ಕಷ್ಟ ಎಂದು ಪೊಲೀಸ್ ಠಾಣೆಗೆ ಹೋದ್ರೆ, ಪೇದೆಯಿಂದಲೇ ಮಹಿಳೆಗೆ ಲೈಂಗಿಕ ಕಿರುಕುಳ: ದೂರು ದಾಖಲು

| Updated By: ಆಯೇಷಾ ಬಾನು

Updated on: Jan 14, 2024 | 9:56 AM

ಕಷ್ಟ ಎಂದು ಪೊಲೀಸ್ ಠಾಣೆಗೆ ಹೋದ ಮಹಿಳೆಗೆ ಪೇದೆಯೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಕಮಲಾಪುರ ಠಾಣೆ ಕಾನ್ಸ್​ಟೇಬಲ್ ಬಸವರಾಜ ಎಂಬುವವರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ಘಟನೆ ಸಂಬಂಧ ಅದೇ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಕಷ್ಟ ಎಂದು ಪೊಲೀಸ್ ಠಾಣೆಗೆ ಹೋದ್ರೆ, ಪೇದೆಯಿಂದಲೇ ಮಹಿಳೆಗೆ ಲೈಂಗಿಕ ಕಿರುಕುಳ: ದೂರು ದಾಖಲು
ಕಮಲಾಪುರ ಠಾಣೆ
Follow us on

ಕಲಬುರಗಿ, ಜ.14: ಜನರನ್ನು ರಕ್ಷಣೆ ಮಾಡಬೇಕಿದ್ದ ಆರಕ್ಷಕರೇ ಭಕ್ಷಕರಾದರೆ ಜನ ಯಾರ ಬಳಿ ಹೋಗಬೇಕು? ಕಲಬುರಗಿ ಜಿಲ್ಲೆ ಕಮಲಾಪುರ ಠಾಣೆಯ (Kamalapur Police Station) ಕಾನ್ಸ್​ಟೇಬಲ್ ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಹ ಕೃತ್ಯ ಎಸಗಿದ್ದಾನೆ. ಕಷ್ಟ ಎಂದು ಪೊಲೀಸ್ ಠಾಣೆಗೆ ಹೋದ ಮಹಿಳೆಗೆ ಪೇದೆಯೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಕಮಲಾಪುರ ಠಾಣೆ ಕಾನ್ಸ್​ಟೇಬಲ್ ಬಸವರಾಜ ಎಂಬುವವರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ಘಟನೆ ಸಂಬಂಧ ಕಲಬುರಗಿ ಮಹಿಳಾ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.

ಪ್ರತಿ ದಿನ ಜಗಳ, ಹೊಡೆದಾಟ, ವಿಪರಿತ ಕುಡಿತದಿಂದ ಗಂಡನ ಕಾಟಕ್ಕೆ ಬೇಸತ್ತಿದ್ದ ಮಹಿಳೆ ದೂರು ನೀಡಲು ಕಮಲಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನ್ಯಾಯಕ್ಕಾಗಿ ಪೊಲೀಸರ ಮುಂದೆ ಕೈ ಚಾಚಿದ್ದರು. ಮಹಿಳೆಯ ಅಸಹಾಯಕತೆಯನ್ನು ನೋಡಿದ ಕಾನ್ಸ್​ಟೇಬಲ್ ಬಸವರಾಜ ಆಕೆಯ ಕಣ್ಣೀರೊರೆಸುವ ನೆಪದಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಬಳಿಕ ನನ್ನ ಜೊತೆ ಒಂದು ರಾತ್ರಿ ಮಲಗು ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮಹಿಳೆ ಬಳಿ ಹೇಳಿದ್ದ. ಅಷ್ಟೇ ಅಲ್ಲದೆ ಪ್ರತಿನಿತ್ಯ ವಾಟ್ಸಾಪ್ ಮೆಸೇಜ್ ಮಾಡಿ ಕಿರುಕುಳ‌ ನೀಡುತ್ತಿದ್ದ. ಸದ್ಯ ಕಿರುಕುಳ ತಾಳಲಾರದೆ ಕಲಬುರಗಿ ಮಹಿಳಾ ಠಾಣೆಯಲ್ಲಿ ಕಾನ್ಸ್​ಟೇಬಲ್ ಬಸವರಾಜ ವಿರುದ್ದ ಮಹಿಳೆ ದೂರು ದಾಖಲಿಸಿದ್ದಾರೆ. ಕಮಲಾಪುರ ಠಾಣೆಯಲ್ಲಿ ಐಪಿಸಿ ಸೆ.345a ಹಾಗು 506 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ತುಮಕೂರು: ಕೊಟ್ಟಿಗೆಗೆ ಬೆಂಕಿ ಬಿದ್ದು 9 ಜಾನುವಾರು, 20 ಮೇಕೆ, ಕುರಿ ಸಾವು

ಸ್ಯಾಂಡಲ್ ಸೋಪ್ ನಕಲಿ ಜಾಲ ಪತ್ತೆ

ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸಿ, ಮಾರಾಟ ಮಾಡ್ತಿದ್ದ ಜಾಲವನ್ನ ಪೊಲೀಸರು ಭೇದಿಸಿದ್ದಾರೆ. ಹೈದರಾಬಾದ್​​ನ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬುವವರನ್ನ ವಶಕ್ಕೆ ಪಡೆದಿರೋ ಪೊಲೀಸರು, ಸುಮಾರು 2ಕೋಟಿ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಸಚಿವ ಎಂ.ಬಿ.ಪಾಟೀಲ್​​ಗೆ ನಕಲಿ ಸೋಪ್ ಮಾರಾಟದ ಬಗ್ಗೆ ಬಂದಿದ್ದ ಕರೆ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ನಕಲಿ ಜಾಲ ಪತ್ತೆಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:49 am, Sun, 14 January 24