ಹತ್ತಿಕುಣಿ ಜಲಾಶಯ ಈಗ ಜನರ ಹಾಟ್ ಫೇವರಿಟ್ ಸ್ಪಾಟ್, ಜಲಧಾರೆ ಅಂದ ಸವಿಯಲು ಯಾದಗಿರಿಗೆ ಬಂತು ಪ್ರವಾಸಿ ದಂಡು
Hattikuni Dam: ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಈಗ ಸುಂದರ ತಾಣವಾಗಿ ಬದಲಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿಕೊಂಡಿದೆ. ನೀರಿನಿಂದ ಜಲಾಶಯ ಕಂಗೊಳಿಸ್ತಿದೆ. ನೋಡುಗರ ಕಣ್ಮಣ ಸೆಳೆಯುತ್ತಿದೆ.

ಯಾದಗಿರಿ: ವರುಣನ ಅಬ್ಬರಕ್ಕೆ ಹಳ್ಳ-ಕೊಳ್ಳಗಳು, ನದಿ ಮತ್ತು ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಮಳೆರಾಯನ ಆರ್ಭಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಗಾರದಂತಹ ಬೆಳೆಯೂ ನೀರು ಪಾಲಾಗಿದೆ. ಆದ್ರೆ, ಇಲ್ಲೊಂದು ಪ್ಲೇಸ್ ಪ್ರವಾಸಿ ತಾಣವಾಗಿ ಬದ್ಲಾಗಿದೆ. ಯಾದಗಿರಿ ಜಿಲ್ಲೆಯ ಜನರ ಹಾಟ್ ಫೇವರಿಟ್ ಸ್ಪಾಟ್ ಆಗಿದೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಈಗ ಸುಂದರ ತಾಣವಾಗಿ ಬದಲಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿಕೊಂಡಿದೆ. ನೀರಿನಿಂದ ಜಲಾಶಯ ಕಂಗೊಳಿಸ್ತಿದೆ. ನೋಡುಗರ ಕಣ್ಮಣ ಸೆಳೆಯುತ್ತಿದೆ. ಪ್ರವಾಸಿಗರ ಪಾಲಿಗೆ ಫೇವರಿಟ್ ಸ್ಪಾಟ್ ಆಗಿದೆ. ಸುತ್ತಲು ಗುಡ್ಡಗಾಡು, ನಡುವಲ್ಲಿ ಜಲಾಶಯ ಇರೋದ್ರಿಂದ ಪ್ರವಾಸಿಗರು ಆಗಮಿಸ್ತಿದ್ದಾರೆ. ಯುವಕ ಮತ್ತು ಯುವತಿಯರಂತೂ ಫ್ರೆಂಡ್ಸ್ ಜೊತೆ ಇಲ್ಲಿಗೆ ಬರ್ತಿದ್ದಾರೆ. ಡ್ಯಾಂನಲ್ಲಿ ಫೋಟೋಗೆ ಪೋಸ್ ಕೊಟ್ಟು, ಕಾಲ ಕಳೀತಾರೆ. ಇಷ್ಠೇ ಅಲ್ಲ, ಡ್ಯಾಂ ಗೇಟ್ಗಳ ಮೇಲೆ ಹೋಗಲು ನಿರ್ಬಂಧವಿದ್ರೂ ಯುವಕರು ಪಕ್ಕದಲ್ಲೇ ನಿಂತ್ಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಿದ್ದಾರೆ.
ಇನ್ನು, ಡ್ಯಾಂನತ್ತ ಪ್ರವಾಸಿಗರನ್ನ ಸೆಳೆಯುವುದ್ದಕ್ಕೆ ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಡ್ಯಾಂ ಬಳಿ ಗಾರ್ಡನ್ ರೆಡಿಯಾಗಿದೆ. ಇಲ್ಲಿಗೆ ಬರುವ ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳನ್ನ ಹೊಸದಾಗಿ ಅಳವಡಿಸಲಾಗಿದೆ. ಜೊತೆಗೆ ಇಲ್ಲಿ ರಾತ್ರಿ ಹೊತ್ತು ಸ್ಟೇ ಮಾಡಲು ಅನುಕೂಲವಿದೆ. ಹೀಗಾಗಿ ಇಲ್ಲಿ ಕಾಲ ಕಳೆಯೋಕೆ ಯಾದಗಿರಿ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರು ಕೂಡ ಬರ್ತಿದ್ದಾರೆ.
ಸದ್ಯ, ಜಲಧಾರೆ, ಜಲಪಾತ ನೋಡಬೇಕಾದ್ರೆ ಮಲೆನಾಡು ಭಾಗಕ್ಕೆ ಹೋಗುತ್ತಿದ್ದ ಪ್ರವಾಸಿಗರು ಈಗ ಹತ್ತಿಕುಣಿ ಜಲಾಶಯಕ್ಕೆ ಬರ್ತಿದ್ದಾರೆ. ಸುಂದರ ತಾಣದಲ್ಲಿ ಕಾಲ ಕಳೆದು ಖುಷಿ ಪಡ್ತಿದ್ದಾರೆ.

ಹತ್ತಿಕುಣಿ ಜಲಾಶಯ

ಹತ್ತಿಕುಣಿ ಜಲಾಶಯ
ಇದನ್ನೂ ಓದಿ: Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ