ಪ್ರಧಾನಿ ಮೋದಿ ಗಡ್ಡಕ್ಕೆ ಹೊಸ ಪದ ಕೊಡುಗೆ ನೀಡಿದ ಕಾಂಗ್ರೆಸ್​ ನಾಯಕ ಶಶಿ ತರೂರ್, ಅದಕ್ಕೆ ನೆಟ್ಟಿಗರ ಉತ್ತರವೂ ಸ್ವಾರಸ್ಯಕರ!

PM Modi Beard: ಇಷ್ಟಕ್ಕೂ ವಿಶ್ವಸಂಸ್ಥೆಯ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಮಾಜಿ ಅಧೀನ ಪ್ರಧಾನ ಕಾರ್ಯದರ್ಶಿ ಶಶಿ ತರೂರ್​ ‘ಸಂಶೋಧಿಸಿದ’ ಪೊಗೊನೊಟ್ರೊಫಿ- pogonotrophy ಅಂದ್ರೆ ಗಡ್ಡವನ್ನು ಬಿಡುವುದು ಎಂದರ್ಥ. ನೆಟ್ಟಿಗರೂ ಶಶಿ ತರೂರ್​ ಅವರ ಈ ಹೊಸ ವ್ಯಾಖ್ಯಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಗಡ್ಡಕ್ಕೆ ಹೊಸ ಪದ ಕೊಡುಗೆ ನೀಡಿದ ಕಾಂಗ್ರೆಸ್​ ನಾಯಕ ಶಶಿ ತರೂರ್, ಅದಕ್ಕೆ ನೆಟ್ಟಿಗರ ಉತ್ತರವೂ ಸ್ವಾರಸ್ಯಕರ!
ನರೇಂದ್ರ ಮೋದಿ
Follow us
|

Updated on:Jul 02, 2021 | 9:04 AM

ಕಾಂಗ್ರೆಸ್​ ನಾಯಕ ಶಶಿ ತರೂರ್​ ತಮ್ಮ ಇಂಗ್ಲಿಷ್ ಭಾಷಾ ಪಾಂಡಿತ್ಯಕ್ಕೆ (vocabulary) ಮರಳಿದ್ದಾರೆ. ಒಂದಷ್ಟು ಗ್ಯಾಪ್​ ಬಳಿಕ ಟ್ವಿಟ್ಟರ್ ಮೂಲಕ ಮತ್ತೊಂದು ಪದವನ್ನು ಪರಿಚಯಯಿಸಿದ್ದಾರೆ. ಆದರೆ ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಇಡೀ ಜಗತ್ತು, ದೇಶವನ್ನು ಕೊರೊನಾ ಕ್ರಿಮಿ ಕಾಡಲು ಆರಂಭಿಸುತ್ತಿದ್ದಂತೆ ತಮ್ಮ ವೇಷಭೂಷಣದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡಿಕೊಂಡರು. ಅದ್ರಲ್ಲೂ ಅವರು ಗಡ್ಡ ಬಿಟ್ಟಿದ್ದು ವಿಶೇಷವಾಗಿ ಕಾಣತೊಡಗಿತು. ಕೆಲವರು ಗುರುದೇವ ರವೀಂದ್ರನಾಥ್ ಟ್ಯಾಗೋರ್​ ಅವರಂತೆ ಗಡ್ಡ ಬಿಡುತ್ತಿದ್ದಾರೆ ಎಂದರು. ಜನ ಅವರವರ ಭಾವಕ್ಕೆ ತಕ್ಕಂತೆ ಪ್ರಧಾನಿ ಮೋದಿ ಗಡ್ಡ ಬಿಟ್ಟಿರುವುದನ್ನು ವ್ಯಾಖ್ಯಾನಿಸತೊಡಗಿದರು. ಆದರೆ ಮೋದಿ ಅವರ ಗಡ್ಡದ ಮೇಲೆ (PM Modi Beard) ಒಂದು ಕಣ್ಣಿಟ್ಟಿದ್ದ ಶಶಿ ತರೂರ್, ತಮ್ಮ ಖ್ಯಾತಿಗೆ ತಕ್ಕಂತೆ ಅದಕ್ಕೊಂದು ಹೊಸ ಆಂಗ್ಲ ಪದವನ್ನು ಪತ್ತೆಹಚ್ಚಿಯೇ ಬಿಟ್ಟರು. ಅದುವೇ ಪೊಗೊನೊಟ್ರೊಫಿ ಅಂತೆ (Pogonotrophy)!

ಹೌದು, ಈ ತಿರುವನಂತಪುರದ ಕಾಂಗ್ರೆಸ್​ ಸಂಸದ ನಿನ್ನೆ ರಾತ್ರಿ ಇನ್ನೇನು ಎಲ್ಲರೂ ನಿದ್ದೆಗೆ ಜಾರುವ ಸಮಯ ಬಂದಾಗ ಅಂದರೆ ರಾತ್ರಿ 10.10 ಗಂಟೆಗೆ ಸರಿಯಾಗಿ ಒಂದು ಟ್ವೀಟ್​ ಮಾಡಿಯೇ ಬಿಟ್ಟರು. out of the box ಯೋಚನೆ ಮಾಡಿದವರೆ ತಮ್ಮ ಗೆಳೆಯರ ಬಳಗದಲ್ಲಿರುವ ಅರ್ಥಿಕತಜ್ಞರೊಬ್ಬರ ಸಹಾಯ ಪಡೆದು, ಪೊಗೊನೊಟ್ರೊಫಿ ಎಂಬ ಈ ಹೊಸ ಪದವನ್ನು ಹೊಸೆದುಬಿಟ್ಟರು. ಕೊರೊನಾ ಮಹಾ ಸಾಂಕ್ರಮಿಕದಿಂದ ದೇಶದ ಜನತೆ ಬಸವಳಿದಿರುವುದನ್ನು ಕಂಡು ಪ್ರಧಾನಿ ಮೋದಿ ಗಡ್ಡಬಿಟ್ಟುರುವುವನ್ನು ಲೇವಡಿ ಮಾಡುವ ರೀತಿಯಲ್ಲಿ dictionary ಯಲ್ಲಿ ಹುಡುಕಿ ಈ ಪೊಗೊನೊಟ್ರೊಫಿ ಪದ ಮೋದಿ ಗಡ್ಡಕ್ಕೆ ಚೆನ್ನಾಗಿ ಒಪ್ಪುತ್ತದೆ ಅಂದಿದ್ದಾರೆ.

ಇಷ್ಟಕ್ಕೂ ವಿಶ್ವಸಂಸ್ಥೆಯ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಮಾಜಿ ಅಧೀನ ಪ್ರಧಾನ ಕಾರ್ಯದರ್ಶಿ ಶಶಿ ತರೂರ್​ ‘ಸಂಶೋಧಿಸಿದ’ ಪೊಗೊನೊಟ್ರೊಫಿ- pogonotrophy ಅಂದ್ರೆ ಗಡ್ಡವನ್ನು ಬಿಡುವುದು ಎಂದರ್ಥ.

ನೆಟ್ಟಿಗರೂ ಶಶಿ ತರೂರ್​ ಅವರ ಈ ಹೊಸ ವ್ಯಾಖ್ಯಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಿಸ್ಟರ್​ ತರೂರ್! ​ನಾನು ನಿಮಗೆ ಮತ್ತೊಂದು ಪದವನ್ನು ಕಲಿಸಿಕೊಡುವೆ ನೋಡಿ ಎಂದು slavetrophy ಪದ ಪರಿಚಯಿಸಿದ್ದಾರೆ. ಅದರರ್ಥ 10 ಜನ್​ಪಥ್​​ಗೆ ಗುಲಾಮರಾಗಿರುವುದು (Slavery to 10 Janpath) ಎಂದು ಒಬ್ಬರು ಟ್ವೀಟ್​ ಮಾಡಿ ವ್ಯಂಗ್ಯವಾಡಿದ್ದಾರೆ.

ಇನ್ನು ಮತ್ತೊಬ್ಬರು, ಶಶಿ ತರೂರ್​ ನಿಮ್ಮ ಹೊದ ಪದದಲ್ಲಿ ಮೊದಲ ನಾಲ್ಕು ಅಕ್ಷರಗಳನ್ನು (POGO) ನೋಡಿದಾಗ ಅದು ರಾಹುಲ್​ ಗಾಂಧಿ ಅವರನ್ನು ನೆನಪಿಸುತ್ತದೆ ಎಂದು ಅಣಕವಾಡಿದ್ದಾರೆ. ಹಾಗಾಗಿ ಅದನ್ನು pogonotrophy ಕರೆಯುವುದು ಸಮಂಜಸವಾದೀತು ಅಂದಿದ್ದಾರೆ.

(Pogonotrophy a new Word in Shashi Tharoor dictionary With A Cheeky Take At PM Modi Beard)

‘ಸೋಫಾಸನ’ ಇದು ನನ್ನಿಷ್ಟದ ಯೋಗ ಭಂಗಿ ಎಂದು ಪೋಸ್ಟ್​ ಹಂಚಿಕೊಂಡ ಶಶಿ ತರೂರ್

Published On - 9:00 am, Fri, 2 July 21