Bharat Chemicals: ಮಹಾರಾಷ್ಟ್ರದ ಭಾರತ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಹಲವರಿಗೆ ಗಾಯ
Maharashtra: ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಳಗಿದ್ದವರನ್ನೆಲ್ಲ ರಕ್ಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿರುವ ಭಾರತ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಶನಿವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಅಗ್ನಿಶಾಮಕ ದಳಗಳು, ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಫೋಟದಲ್ಲಿ ಅನೇಕರು ಗಾಯಗೊಂಡಿದ್ದಾಗಿ ವರದಿಯಾಗಿದೆ. ಗಾಯಗೊಂಡವರನ್ನೆಲ್ಲ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಲ್ಗಾರ್ ಜಿಲ್ಲೆಯ ಬೋಯಿಸರ್ ತಾರಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಭಾರತ್ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ನಿನ್ನೆ ರಾತ್ರಿ ನಡೆದ ಸ್ಫೋಟದ ಸಾಂಧ್ರತೆ ತೀವ್ರವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಳಗಿದ್ದವರನ್ನೆಲ್ಲ ರಕ್ಷಣೆ ಮಾಡಿದ್ದಾರೆ. ಹಾಗಿದ್ದಾಗ್ಯೂ ಹಲವರು ಗಾಯಗೊಂಡಿದ್ದಾರೆ. ಕೆಲವರು ಉಸಿರಾಡಲಾಗದೆ ಅಸ್ವಸ್ಥರಾಗಿದ್ದಾರೆ. ಪಾಲ್ಗಾರ್ನಲ್ಲಿ ಜೂ.17ರಂದು ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟವಾಗಿ ಹಲವರು ಗಾಯಗೊಂಡಿದ್ದರು.
2019ರಲ್ಲಿ ಸ್ಫೋಟ ಪಾಲ್ಗಾರ್ ಕೈಗಾರಿಕಾ ಪ್ರದೇಶವಾಗಿದ್ದರಿಂದ ಅಲ್ಲಿ ಒಂದಲ್ಲ ಒಂದು ಕಾರ್ಖಾನೆಯಲ್ಲಿ ಪದೇಪದೆ ಸ್ಫೋಟವಾಗುತ್ತಲೇ ಇರುತ್ತದೆ. 2019ರಲ್ಲಿ ವರ್ಷಾ ಆರ್ಗಾನಿಕ್ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ, ಇಬ್ಬರು ಕೆಲಸಗಾರರು ಗಂಭೀರವಾಗಿ ಗಾಯಗೊಂಡಿದ್ದರು.
Maharashtra: An explosion took place at Bharat Chemicals in Plaghar’s Boisar Tarapur Industrial area yesterday. Injured admitted to Thunga hospital. More details awaited. pic.twitter.com/MNDIEFFFAq
— ANI (@ANI) July 3, 2021
ಇದನ್ನೂ ಓದಿ: Karnataka Weather: ಹವಾಮಾನ ವರದಿ- ಮುಂದಿನ 5 ದಿನ ವರುಣನ ಆರ್ಭಟ.. ಕರ್ನಾಟಕ ಸೇರಿ ಅನೇಕ ರಾಜ್ಯದಲ್ಲಿ ಮಳೆ
(Explosion Reported at Bharat Chemicals Factory in Maharashtra)