ಕಬ್ಬಡ್ಡಿ ಪಂದ್ಯದ ವೇಳೆ ತಪ್ಪು ತೀರ್ಪು ನೀಡಿದ ಆರೋಪ; ದೈಹಿಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಯುವಕ

ಯಾದಗಿರಿ ತಾಲೂಕಿನ ವನಗೇರ ಹಾಗೂ ಗುರುಮಠಕಲ್‌ ತಾಲೂಕಿನ ಎಲ್ಹೇರಿ ಗ್ರಾಮದ ಶಾಲೆಗಳ ಮದ್ಯೆ ಕಬ್ಬಡಿ ಪಂದ್ಯ ನಡೆದಿತ್ತು. ಈ ವೇಳೆ ಎಲ್ಹೇರಿ ತಂಡದ ಪರ ತಪ್ಪು ತೀರ್ಪು ನೀಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಕೊರಳ ಪಟ್ಟಿ ಹಿಡಿದು ಶಿಕ್ಷಕನ ಮೇಲೆ‌ ಹಲ್ಲೆ ನಡೆಸಿದ್ದ.

ಕಬ್ಬಡ್ಡಿ ಪಂದ್ಯದ ವೇಳೆ ತಪ್ಪು ತೀರ್ಪು ನೀಡಿದ ಆರೋಪ; ದೈಹಿಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಯುವಕ
ಯಾದಗಿರಿ
Edited By:

Updated on: Sep 26, 2023 | 8:43 PM

ಯಾದಗಿರಿ, ಸೆ.26: ಒಂದು ಕಾಲದಲ್ಲಿ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳು ಮಾರುದ್ದ ಹೆದರಿ ನಿಲ್ಲುತ್ತಿದ್ದರು. ಇಂದು ವಿದ್ಯೆ ಕಲಿಸಿದ ಗುರುಗಳನ್ನೆ ದಂಡಿಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಹೌದು, ಅದರಂತೆ ತಪ್ಪು ತೀರ್ಪು ನೀಡಿದ ಆರೋಪದ ಮೇಲೆ ಯುವಕನೊಬ್ಬ ದೈಹಿಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆ ಯಾದಗಿರಿ(Yadagiri) ಯಲ್ಲಿ ನಡೆದಿದೆ. ಹೌದು, ಇಂದು(ಸೆ.26) ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಘಟನೆ ನಡೆದಿದೆ.

ಹಲ್ಲೆ ನಡೆಸಿದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯರು

ಹೌದು, ಯಾದಗಿರಿ ತಾಲೂಕಿನ ವನಗೇರ ಹಾಗೂ ಗುರುಮಠಕಲ್‌ ತಾಲೂಕಿನ ಎಲ್ಹೇರಿ ಗ್ರಾಮದ ಶಾಲೆಗಳ ಮದ್ಯೆ ಕಬ್ಬಡಿ ಪಂದ್ಯ ನಡೆದಿತ್ತು. ಈ ವೇಳೆ ಎಲ್ಹೇರಿ ತಂಡದ ಪರ ತಪ್ಪು ತೀರ್ಪು ನೀಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಕೊರಳ ಪಟ್ಟಿ ಹಿಡಿದು ಶಿಕ್ಷಕನ ಮೇಲೆ‌ ಹಲ್ಲೆ ನಡೆಸಿದ್ದ. ಬಳಿಕ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಯುವಕನಿಗೆ ಅಲ್ಲಿಯೇ ಇದ್ದ ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ. ಈ ಘಟನೆ ಯಾದಗಿರಿ ನಗರ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಯಲಹಂಕ: ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಖಾಸಗಿ ಶಾಲಾ ಶಿಕ್ಷಕನಿಂದ ಹಲ್ಲೆ, ಆರೋಪಿ ಅರೆಸ್ಟ್

ರಜೆಗೆ ಬಂದಿದ್ದ ಯೋಧನಿಂದ ಗುಂಡು ಹಾರಿಸಿ ಕೊಲೆಗೆ ಯತ್ನ

ಬೆಳಗಾವಿ: ಸಾಲ ವಾಪಾಸ್ ಕೊಡದಿದ್ದಕ್ಕೆ ರಜೆಗೆ ಬಂದಿದ್ದ ಯೋಧನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಯೋಧ ನಂಜುಂಡಿ ಬೂದಿಹಾಳ ಎಂಬಾತ ಭಾರತೀಯ ಸೇನೆಯಲ್ಲಿರುವ ಬಸಪ್ಪ ಬಂಬರಗಾ(32)ಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ. ಆತನನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಲಕ್ಷ ಹಣದ ವಿಚಾರಕ್ಕೆ ನಡೆದ ಗಲಾಟೆ ಇದಾಗಿದ್ದು, ಮಾತಿಗೆ ಮಾತು ಬೆಳೆದು ಈ ದುರ್ಘಟನೆ ನಡೆದಿದೆ. ಇನ್ನು ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಆರೋಪಿ ನಂಜುಂಡಿಯನ್ನು ಅಂಕಲಗಿ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ