Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟಾಕಿ ಸಿಡಿಸುವುದರಲ್ಲಿ ಹುಡುಗಾಟ: ದೀಪಾವಳಿ ದಿನವೇ ಹಾರಿ ಹೋಯ್ತು ಯುವಕನ ಪ್ರಾಣಪಕ್ಷಿ

ಪಟಾಕಿ ಸಿಡಿಸುವುದರಲ್ಲಿ ಹುಡುಗಾಟ: ದೀಪಾವಳಿ ದಿನವೇ ಹಾರಿ ಹೋಯ್ತು ಯುವಕನ ಪ್ರಾಣಪಕ್ಷಿ

Shivaprasad
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2024 | 3:24 PM

ಕೆಲವರು ತಮ್ಮ ಅರಿವಿಗಿಲ್ಲದೇ ಒಂದಲ್ಲ ಒಂದು ರೀತಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇನ್ನೊಬ್ಬರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ. ಇಂತಹುದೆ ಒಂದು ಘಟನೆ ಬೆಂಗಳೂರಿನ ನಡೆದಿದ್ದು, ಪಟಾಕಿ ವಿಚಾರದಲ್ಲಿ ಹುಡುಗಾಟವಾಡಿ ಯುವಕನ ಪ್ರಾಣ ತೆಗೆದಿದ್ದಾರೆ.

ಬೆಂಗಳೂರು, (ನವೆಂಬರ್ 04): ದೀಪಾವಳಿ ದಿನವೇ ಪಟಾಕಿ ಸಿಡಿಸುವ ವಿಚಾರದಲ್ಲಿ ಹುಡುಗಾಟವಾಡಿದ್ದಕ್ಕೆ ಓರ್ವ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ. ಹೌದು…ಪಟಾಕಿ ಮೇಲೆ ಕುಳಿತುಕೊಳ್ಳುವ ಚಾಲೆಂಜ್​ನಲ್ಲಿ ಮದ್ಯಪಾನ‌ ಮಾಡಿದ್ದ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಶಬರೀಶ್ ಮೃತ ದುರ್ದೈವಿ. ಇನ್ನು ಯುವಕನ ಸಾವಿಗೆ ಕಾರಣರಾದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೀಪಾವಳಿ ದಿನ ರಾತ್ರಿ ಮೃತ ಶಬರೀಶ್ ಹಾಗೂ ಸ್ನೇಹಿತರು ಪಟಾಕಿ ಹೊಡೆಯುತ್ತಿದ್ದರು. ಆ ವೇಳೆ
ಡಬ್ಬಿಗೆ ಪಟಾಕಿ ಅಂಟಿಸಿ ಅದರ ಮೇಲೆ ಕೂರಲು ಚಾಲೆಂಜ್ ಮಾಡಿದ್ದರು. ಕುಡಿದ ಮತ್ತಿನಲ್ಲಿದ್ದ ಶಬರೀಶ್ ಪಟಾಕಿಯ ಡಬ್ಬ ಇಟ್ಟು ಕುಳಿತಿದ್ದ. ಪಟಾಕಿ ಸಿಡಿದ ರಭಸಕ್ಕೆ ಶಬರೀಶ್ ಗಂಭೀರ ಗಾಯಗೊಂಡಿದ್ದ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಶಬರೀಶ್ ಕೊನೆಯುಸಿರೆಳೆದಿದ್ದಾನೆ. ಇನ್ನು ಹುಡುಗಾಟಕ್ಕೆ ಗೆಳೆಯನ ಜೀವ ತೆಗೆದ ಆರು ಜನರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ