Kannada News Karnataka Women and Child Development Department started Nature therapy to Disabled Persons bengaluru news
ವಿಶೇಷ ಚೇತನರಿಂದ ಅರಳಿದ ತೋಟ; ಕೃಷಿಯಿಂದ ಆರೋಗ್ಯ ಸುಸ್ಥಿರಕ್ಕೆ ಮುಂದಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿಶೇಷ ಚೇತನರ ವಿಕಾಸನ ಮತ್ತು ಮಾನಸಿಕ ಸ್ಥಿತಿಗತಿಯನ್ನ ನಿವಾರಿಸುವ ಸಲುವಾಗಿ ಮಹಿಳಾ ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ವಿಕಲಚೇತನರ ನೇಚರ್ ಥೆರೆಪಿಯನ್ನ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಆರಂಭ ಮಾಡಿದೆ. ಉದ್ಯಾನವನ ನಿರ್ಮಿಸಿಲು 58 ಲಕ್ಷ ಖರ್ಚು ಮಾಡಿದ್ದು, ಪಾರ್ಕ್ ನಲ್ಲಿ ಟೊಮೆಟೊ, ಬದನೆಕಾಯಿ, ಪಾಲಕ್, ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಮುಂತಾದವುಗಳನ್ನು ವಿಶೇಷ ಚೇತನರೇ ಬೆಳೆದಿದ್ದಾರೆ.
1 / 7
ಅವರಿಗೆ ಮಾನಸಿನಲ್ಲಿ ಅದೆಷ್ಟೋ ಚಿಂತೆ, ವೇತನೆ, ದುಖಃ, ಪ್ರೀತಿಯ ಹಸಿವು, ಯಾವುದೆ ಕೆಲಸ ಮಾಡಲು ಆಸಕ್ತಿಯೆ ಇಲ್ಲದ ಜೀವನ. ಇಂತಹ ವಿಶೇಷ ಚೇತನರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶೇಷ ಪ್ರಕೃತಿಯ ಚಿಕಿತ್ಸೆ ಕೊಡುತ್ತಿದೆ. ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಗಾರ್ಡಾನ್ ನಲ್ಲಿ ವಿಶೇಷ ಚೇತನರು ಖುಷಿ ಖುಷಿಯಾಗಿ ಕೃಷಿ ಮಾಡಿದ್ದಾರೆ.
2 / 7
ನಿರಸಾಕ್ತಿಯ ಸಮಸ್ಯೆಯನ್ನ ಹೊಂದಿರುವ ವಿಕಲಚೇತನರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕೃತಿ ಚಿಕಿತ್ಸೆ ಕೊಡಲು ಮುಂದಾಗಿದ್ದು, ಈ ಪ್ರಕೃತಿಯ ಚಿಕಿತ್ಸೆಯಲ್ಲಿ ಅರಳಿದ ಕಲೆಯೇ ಈ ಸುಂದರವಾದ ಪಾರ್ಕ್.
3 / 7
ವಿಶೇಷ ಚೇತನರ ವಿಕಾಸನ ಮತ್ತು ಮಾನಸಿಕ ಸ್ಥಿತಿಗತಿಯನ್ನ ನಿವಾರಿಸುವ ಸಲುವಾಗಿ ಮಹಿಳಾ ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ವಿಕಲಚೇತನರ ನೇಚರ್ ಥೆರೆಪಿಯನ್ನ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಆರಂಭ ಮಾಡಿದೆ.
4 / 7
ಕಳೆದ ಆರು ತಿಂಗಳಿನಿಂದ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯ ಸಹಯೋಗದೊಂದಿಗೆ ವಿಕಲಚೇತನರ ಶ್ರಮದಿಂದ ಹೂವಿನ ಗಿಡಗಳು, ಬಗೆ - ಬಗೆಯ ಔಷಧೀಯ ಸಸ್ಯಗಳಿಂದ ದೊಡ್ಡ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಉದ್ಯಾನವನ ನಿರ್ಮಿಸಿಲು 58 ಲಕ್ಷ ಖರ್ಚು ಮಾಡಿದ್ದು, ಪಾರ್ಕ್ ನಲ್ಲಿ ಟೊಮೆಟೊ, ಬದನೆಕಾಯಿ, ಪಾಲಕ್, ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಮುಂತಾದವುಗಳನ್ನು ವಿಶೇಷ ಚೇತನರೇ ಬೆಳೆದಿದ್ದಾರೆ.
5 / 7
ಸಧ್ಯ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ಒಟ್ಟು 150 ಜನ ವಿಶೇಷ ಚೇತನರಿದ್ದು, ಪ್ರತಿದಿನ ಈ ಪಾರ್ಕ್ ಗಳಿಗೆ ಬಂದು ಕೆಲಸ ಮಾಡಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಈ ಯೋಜನೆಯಿಂದ ವಿಶೇಷ ಚೇತನರ ಆರೋಗ್ಯದಲ್ಲಿ ಒಂದಷ್ಟು ಬದಲಾವಣೆಯಾಗಿದ್ದು, ನಿದ್ದೆ, ಊಟ, ಟ್ರೀಟ್ ಮೆಂಟ್ ಚೆನ್ನಾಗಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಮಹಿಳಾ ಅಭಿವೃದ್ಧಿ ಇಲಾಖೆ ಈ ಯೋಜನೆಯನ್ನ ಜಾರಿ ಮಾಡಿದೆ.
6 / 7
ಇದಕ್ಕೆ ಸರ್ಕಾರವು ಸಾಥ್ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮಾಡಬೇಕು ಎನ್ನುವ ಯೋಚನೆ ಇದೆ. ಇನ್ನು, ಈ ಉದ್ಯಾನದಲ್ಲಿ ಬೆಳೆಯುವ ತರಕಾರಿಗಳನ್ನ ಮಾರಾಟ ಮಾಡಲಿದ್ದು, ವಿಶೇಷ ಚೇತನರು ಖುಚಿ ಪಡ್ತಿದ್ದಾರೆ ಅಂತ ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಎಸ್ ಸಿದ್ದರಾಮಣ್ಣ ಸಂತೋಷ ವ್ಯಕ್ತಪಡಿಸಿದ್ರು.
7 / 7
ಇಷ್ಟು ದಿನ ಮೆಡಿಸನ್ ಕೊಟ್ರು ವಿಶೇಷ ಚೇತನರ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಆಗ್ತಾ ಇರ್ಲಿಲ್ಲ. ಆದ್ರೀಗಾ ಪ್ರಕೃತಿಯ ಮಡಿಲಲ್ಲಿ ಕೆಲಸ ಮಾಡಿಸುವ ಜೊತೆಗೆ ವಿಶೇಷ ಚೇತನರ ಆರೋಗ್ಯವು ಸುಧಾರಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ಇದನ್ನ ಪರಿಚಯಿಸುವ ಗುರಿಯಲ್ಲಿ ಇಲಾಖೆ ಇದೆ.
Published On - 2:40 pm, Thu, 1 February 24