‘ಸೋಫಾಸನ’ ಇದು ನನ್ನಿಷ್ಟದ ಯೋಗ ಭಂಗಿ ಎಂದು ಪೋಸ್ಟ್​ ಹಂಚಿಕೊಂಡ ಶಶಿ ತರೂರ್

ಹಾಸ್ಯ ಪ್ರಜ್ಞೆಗಾಗಿ ಕೆಲವುರು ಶಶಿ ತರೂರ್​ ಅವರನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಗುಡ್​ ಒನ್ ಸರ್​... ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೋರ್ವರು, ಆರಾಮವಾಗಿರುವ ಆನಸವಿದು ಎಂದು ಹಾಸ್ಯ ಮಾಡಿದ್ದಾರೆ. 

‘ಸೋಫಾಸನ’ ಇದು ನನ್ನಿಷ್ಟದ ಯೋಗ ಭಂಗಿ ಎಂದು ಪೋಸ್ಟ್​  ಹಂಚಿಕೊಂಡ ಶಶಿ ತರೂರ್
‘ಸೋಫಾಸನ’ ಇದು ನನ್ನಿಷ್ಟದ ಯೋಗ ಭಂಗಿ- ಶಶಿ ತರೂರ್

ನಿನ್ನೆ (ಜೂನ್​ 21) ಅಂತರಾಷ್ಟ್ರಿಯ ಯೋಗ ದಿನವನ್ನು ಆರಿಸಲಾಯಿತು. ಹಲವರು ತಾವು ಯೋಗ ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಅಂತೆಯೇ, ಕಾಂಗ್ರೆಸ್​ ಸಂಸದ ಶಶಿ ತರೂರ್​ ಕೂಡಾ ಅವರ ನೆಚ್ಚಿನ ಯೋಗ ಭಂಗಿಯನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ‘ಸೋಫಾಸನ’ ಇದು ನನ್ನಿಷ್ಟದ ಯೋಗ ಭಂಗಿ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

ಗ್ರಾಫಿಕ್​ ಫೋಟೋವನ್ನು ಹಂಚಿಕೊಂಡ ಶಶಿ ತರೂರ್​, ಇದು ನನ್ನ ಪರವಾಗಿ ಮಾತನಾಡುತ್ತಿದೆ ಎಂದು ಶೀರ್ಷಿಗೆ ನೀಡಿದ್ದಾರೆ. ಸೋಫಾದ ಮೇಲೆ ಆರಾಮವಾಗಿ ಕುಳಿತು ಬೆಕ್ಕಿನ ಮರಿಯನ್ನು ಮಲಗಿಸಿಕೊಂಡು ಸಂಗೀತವನ್ನು ಕೇಳುತ್ತಿರುವುದು ದೃಶ್ಯದಲ್ಲಿ ಕಾಣಿಸುತ್ತದೆ.

ಹಾಸ್ಯ ಪ್ರಜ್ಞೆಗಾಗಿ ಕೆಲವುರು ಶಶಿ ತರೂರ್​ ಅವರನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಗುಡ್​ ಒನ್ ಸರ್​… ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೋರ್ವರು, ಆರಾಮವಾಗಿರುವ ಆನಸವಿದು ಎಂದು ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ:

Yoga Day 2021: ಕರ್ನಾಟಕದ 311 ಮಂಡಲಗಳ 622 ಕಡೆ ಕೊವಿಡ್ ನಿಯಮ ಅನುಸರಿಸಿ ಯೋಗ ದಿನ ಆಚರಣೆ

International Yoga Day 2021: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ M Yoga App ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ