ಅಳಿಯನಿಂದಲೇ ಸಂಬಂಧಿಕರಿಗೆ ಬೆಂಕಿ ಹಚ್ಚಿರುವ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸಾವು
ಅಡುಗೆ ಮಾಡುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಜಗಳ ಕೈ ಮೀರಿ ವೇಲ್ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ಯಾದಗಿರಿ: ಅಳಿಯನಿಂದಲೇ ಸಂಬಂಧಿಕರಿಗೆ ಬೆಂಕಿ (Fire) ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿಯಲ್ಲಿ ಬೆಂದು ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಸಾವನ್ನಪ್ಪಿದ್ದಾರೆ. ಹೆಂಡತಿ ತವರು ಮನೆಯವರನ್ನ ಬೆಂಕಿ ಹಚ್ಚಲು ಮನೆ ಕಾರಣವಾಯಿತಾ ಎನ್ನುವ ಪ್ರಶ್ನೆ ಉಂಟಾಗಿದೆ. ನಾರಾಯಣಪುರದಲ್ಲಿರುವ ಮನೆ ಪತ್ನಿ ಹುಲಿಗಮ್ಮ ಹೆಸರಲ್ಲಿರುವ ಮನೆ ತನ್ನ ಹೆಸರಿಗೆ ಮಾಡಿಕೊಡುವಂತೆ ಪಾಪಿ ಆರೋಪಿ ಶರಣಪ್ಪ ಕೇಳಿದ್ದ. ಮನೆ ತನ್ನ ಹೆಸರಿಗೆ ಮಾಡಿದ ಬಳಿಕ ಡೈವೋರ್ಸ್ ನೀಡುವುದಾಗಿ ಶರಣಪ್ಪ ಹೇಳಿದ್ದ. ಮನೆಯನ್ನ ಹೆಸರಿಗೆ ಮಾಡಲು ಒಪ್ಪದ್ದಕ್ಕೆ ಆರೋಪಿ ಶರಣಪ್ಪ ಬೆಂಕಿ ಹಚ್ಚಿದ್ದಾನೆ. ನ್ಯಾಯ ಪಂಚಾಯತಿ ಮಾಡಲು ಹೆಂಡಲು ಹಾಗೂ ಮಕ್ಕಳನ್ನೂ ಸಹ ಕರೆದುಕೊಂಡು ಬರಲು ಆರೋಪಿ ಹೇಳಿದ್ದು, ಆದರೆ ಮಕ್ಕಳು ಹಾಗೂ ಹೆಂಡ್ತಿಯನ್ನ ಸಂಬಂಧಿಕರು ಕರೆದುಕೊಂಡು ಬಾರದೆ ತಾವೆ ಬಂದಿದ್ದರು. ನ್ಯಾಯ ಪಂಚಾಯತಿ ಹೆಸರಲ್ಲಿ ಅಮಾನವೀಯ ಕೃತ್ಯ ನಡೆದಿದೆ. ನಿನ್ನೆ ನಾರಾಯಣಪುರದಲ್ಲಿ ಘಟನೆ ನಡೆದಿದ್ದು, ಬೆಂಕಿಯಲ್ಲಿ ಬೆಂದಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಡುಗೆ ಮಾಡುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ: ಪತ್ನಿ ಕೊಲೆ
ನೆಲಮಂಗಲ: ಅಡುಗೆ ಮಾಡುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಜಗಳ ಕೈ ಮೀರಿ ವೇಲ್ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಗಂಗಮ್ಮ(55) ಕೊಲೆಯಾದ ಪತ್ನಿ. ಪತಿ ರಾಮು ಮತ್ತವನ ಸ್ನೇಹಿತ ಬಸವನಗೌಡನನ್ನ ಪೊಲೀಸರು ಬಂಧಿಸಿದ್ದಾರೆ. ವೇಲ್ನಿಂದ ಕುತ್ತಿಗೆ ಬಿಗಿದು ಪತ್ನಿಯ ಮೃತದೇಹವನ್ನು ಹೊನ್ನೇನಹಳ್ಳಿ ಕೆರೆಗೆ ಎಸೆದಿದ್ದ. ಆರೋಪಿಗಳನ್ನು ದಾಬಸ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ
ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ನ್ನ ಬೆಳಗ್ಗಿ ಜಾವ 5ರ ಸಮಯದಲ್ಲಿ ಕದ್ದು ಕಳ್ಳರು ಎಸ್ಕೆಪ್ ಆಗಿದ್ದಾರೆ. ಹೋಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ ಮಾಡಿದ ಕಳ್ಳುರು, ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿಸಿಟಿವಿ ಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಬೈಕ್ ಅಲ್ಲಿ ಬಂದ ಗ್ಯಾಂಗ್ ಬೈಕ್ ಕಳ್ಳತನ ಮಾಡಿದೆ. ಬೈಕ್ ಮಾಲೀಕನಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಸ್ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯ: ಆಯ ತಪ್ಪಿ ಬಿದ್ದ ವಿದ್ಯಾರ್ಥಿನಿ
ಮಂಗಳೂರು: ಬಸ್ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯದಿಂದ ಫುಟ್ ಬೋರ್ಡ್ನಿಂದ ವಿದ್ಯಾರ್ಥಿನಿ ಆಯ ತಪ್ಪಿ ಬಿದಿದ್ದು, ಭಾರೀ ಅನಾಹುತ ತಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಬಳಿ ನಡೆದಿದೆ. ವಿದ್ಯಾರ್ಥಿನಿ ಬಸ್ನ ಒಳಗೆ ಹೋಗುವ ಮೊದಲೇ ಖಾಸಗಿ ಬಸ್ ಚಲಿಸಿದೆ. ಕಾಲೇಜು ವಿದ್ಯಾರ್ಥಿನಿಯರು ಬಸ್ ಹತ್ತುತ್ತಿದ್ದ ವೇಳೆ ನಿರ್ವಾಹಕ ನಿರ್ಲಕ್ಷ್ಯ ತೋರಿದ್ದಾರೆ. ಫುಟ್ ಬೋರ್ಡ್ನಲ್ಲಿದ್ದಾಗಲೇ ಚಾಲಕ ಏಕಾಏಕಿ ಬಸ್ ಚಲಾಯಿಸಿದ್ದು, ಚಲಿಸುತ್ತಿದ್ದ ಬಸ್ ನಿಂದ ಆಯತಪ್ಪಿ ವಿದ್ಯಾರ್ಥಿನಿ ರಸ್ತೆಗೆ ಬಿದಿದ್ದಾಳೆ. ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕುವುದರಿಂದ ಅದೃಷ್ಟವಶಾತ್ ವಿದ್ಯಾರ್ಥಿನಿ ಪಾರಾಗಿದ್ದು, ಬಸ್ ಚಾಲಕ, ನಿರ್ವಾಹಕನ ನಿರ್ಲಕ್ಷ್ಯದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಬೆಳಗಾವಿಯಲ್ಲಿ ತಲೆಮೇಲೆ ಕಲ್ಲುಎತ್ತಿಹಾಕಿ ಯುವಕನ ಹತ್ಯೆ
ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಗರದ ಉದ್ಯಮಭಾಗ್‌ದಲ್ಲಿ ದುಷ್ಕರ್ಮಿಗಳಿಂದ ಕೃತ್ಯ ಮಾಡಲಾಗಿದೆ. ಮಜಗಾವಿಯ ಯಲ್ಲೇಶ್ ಕೊಲ್ಕರ್(27)ಕೊಲೆಯಾದ ವ್ಯಕ್ತಿ. ತಡರಾತ್ರಿ ನಾಲ್ಕು ಜನರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಉದ್ಯಮಭಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ:Karnataka Rain: ಜುಲೈ 1ರಿಂದ ನಾಲ್ಕು ದಿನ ಕರ್ನಾಟಕಾದ್ಯಂತ ಅಧಿಕ ಮಳೆಯ ಮುನ್ಸೂಚನೆ