ತುಮಕೂರು: ನಗರದ ಸರಸ್ವತಿಪುರಂನಲ್ಲಿ ಅನುಮಾನಸ್ಪದವಾಗಿ ಮನೆಯ ಬೆಡ್ ಮೇಲೆ ಗೃಹಿಣಿ ಶವ ಪತ್ತೆಯಾಗಿದೆ. 1 ವರ್ಷದ ಹಿಂದೆ ವಿವಾಹವಾಗಿದ್ದ ಸೌಂದರ್ಯಎಂಬ ಮಹಿಳೆಯ ಶವ ಹೊಡೆದು ಸಾಯಿಸಿರುವ ರೀತಿಯಲ್ಲಿ ಮನೆಯಲ್ಲಿ ಶವ ಪತ್ತೆಯಾಗಿದೆ. ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಮೃತ ಐಶ್ವರ್ಯಾ ಪತಿ ನಾಗರಾಜ್ ಪತ್ನಿಯ ಕೊಲೆಯ ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.
ನಾಗರಾಜ್ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗರಾಜ್ ವರ್ಷದ ಹಿಂದೆ ಹಾಸನದ ಸಕಲೇಶಪುರದ ಸೌಂದರ್ಯ ಜೊತೆ ಮದುವೆಯಾಗಿದ್ದ. ಅಂದಿನಿಂದ ಇಂದಿನವರೆಗೂ ಈತ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಬೆಳಗ್ಗೆಯೇ ಪತ್ನಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ತುಮಕೂರು ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮದುವೆ ವಿಚಾರಕ್ಕೆ ವೃದ್ಧನನ್ನು ಹತ್ಯೆಗೈದಿದ್ದ ಆರೋಪಿಗಳು ಸೆರೆ
ಇನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗೌಡರಹುಂಡಿ ಬಿದರಗೂಡಿನ ರಾಂಪುರ ನಾಲೆ ಬಳಿ ಜೂ.2ರಂದು ವೃದ್ಧನ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಜಿಲ್ಲೆಯ ಹುಲ್ಲಹಳ್ಳಿ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಶರತ್‌ಕುಮಾರ್, ಮಧು, ಮಲ್ಲಿಗಮ್ಮ ಬಂಧಿತ ಆರೋಪಿಗಳು.
ಮೇ 28ರಂದು ಗೌಡರಹುಂಡಿಯ ಶಿವರಾಜಪ್ಪ ನಾಪತ್ತೆಯಾಗಿದ್ದರು. ಬಳಿಕ ಜೂ.2ರಂದು ಬಿದರಗೂಡಿನ ರಾಂಪುರ ನಾಲೆ ಬಳಿ ಶವ ಪತ್ತೆಯಾಗಿತ್ತು. ಗೌಡರಹುಂಡಿಯ ಮಹಿಳೆ ಮಲ್ಲಿಗಮ್ಮ ಜತೆ ಶರತ್‌ಕುಮಾರ್ಗೆ ಸ್ನೇಹವಾಗಿತ್ತು. ಮಲ್ಲಿಗಮ್ಮಳ ಮಗಳನ್ನ ಮೃತ ಶಿವರಾಜಪ್ಪನ ಮಗ ಪವನ್ ಕುಮಾರ್ ಪ್ರೀತಿಸುತ್ತಿದ್ದ. ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ಆದರೆ ಈ ಮದುವೆ ಮಲ್ಲಿಗಮ್ಮಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆ ತಪ್ಪಿಸಲು ಶರತ್‌ಕುಮಾರ್‌ಗೆ ಒತ್ತಾಯ ಮಾಡಿದ್ದಳು. ಅದೇ ಕಾರಣಕ್ಕೆ ಶರತ್‌ಕುಮಾರ್, ಶಿವರಾಜಪ್ಪನನ್ನು ಕೊಲೆ ಮಾಡಿದ್ದ. ಹಾಗೂ ಮಧು ಸಹಾಯದೊಂದಿಗೆ ಶವ ನಾಲೆಗೆ ಎಸೆದಿದ್ದ. ಸದ್ಯ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: Petrol Price Today: ಈಗಲೇ ಗರಿಷ್ಠ ಮಟ್ಟದಲ್ಲಿದೆ ಪೆಟ್ರೋಲ್, ಡೀಸೆಲ್ ಬೆಲೆ! ಇಂದು ಸಹ ಹೆಚ್ಚಳವಾಗಿದೆಯೇ?