ನಂಬರ್ ಪ್ಲೇಟ್‌ನಲ್ಲಿ ‘ಆಂಧ್ರ ಸಿಎಂ ಜಗನ್’ ಹೆಸರು ಇರುವ ಕಾರು ಕೆ ಆರ್ ಪುರಂನಲ್ಲಿ ಪತ್ತೆಯಾಯ್ತು!
YS Jagan Mohan Reddy: ಕರ್ನಾಟಕದ ರಾಜಧಾನಿ ಬೆಂಗೂರಿನಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಹೆಸರಿನ ನಂಬರ್ ಪ್ಲೇಟ್ ಇರುವ ಕಾರೊಂದು ಪತ್ತೆಯಾಗಿದೆ. ಅಂದಹಾಗೆ ಸಿಎಂ ಜಗನ್ ಅವರ ಹೆಸರಿರುವ ನಂಬರ್ ಪ್ಲೇಟ್ ವಾಹನಗಳು ನೆರೆಯ ರಾಜ್ಯಗಳಲ್ಲಿಯೂ ಆಗಾಗ ಕಾಣಿಸುತ್ತಿರುತ್ತವೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗೂರಿನಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಹೆಸರಿನ ನಂಬರ್ ಪ್ಲೇಟ್ ಇರುವ ಕಾರೊಂದು ಪತ್ತೆಯಾಗಿದೆ. ಅಂದಹಾಗೆ ಸಿಎಂ ಜಗನ್ ಅವರ ಹೆಸರಿರುವ ನಂಬರ್ ಪ್ಲೇಟ್ ವಾಹನಗಳು ನೆರೆಯ ರಾಜ್ಯಗಳಲ್ಲಿಯೂ ಆಗಾಗ ಕಾಣಿಸುತ್ತಿರುತ್ತವೆ.
ಕೆ.ಆರ್. ಪುರಂ ಪೊಲೀಸರು ವಾಹನಗಳ ತಪಾಸಣೆ ವೇಳೆ ಈ ನಿಗೂಢ ಕಾರನ್ನು ಪತ್ತೆ ಹಚ್ಚಿದ್ದಾರೆ. ಕಾರಿನ ನಂಬರ್ ಪ್ಲೇಟ್‌ನಲ್ಲಿ (Number Plate) ಆಂಧ್ರ ಸಿಎಂ ಜಗನ್ ಹೆಸರು ಕಂಡುಬರುತ್ತಿದ್ದಂತೆ ಎಚ್ಚೆತ್ತ ಕೆ.ಆರ್. ಪುರಂ ಪೊಲೀಸರು ವಾಹನವನ್ನು ತಡೆದು, ಪರಿಶೀಲಿಸಿದ್ದಾರೆ. ಆ ವೇಳೆ ಕಾರಿನ ಸಂಖ್ಯೆ AP 39 JG 451 ಎಂದಿದ್ದು, ‘451’ ಸಂಖ್ಯೆಯನ್ನ ‘YSJ’ ರೀತಿಯಲ್ಲಿ ಅಳವಡಿಸಿರುವುದಾಗಿ ಗೊತ್ತಾಗಿದೆ. ಆದರೆ ಇದು ಮೋಟಾರು ವಾಹನ ಕಾಯ್ದೆ ಅಧಿನಿಯಮಕ್ಕೆ (The Motor Vehicle Act – Rule 50, 51 of MV Act, 1989) ವ್ಯತಿರಿಕ್ತವಾಗಿದ್ದರಿಂದ ಕೆ ಆರ್ ಪುರಂ ಪೊಲೀಸರು ಕಾರು ಮಾಲೀಕನಿಗೆ ದಂಡ ಹಾಕಿ ಕಳಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನೆಂದ್ರೆ ಸದರಿ ಕಾರಿನ ಮಾಲೀಕ ಆಂಧ್ರ ಸಿಎಂ ಜಗನ್ ಅವರ (Y S Jagan Mohan Reddy – Chief Minister of Andhra Pradesh) ಅಪ್ಪಟ ಅಭಿಮಾನಿ. ಹಾಗಾಗಿ ತನ್ನ ಕಾರ್ ನಂಬರ್ ಪ್ಲೇಟ್ ಮೇಲೆ ತನ್ನ ನೆಚ್ಚಿನ ಮುಖ್ಯಮಂತ್ರಿಯ ಹೆಸರು ಹಾಕಿಸಿಕೊಂಡಿದ್ದಾರೆ. ಸದರಿ ಕಾರು AP39 JG 451 ನಂಬರಿನ ಆಂಧ್ರಪ್ರದೇಶ ನೋಂದಣಿ ಹೊಂದಿದೆ. ಹಾಗಾಗಿ, ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದರಿಂದ ಬೆಂಗಳೂರು ಪೊಲೀಸರು ಚಾಲಕನಿಗೆ ಫೈನ್ ಹಾಕಿ ಕಳಿಸಿದ್ದಾರೆ.
(Andhra CM Jagan found on number plate of car in kr puram bengaluru Motor Vehicle Act Improper Number Plate)