Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯೋ ಪಾಪ ಎನ್ನುವ ಮುನ್ನ ಪೂರ್ತಿ ವಿಡಿಯೋ ನೋಡಿ; ವೈರಲ್​ ಸುದ್ದಿಯ ಅಸಲಿ ಕರಾಮತ್ತು ಇಲ್ಲಿದೆ

Viral Video: ಇದೇನು ಕಥೆ ಎಂದುಕೊಳ್ಳುವಷ್ಟರಲ್ಲಿ ಆತ ಏಕಾಏಕಿ ಎದ್ದು ಕುಣಿಯಲಾರಂಭಿಸಿ ಅಷ್ಟು ಹೊತ್ತು ಏನೋ ವಿಷಯವಿದೆ ಎಂದು ವಿಡಿಯೋ ನೋಡಿದವರೆಲ್ಲಾ ತಲೆ ಚಚ್ಚಿಕೊಳ್ಳುವಂತೆ ಮಾಡುತ್ತಾನೆ.

ಅಯ್ಯೋ ಪಾಪ ಎನ್ನುವ ಮುನ್ನ ಪೂರ್ತಿ ವಿಡಿಯೋ ನೋಡಿ; ವೈರಲ್​ ಸುದ್ದಿಯ ಅಸಲಿ ಕರಾಮತ್ತು ಇಲ್ಲಿದೆ
ವೈರಲ್​ ವಿಡಿಯೋದ ತುಣುಕು
Follow us
TV9 Web
| Updated By: Skanda

Updated on:Jun 22, 2021 | 3:24 PM

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ಗೀಳು ಆರಂಭವಾದ ನಂತರ ಕೃತಕ ವರ್ತನೆ ಸಾಧಾರಣ ವಿಷಯ ಎಂಬಂತಾಗಿದೆ. ಎಷ್ಟೋ ಜನ ಉದ್ದೇಶಪೂರ್ವಕವಾಗಿಯೇ ವಿಚಿತ್ರವಾಗಿ ವರ್ತಿಸುತ್ತಾ ಗಮನ ಸೆಳೆಯುವ ತಂತ್ರ ಅನುಸರಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ಹೀಗೆಲ್ಲಾ ಮಾಡೋದು ಸಾಧ್ಯವಿದೆಯಾ ಎಂದು ನೋಡಿದವರು ಹುಬ್ಬೇರಿಸುವ ಮಟ್ಟಿಗೆ ಅವರ ಹಾವ, ಭಾವ, ನಡವಳಿಕೆಗಳು ವಿಭಿನ್ನವಾಗಿರುತ್ತವೆ. ವಿಪರ್ಯಾಸವೆಂದರೆ ಅಂತಹ ಘಟನೆಗಳನ್ನೆಲ್ಲಾ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಸಾಕು ಅವು ಲಂಗು ಲಗಾಮಿಲ್ಲದಂತೆ ಓಡುತ್ತವೆ. ಬಿಡುವಿನಲ್ಲಿ ಮೊಬೈಲ್​ ನೋಡುತ್ತಾ ಕುಳಿತಾಗ ಅರಿವಿಗೆ ಬಾರದಂತೆಯೇ ಇಂತಹ ಅದೆಷ್ಟೋ ಸಂಗತಿಗಳು ಕಣ್ಣಿಗೆ ಬಿದ್ದು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದರೆ, ಅವುಗಳಲ್ಲಿ ಹೆಚ್ಚಿನವುಗಳ ಅಸಲಿಯತ್ತೇ ಬೇರೆ ಇದ್ದು, ಅದನ್ನು ತಿಳಿದುಕೊಂಡ ನಂತರ ನಾವು ತಲೆಚಚ್ಚಿಕೊಳ್ಳವಂತಿರುತ್ತದೆ.

ಇತ್ತೀಚೆಗೆ ವೈರಲ್​ ಆದ ವಿಡಿಯೋ ಒಂದು ನೋಡುಗರನ್ನು ಹೀಗೆಯೇ ಪೇಚಿಗೆ ಸಿಲುಕಿಸಿದೆ. ಅಯ್ಯೋ, ಏನಾಯಿತಪ್ಪಾ ಎಂದು ಕಣ್ಣರಳಿಸಕೊಂಡು, ಬಾಯಿ ಬಿಟ್ಟುಕೊಂಡು ವಿಡಿಯೋ ನೋಡುತ್ತಿದ್ದವರೆಲ್ಲಾ ಕೊನೆಗೆ ತಲೆ ಚಚ್ಚಿಕೊಳ್ಳುವಂತಾಗಿದೆ. ಈ ವೈರಲ್​ ವಿಡಿಯೋದಲ್ಲಿ ಪ್ರಜ್ಞಾಹೀನ ವ್ಯಕ್ತಿಯೊಬ್ಬ ನೆಲದ ಮೇಲೆ ಅಂಗಾತ ಬಿದ್ದುಕೊಂಡಿದ್ದು, ಇನ್ನೋರ್ವ ಆತನ ಎದೆ ಭಾಗವನ್ನು ಒತ್ತುವ ಮೂಲಕ ಪ್ರಜ್ಞೆ ತರಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಬಿಂಬಿಸುವಂತೆ ಆರಂಭದ ದೃಶ್ಯಾವಳಿಗಳಿವೆ.

ಸೂಟುಬೂಟು ತೊಟ್ಟ ವ್ಯಕ್ತಿಗಳನ್ನು ನೋಡಿದರೆ ಅವರೆಲ್ಲಾ ಯಾವುದೋ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿದ್ದು, ಅದನ್ನು ಪುಷ್ಟೀಕರಿಸುವಂತೆ ಹಿನ್ನೆಲೆ ಸಂಗೀತವೂ ಕೇಳಿಬರುತ್ತದೆ. ವಿಡಿಯೋ ನೋಡಿದ ತಕ್ಷಣ ಯಾರೇ ಆದರೂ ಛೇ, ಗಟ್ಟಿಮುಟ್ಟಾದ ಈ ವ್ಯಕ್ತಿಗೆ ಏನಾಯಿತಪ್ಪಾ ಎಂದು ಚಿಂತೆ ಮಾಡುವ ರೀತಿಯಲ್ಲಿ ಆತ ಬಿದ್ದುಕೊಂಡಿದ್ದು, ಇನ್ನೋರ್ವ ವ್ಯಕ್ತಿ ಕೂಡಾ ಆತನನ್ನು ಬದುಕಿಸಲು ಯತ್ನಿಸುತ್ತಿರುವಂತೆಯೇ ವರ್ತಿಸಿದ್ದಾನೆ.

ಹೃದಯಾಘಾತವಾದವರಿಗೆ ಎದೆ ಭಾಗವನ್ನು ಒತ್ತಿ ಪ್ರಥಮ ಚಿಕಿತ್ಸೆ ನೀಡುವ ರೀತಿಯಲ್ಲೇ ಅಲ್ಲಿದ್ದಾತ ನಡೆದುಕೊಂಡಿದ್ದಾನೆ. ಆದರೆ, ಸುತ್ತಮುತ್ತಲಿನವರು ಮಾತ್ರ ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಆರಾಮಾಗಿರುವುದನ್ನು ನೋಡಿದರೆ ಅಲ್ಲಿ ಆಗಿದ್ದಾದರೂ ಏನು ಎಂಬ ಸಣ್ಣ ಸಂದೇಹವೂ ಮೂಡದೇ ಇರದು. ಇಷ್ಟೆಲ್ಲದರ ನಡುವೆ ವಿಡಿಯೋ ಕೆಲ ಸೆಕೆಂಡುಗಳನ್ನು ದಾಟುತ್ತಿದ್ದಂತೆಯೇ ಅಂಗಾತ ಮಲಗಿದ್ದ ವ್ಯಕ್ತಿ ಕೈಕಾಲುಗಳನ್ನು ಆಡಿಸಲಾರಂಭಿಸಿದ್ದಾನೆ.

View this post on Instagram

A post shared by hepgul5 (@hepgul5)

ಆತ ಹಾಗೆ ದೇಹವನ್ನು ಅಲುಗಾಡಿಸುವುದನ್ನು ನೋಡಿದಾಗ ಪ್ರಜ್ಞೆ ಬಂತೇನು ಎಂಬ ಯೋಚನೆ ಬರುತ್ತದೆಯಾದರೂ ಅಷ್ಟರಲ್ಲಿ ಆತ ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಮೈ ಕುಣಿಸಲಾರಂಭಿಸಿ ನೋಡುಗರನ್ನು ಗೊಂದಲಗೊಳಿಸುತ್ತಾನೆ. ಇದೇನು ಕಥೆ ಎಂದುಕೊಳ್ಳುವಷ್ಟರಲ್ಲಿ ಆತ ಏಕಾಏಕಿ ಎದ್ದು ಕುಣಿಯಲಾರಂಭಿಸಿ ಅಷ್ಟು ಹೊತ್ತು ಏನೋ ವಿಷಯವಿದೆ ಎಂದು ವಿಡಿಯೋ ನೋಡಿದವರೆಲ್ಲಾ ತಲೆ ಚಚ್ಚಿಕೊಳ್ಳುವಂತೆ ಮಾಡುತ್ತಾನೆ.

ವಿಡಿಯೋವನ್ನು ಪೂರ್ತಿ ನೋಡಿದವರಿಗೆ ಅರೆಕ್ಷಣ ಸಿಟ್ಟು ಬರಬಹುದಾದರೂ ಇದು ವೈರಲ್​ ಆಗಿದ್ದನ್ನು ಗಮನಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹವುಗಳು ಎಷ್ಟು ಬೇಗ ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ ಎನ್ನುವುದೂ ಅರ್ಥವಾಗುತ್ತದೆ. ಇದೊಂದು ರೀತಿಯಲ್ಲಿ ಜನ ಮರುಳೋ, ಜಾತ್ರೆ ಮರುಳೋ ಗಾದೆಯನ್ನು ನೆಪಿಸುವುದೂ ಸುಳ್ಳಲ್ಲ!

ಇದನ್ನೂ ಓದಿ: Viral Video : ಉರುಳಿ ಬಿದ್ದ ಕಾರನ್ನು ಎತ್ತಲು ಹಲವು ಜನರು ಸೇರಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್

Published On - 3:23 pm, Tue, 22 June 21

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ