ಮೆಟ್ರೋ ಹತ್ತಿದ್ದ ಮಂಗ; ಅಸಲಿ ವಿಷಯ ತಿಳಿಸಿದ ಅಧಿಕಾರಿಗಳು
ಮೆಟ್ರೋ ರೈಲಿನ ಸೀಟ್ನಲ್ಲಿ ಕುಳಿತುಕೊಳ್ಳುವುದರ ಮೊದಲು ಕೋತಿಯು ಬೋಗಿಗಳಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ಮೆಟ್ರೋ ರೈಲಿನಲ್ಲಿ ಮಂಗವೊಂದು ಪ್ರಯಾಣ ಕೈಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿತ್ತು. ಈ ಕುರಿತಂತೆ ಡಿಎಂಆರ್ಸಿ (ದೆಹಲಿ ಮೆಟ್ರೊ ರೈಲು ನಿಗಮ) ಸೋಮವಾರ ಮಾಹಿತಿ ನೀಡಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಮತ್ತು ಕಾರ್ಯಾಚರಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.
ಪ್ರಯಾಣಿಕ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ಆವರಣದ ಒಳಗೆ ಪ್ರಾಣಿಗಳು ಪ್ರವೇಶಿಸುವ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಜತೆಗೆ ಕಾರ್ಯಾಚರಣೆ ವಿಧಾನವನ್ನು ರೂಪಿಸಲು ಅರಣ್ಯ ಇಲಾಖೆ ಯೋಜಿಸುತ್ತಿದೆ ಎಂದು ದೆಹಲಿ ಮೆಟ್ರೊ ರೈಲು ನಿಗಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕೋತಿಯು ಮೆಟ್ರೋದಲ್ಲಿ 3-4 ನಿಮಿಷಗಳ ಕಾಲ ಮೆಟ್ರೋದಲ್ಲಿ ಸಂಚಾರ ಕೈಗೊಂಡಿದೆ. ಡಿಎಂಆರ್ಸಿ ಪ್ರಕಾರ, ಈ ವಿಷಯ ತಿಳಿದಾಕ್ಷಣವೇ ಕಾರ್ಯಾಚರಣೆ ನಡೆಸಲಾಗಿದೆ.
‘Bandar Metro Ke Andar’! He loves looking out of the window and sits next to a passenger. Smart monkey. Delhi Metro, Blue Line. VIDEO source: Unknown. pic.twitter.com/FEJEKkHMMX
— Pallava Bagla (@pallavabagla) June 21, 2021
ಮೆಟ್ರೋ ರೈಲಿನ ಸೀಟ್ನಲ್ಲಿ ಕುಳಿತುಕೊಳ್ಳುವುದರ ಮೊದಲು ಕೋತಿಯು ಬೋಗಿಗಳಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಶನಿವಾರ, ದೆಹಲಿಯ ಮೆಟ್ರೋ ರೈಲು ಪ್ರವೇಶಿಸಿದ ಕೋತಿಯು ಲವಲವಿಕೆಯಿಂದ ಓಡಾಡಿಕೊಂಡು ಹಾಯಾಗಿ ಸೀಟಿನಲ್ಲಿ ಕೂತಿದ್ದ ವಿಡಿಯೋ ವೈರಲ್ ಆಗಿತ್ತು. ಶನಿವಾರ ಸಂಜೆ 4:45ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂಬುದು ತಿಳಿದು ಬಂದಿದೆ.
ಮೆಟ್ರೋದಲ್ಲಿ ಕುಳಿತಿದ್ದ ಓರ್ವ ವ್ಯಕ್ತಿಯ ಪಕ್ಕದಲ್ಲಿ ಕೋತಿ ಕುಳಿತಿತ್ತು. ಜತೆಗೆ ಹಾಯಾಗಿ ಕಿಟಕಿಯಿಂದ ಆಚೆಗೆ ನೋಡುತ್ತಾ ತನ್ನ ಪ್ರಯಾಣವನ್ನು ಕೈಗೊಂಡಿತ್ತು. ಪ್ರಾಣಿಗಳು ಮತ್ತು ಸಾಕುಪ್ರಾಣಿಗಳನ್ನು ರೈಲುಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ ಕೋತಿಯು ಪ್ರಯಾಣ ಕೈಗೊಂಡಿರುವುದು ಜನರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಜತೆಗೆ ಜನರಿಗೆ ಕುತೂಹಲ ಕೆರಳಿಸಿತ್ತು. ವಿಡಿಯೋದಲ್ಲಿ ನೋಡುವಂತೆ, ‘ಅವನಿಗೆ ಮುಖಗವಸನ್ನು ಕೊಡು’ ಎಂದು ಓರ್ವ ಪ್ರಯಾಣಿಕರು ಪ್ರತಿಕ್ರಿಯೆ ನೀಡಿರುವುದು ಕೇಳಿ ಬಂದಿತ್ತು.
ಇದನ್ನೂ ಓದಿ:
ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್! ವಿಡಿಯೋ ನೋಡಿ