhakar)

ವ್ಯಾಕ್ಸಿನ್ ಪಾಲಿಟಿಕ್ಸ್.. ರಾಜಕಾರಣಿಗಳಿಂದಲೇ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಲಸಿಕೆ ಅಭಾವ, ಸಿಗಬೇಕಿದ್ದವರಿಗೆ ಸಿಗುತ್ತಿಲ್ಲ ಸಂಜೀವಿನಿ

Published On - 10:23 am, Fri, 2 July 21