ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿ ಪಟಾಕಿ ಸಂಭ್ರಮಕ್ಕೆ ಮನುಷ್ಯ ಮಾತ್ರವಲ್ಲ ಹದ್ದುಗಳು ವಿಲವಿಲ..!
ಬೆಳಕಿನ ಹಬ್ಬ ದೀಪಾವಳಿ ಮುಗಿದಿದೆ. ಹಲವರು ಈ ಬಾರಿ ದೀಪಾವಳಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಇನ್ನೂ ಕೆಲವರು ಪಟಾಕಿ ಸಿಡಿಸಲು ಹೋಗಿ ಗಾಯಮಾಡಿಕೊಂಡು ನರಳಾಡುತ್ತಿದ್ದಾರೆ. ಅದರಲ್ಲೂ ಕೆಲವರು ಕಣ್ಣಿನ ದೃಷ್ಟಿಗಳನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಇನ್ನು ಪಟಾಕಿ ಏಟಿಗೆ ಬೆಂಗಳೂರಿನಲ್ಲಿ ಹದ್ದುಗಳು ಸಹ ವಿಲವಿಲ ಎಂದಿವೆ.
ಬೆಂಗಳೂರು, (ನವೆಂಬರ್ 04): ದೀಪಗಳ ಹಬ್ಬ ದೀಪಾವಳಿಗೆ ಪಟಾಕಿ ಸಿಡಿಸಿ ಕುಣಿದಾಡಿದಾಯ್ತು. ಆದ್ರೆ ತಿಳಿದೋ, ತಿಳಿಯದೆಯೋ ಪಟಾಕಿ ಸಿಡಿತಕ್ಕೆ ರಾಜಧಾನಿಯಲ್ಲಿ ಅಳಿದುಳಿದಿರುವ ಪಕ್ಷಿ ಸಂಕುಲ ನಲುಗಿ ಹೋಗಿದೆ. ಪಟಾಕಿ ಶಬ್ಧಕ್ಕೆ ಪಕ್ಷಿಗಳು ಹೆದರಿ ಹೋಗಿವೆ. ರಾಕೆಟ್ ಪಟಾಕಿ ಸಿಡಿತಕ್ಕೆ ಒಂದಲ್ಲ, ಹತ್ತಲ್ಲ ಬರೋಬ್ಬರಿ 200 ಹದ್ದುಗಳು ಪ್ರಾಣ ಬಿಟ್ಟಿವೆ.
ಹದ್ದು ಬೆಂಗಳೂರಿನ ಅರ್ಬನ್ ಪಕ್ಷಿ ಎನ್ನಿಸಿಕೊಂಡಿದೆ. ನಗರದಲ್ಲಿ ಗಾರ್ಬೇಜ್ ಕ್ಲೀನರ್ ಎಂಬ ಪಟ್ಟ ಹೊಂದಿವೆ. ನಗರದ ಕಸ ತಿಂದು ಜೀರ್ಣಿಸಿಕೊಳ್ಳುವ ಹದ್ದಿಗೆ ಪಟಾಕಿ ನಾರಕವಾಗಿದೆ. ಶಬ್ಧದಿಂದ, ಹೊಗೆಯಿಂದ, ರಾಕೆಟ್ ಹೊಡೆತದಿಂದ ಪೆಟ್ಟು ತಿಂದು ಪ್ರಾಣ ಬಿಟ್ಟಿವೆ. ಕೆಲ ಪ್ರಾಣಿ ಪ್ರಿಯರ ಸಹಾಯದಿಂದ ಆಸ್ಪತ್ರೆ ಸೇರಿ ಜೀವನ್ ಮರಣದ ಹೋರಾಡುತ್ತಿವೆ. ಕೆಂಗೇರಿಯಲ್ಲಿರುವ ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಗೆ ಈ ಸಲ ಕಳೆದ ಬಾರಿಗಿಂತ ಹೆಚ್ಚು ಪ್ರಕರಣಗಳು ಬಂದಿವೆ. ಮಂಗಗಳು ಸೇರಿ ಶಾರ್ಟ್ ನೋಸ್ಡ್ ಫ್ರೂಟ್ ಬ್ಯಾಟ್, ಇಂಡಿಯನ್ ಕುಕ್ಕೂ, ಇಂಡಿಯನ್ ನೈಟ್ ಜಾರ್, ಬಾರ್ನ್ ಔಲ್ ಸೇರಿ ಹಲವು ಪಕ್ಷಿಗಳು ಪಟಾಕಿ ಗಾಯದಿಂದ ನರಳಾಡುತ್ತಿದೆ.
ಇದನ್ನೂ ಓದಿ: ಪಟಾಕಿ ಸಿಡಿಸುವುದರಲ್ಲಿ ಹುಡುಗಾಟ: ದೀಪಾವಳಿ ದಿನವೇ ಹಾರಿ ಹೋಯ್ತು ಯುವಕನ ಪ್ರಾಣಪಕ್ಷಿ
ಇನ್ನು ಮನುಷ್ಯರ ಬಗ್ಗೆ ಗಮನಹರಿಸುವುದಾರೆ, ಈ ಸಲ ದೀಪಾವಳಿಗೆ ದಾಖಲೆ ಪ್ರಮಾಣದಲ್ಲಿ ಪಟಾಕಿ ಕಣ್ಣಿನ ಅವಘಡ ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ 250 ಕ್ಕೂ ಹೆಚ್ಚು ಅವಘಡಗಳು ಜರುಗಿದೆ. ಮಿಂಟೋ ಆಸ್ಪತ್ರೆ ಸೇರಿ ನಾರಾಯಣ ನೇತ್ರಾಲಯ, ಕಿಮ್ಸ್, ಮೋದಿ ಕಣ್ಣಿನ ಆಸ್ಪತ್ರೆ, ಶಂಕರ್ ಐ ಹಾಸ್ಪಿಟಲ್ ನಲ್ಲಿ ಪ್ರಕರಣಗಳು ದಾಖಲಾಗಿದ್ದು, ಮಕ್ಕಳೇ ಹೆಚ್ಚು ಪಟಾಕಿ ಅವಘಡಕ್ಕೆ ಸಾಕ್ಷಿಯಾಗಿದ್ದಾರೆ.
ಈ ವರ್ಷ ಪಟಾಕಿ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಸರ್ಕಸ್ ಮಾಡಿತ್ತು. ಪ್ರತ್ಯೇಕ ಗೈಡ್ ಲೈನ್ಸ್ ಬಿಡುಗಡೆ ಮಾಡಿತ್ತು. ರಾತ್ರಿ 10 ಗಂಟೆ ನಂತರ ಪಟಾಕಿ ಹೊಡೆದರೆ ಕೇಸ್ ಎಂದು ಪೊಲೀಸ್ ಇಲಾಖೆ ವಾರ್ನ್ ಮಾಡಿತ್ತು. ಆದ್ರೆ ಅದ್ಯಾವುದು ವರ್ಕ್ ಔಟ್ ಆಗಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.