ಚಳಿಗಾಲ ಹಾಗೂ ದೀಪಾವಳಿ ಪಟಾಕಿ ಎಫೆಕ್ಟ್: ಬೆಂಗಳೂರಿನಲ್ಲಿ ವೈರಲ್ ಸೋಂಕು ಏರಿಕೆ!

| Updated By: ಗಂಗಾಧರ​ ಬ. ಸಾಬೋಜಿ

Updated on: Nov 06, 2024 | 10:22 PM

ಬೆಂಗಳೂರಿನಲ್ಲಿ ದೀಪಾವಳಿಯ ಅತಿಯಾದ ಪಟಾಕಿ ಸಿಡಿತ ಮತ್ತು ಚಳಿಗಾಲದಿಂದಾಗಿ ವೈರಲ್ ಸೋಂಕುಗಳು ಹೆಚ್ಚಾಗುತ್ತಿವೆ. ಉಸಿರಾಟದ ಸಮಸ್ಯೆಗಳು, ಅಸ್ತಮಾ ಮತ್ತು ಲಂಗ್ಸ್ ಇನ್ಫೆಕ್ಷನ್ ಪ್ರಕರಣಗಳು ಏರಿಕೆಯಾಗಿವೆ. ಹೀಗಾಗಿ ವೈದ್ಯರು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.

ಚಳಿಗಾಲ ಹಾಗೂ ದೀಪಾವಳಿ ಪಟಾಕಿ ಎಫೆಕ್ಟ್: ಬೆಂಗಳೂರಿನಲ್ಲಿ ವೈರಲ್ ಸೋಂಕು ಏರಿಕೆ!
ಚಳಿಗಾಲ ಹಾಗೂ ದೀಪಾವಳಿ ಪಟಾಕಿ ಎಫೆಕ್ಟ್: ಬೆಂಗಳೂರಿನಲ್ಲಿ ವೈರಲ್ ಸೋಂಕು ಏರಿಕೆ!
Follow us on

ಬೆಂಗಳೂರು, ನವೆಂಬರ್​ 06: ಬೆಳಕಿನ ಹಬ್ಬ ದೀಪಾವಳಿ ಜೊತೆಗೆ ಚಳಿಗಾಲವೂ ಶುರುವಾಗುತ್ತದೆ. ಈ ಸಮಯದಲ್ಲಿ ಮೊದಲು ನೆನಪಾಗೋದು ಪಟಾಕಿಗಳ (Firecrackers) ಸಂಭ್ರಮ ಆದರೆ ಈ ವರ್ಷ ಅತಿಯಾದ ಪಟಾಕಿ ಮಾಲೀನ್ಯ ಹಾಗೂ ಚಳಿಗಾಲದ ಎಫೆಕ್ಟ್ ರಾಜಧಾನಿ ಜನರ ಉಸಿರಾಟಕ್ಕೆ ಕುತ್ತು ತಂದಿದೆ. ಬೆಂಗಳೂರಿಗೆ ವಿಂಟರ್ ಸೀಸನಿಂದ ಇನ್ಫೆಕ್ಷನ್ ಎಫೆಕ್ಟ್ ಶುರುವಾಗಿದೆ.

ಚಳಿಗಾಲ ಹಾಗೂ ದೀಪಾವಳಿಯ ಪಟಾಕಿ ಎಫೆಕ್ಟ್​ನಿಂದಾಗಿ ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್​ಗಳು ಹೆಚ್ಚಾಗುತ್ತಿವೆ. ಸೀವಿಯರ್ ಲಂಗ್ಸ್ ಇನ್ಫೆಕ್ಷನ್, ಶ್ವಾಸನಾಳದ ಅಸ್ತಮಾ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶೇ 20% ರಿಂದ 25 % ವೈರಲ್ ಸೋಂಕು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರತಿ ವರ್ಷ ಚಳಿಗಾಲದ ಜೊತೆಗೆ ಬೆಳಕಿನ ಹಬ್ಬ ದೀಪಾವಳಿ ಬರುತ್ತದೆ ಆದರೆ ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಅತಿಯಾದ ಪಟಾಕಿ ಸಿಡಿತದಿಂದ ಅತಿಯಾದ ಮಾಲೀನ್ಯದಿಂದ ರಾಜಧಾನಿಯ ಜನರಲ್ಲಿ ವೈರಲ್ ಸೋಂಕು ಪ್ರಮಾಣ ಏರಿಕೆ ಕಂಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿ ಪಟಾಕಿ ಸಂಭ್ರಮಕ್ಕೆ ಮನುಷ್ಯ ಮಾತ್ರವಲ್ಲ ಹದ್ದುಗಳು ವಿಲವಿಲ..!

ಬೆಂಗಳೂರಿಗರಿಗೆ ಚಳಿಗಾಲದ ಜೊತೆಗೆ ಲಂಗ್ಸ್ ಇನ್ಫೆಕ್ಷನ್, ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ಕ್ರಾನಿಕ್ ಕಾಫ್ ಬ್ರಾಂಕೈಟಿಸ್ ಕಂಡು ಬರ್ತಿದೆ. ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ವಯೋವೃದ್ಧರಲ್ಲಿ ಸಿಓಪಿಡಿ, ಐಎಲ್​ಡಿ, ಸಾರ್ಕೊಯಿಡೋಸಿಸ್ ಮತ್ತು ಇತರ ಶ್ವಾಸಕೋಶದ ಸಮಸ್ಯೆಗಳ ಮೇಲೆ ಪರಿಣಾಮ ಬೀರತ್ತಿದೆ. ಅತಿಯಾದ ಶೀತ ಉಸಿರಾಟದ ಸಮಸ್ಯೆಗೂ ಕಾರಣವಾಗುತ್ತಿದೆ. ಹೀಗಾಗಿ ಜನರು ವಿಂಟರ್ ಸೀಸನ್ ಮುಗಿಯುವರೆಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ವಿಷಕಾರಿಯಾದ ಗಾಳಿಯಿಂದ ರಕ್ಷಣೆ ಪಡೆಯಬೇಕಿದ್ದು ಚಳಿಗಾಲ ಮುಗಿಯುವರೆಗೂ ಎಚ್ಚರವಹಿಸಬೇಕಿದೆ ಎಂದು ರಾಜೀವಗಾಂಧಿ ಎದೆರೋಗ ತಜ್ಞ ಡಾ. ನಾಗರಾಜ್ ಹೇಳಿದ್ದಾರೆ.

ರಾಜೀವಗಾಂಧಿ ಆಸ್ಪತ್ರೆ ಅಷ್ಟೇ ಅಲ್ಲ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕೆ.ಸಿ ಜನರಲ್ ಆಸ್ಪತ್ರೆ ಕಿಮ್ಸ್ ಆಸ್ಪತ್ರೆಗಳಲ್ಲಿಯೂ ಈಗ ಉಸಿರಾಟದ ಸಮಸ್ಯೆ ಹಾಗೂ ವೈರಲ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ವೈದ್ಯರು ಚಳಿಗಾಲ ಮುಗಿಯುವವರೆಗೂ ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಕಿಮ್ಸ್ ಆಸ್ಪತ್ರೆ ಅಧ್ಯಕ್ಷ ಡಾ.ಆಂಜನಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿಯಿಂದ ಈವರೆಗೆ 115 ಜನರಿಗೆ ಗಾಯ

ಈ ವರ್ಷ ಪಟಾಕಿ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಸರ್ಕಸ್ ಮಾಡಿತ್ತು. ಪ್ರತ್ಯೇಕ ಗೈಡ್ ಲೈನ್ಸ್ ಬಿಡುಗಡೆ ಮಾಡಿತ್ತು. ರಾತ್ರಿ 10 ಗಂಟೆ ನಂತರ ಪಟಾಕಿ ಹೊಡೆದರೆ ಕೇಸ್ ಎಂದು ಪೊಲೀಸ್ ಇಲಾಖೆ ವಾರ್ನ್ ಮಾಡಿತ್ತು. ಆದರೆ ಅದ್ಯಾವುದು ವರ್ಕ್ ಔಟ್ ಆಗಿಲ್ಲ. ಹೀಗಾಗಿ ಮಾಲೀನ್ಯ ಪ್ರಮಾಣದ ಜೊತೆ ವಿಷಕಾರಿಯಾದ ಗಾಳಿಯಿಂದ ಹಾಗೂ ಚಳಿಗಾಲದಿಂದ ರಾಜಧಾನಿಯಲ್ಲಿ ಉಸಿರಾಟದ ಸಮಸ್ಯೆ ಪ್ರಮಾಣ ಹೆಚ್ಚಾಗಿದ್ದು ಜನರು ಕೊಂಚ ಎಚ್ಚರ ವಹಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.