ನಿತ್ಯ ಹಿಂಬಾಲಿಸುತ್ತಿದ್ದ ವ್ಯಕ್ತಿಗೆ ಚಪ್ಪಲಿ ಏಟು ನೀಡಿದ ಮಹಿಳೆ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗೋಪಾಲ್ ಗುರನ್ನವರ್ ಎಂಬುವ ವ್ಯಕ್ತಿ ಹಲವು ತಿಂಗಳುಗಳಿಂದ ಹಿಂಬಾಲಿಸಿ ಚೂಡಾಯಿಸುತ್ತಿದ್ದ. ಇದೇ ರೀತಿ ನಿನ್ನೆ ಕೂಡ ಗೋಪಾಲ್ ಮಹಿಳೆಯನ್ನು ಹಿಂಬಾಲಿಸಿದ್ದಾನೆ.....

ನಿತ್ಯ ಹಿಂಬಾಲಿಸುತ್ತಿದ್ದ ವ್ಯಕ್ತಿಗೆ ಚಪ್ಪಲಿ ಏಟು ನೀಡಿದ ಮಹಿಳೆ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ವ್ಯಕ್ತಿಗೆ ಚಪ್ಪಲಿ ಏಟು
Updated By: ಆಯೇಷಾ ಬಾನು

Updated on: Jul 04, 2021 | 9:46 AM

ಬೆಳಗಾವಿ: ನಿತ್ಯ ಹಿಂಬಾಲಿಸಿ ಚೂಡಾಯಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಚಪ್ಪಲಿ ಏಟು ನೀಡಿದ ಘಟನೆ ಬೆಳಗಾವಿ‌ ನಗರದ ಎಸ್‌ಪಿ ಕಚೇರಿಯ ಮುಂದಿನ ರಸ್ತೆಯಲ್ಲಿ ನಡೆದಿದೆ. ಜುಲೈ 04ರ ಸಂಜೆ ಈ ಘಟ‌ನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚಪ್ಪಲಿಯಿಂದ ಹೊಡೆಯುವ ದೃಶ್ಯಗಳು ವೈರಲ್ ಆಗಿವೆ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗೋಪಾಲ್ ಗುರನ್ನವರ್ ಎಂಬುವ ವ್ಯಕ್ತಿ ಹಲವು ತಿಂಗಳುಗಳಿಂದ ಹಿಂಬಾಲಿಸಿ ಚೂಡಾಯಿಸುತ್ತಿದ್ದ. ಇದೇ ರೀತಿ ನಿನ್ನೆ ಕೂಡ ಗೋಪಾಲ್ ಮಹಿಳೆಯನ್ನು ಹಿಂಬಾಲಿಸಿದ್ದಾನೆ. ಹೀಗಾಗಿ ಕೋಪ ತಾರಕಕ್ಕೇರಿ ಗೋಪಾಲ್ನಿಗೆ ಮಹಿಳೆ ಚಪ್ಪಲಿ ಏಟು ನೀಡಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಹಿಂಬಾಲಿಸುತ್ತಿದ್ದನೆಂದು ನೊಂದ ಮಹಿಳೆ ಮತ್ತು ಆಕೆಯ ಪತಿಯಿಂದ ಕಾಮುಕನಿಗೆ ಚಪ್ಪಲಿ ಏಟು ಬಿದ್ದಿದೆ.

ಇನ್ನು ರಸ್ತೆಯಲ್ಲಿ ಈ ಘಟನೆ ನಡೆಯುತ್ತಿದ್ದಂತೆ ಸಾರ್ವಜನಿಕರು ಗುಂಪು ಸೇರಿದ್ದಾರೆ. ಮತ್ತೆ ಕೆಲ ಯುವಕರು ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಸಾರ್ವಜನಿಕರು ಸೇರುತ್ತಿದ್ದಂತೆ‌ ಗೋಪಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

ವ್ಯಕ್ತಿಗೆ ಚಪ್ಪಲಿ ಏಟು ನೀಡಿದ ಮಹಿಳೆ

ಇದನ್ನೂ ಓದಿ: Bharat Chemicals: ಮಹಾರಾಷ್ಟ್ರದ ಭಾರತ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಹಲವರಿಗೆ ಗಾಯ