ಯಾದಗಿರಿ: ಕೊರೊನಾ ರೂಪಾಂತರ ತಳಿಯ (covid variant BF.7) ಆತಂಕದ ಹಿನ್ನಲೆ ಜಿಲ್ಲೆಯಲ್ಲಿ ಮಾಸ್ಕ್ (Mask) ಕಡ್ಡಾಯಗೊಳಿಸಲಾಗಿದೆ. ಸರ್ಕಾರದಿಂದ ನಿನ್ನೆ ಕೊರೊನಾ (Covid) ನಿಯಂತ್ರಣ ಮಾರ್ಗಸೂಚಿ ಬಂದಿದೆ. ಜಿಲ್ಲೆಯಲ್ಲಿ ಇಂದಿನಿಂದ (ಡಿ.23) ಮಾರ್ಗಸೂಚಿ ಅನ್ವಯ ಆಗುತ್ತೆ. ಜ್ವರ, ಶೀತ ಬಂದರೆ ಟೆಸ್ಟ್ ಮಾಡಲಾಗುತ್ತೆ ಎಂದು ಜಿಲ್ಲಾ ವೈದ್ಯಾಧಿಕಾರಿ (DHO) ಡಾ.ಗುರುರಾಜ್ ಹಿರೇಗೌಡರ್ ತಿಳಿಸಿದ್ದಾರೆ. ಬಸ್ಗಳಲ್ಲಿ ಪ್ರಯಾಣಿಸುವಾಗ ಎಲ್ಲರೂ ಮಾಸ್ಕ್ ಧರಿಸಬೇಕು. ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ (Booster Dose) ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದರು.
ಕೊವಿಡ್ ಪಾಸಿಟಿವ್ ಕಂಡು ಬಂದರೆ ಮನೆಯಲ್ಲಿಯೇ ಐಸೋಲೆಟ್ ಮಾಡಲಾಗುತ್ತೆ. ಬೂಸ್ಟರ್ ಡೋಸ್ ನೀಡುವ ಕೆಲಸ ಚುರುಕು ಮಾಡಲಾಗುತ್ತೆ. ನಮ್ಮಲ್ಲಿ ಸದ್ಯ 10 ಸಾವಿರ ಡೋಸ್ ಸ್ಟಾಕ್ ಇವೆ. ನಮ್ಮ ಇಲಾಖೆಯ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ನೀಡಲು ಕೋವಿಶಿಲ್ಡ್ ಕೊರತೆ ಇದೆ ಎಂದ ಬಿಬಿಎಂಪಿ ಆಯುಕ್ತ, ಕೊರತೆ ಇಲ್ಲ ಎಂದ ಸಚಿವ
ವಿದೇಶಗಳಲ್ಲಿ ಕೊರೊನಾ ಉಲ್ಬಣವಾಗುತ್ತಿದೆ. ಹಾಗೇ ಭಾರತ ಸೇರಿ ಪ್ರಪಂಚದ ಇತರ ದೇಶಗಳಲ್ಲಿ ಕೊರೊನಾ ಹರಡುತ್ತಿದೆ. ಈ ಹಿನ್ನೆಲೆ ಜನರ ನಡುವೆ ಅಂತರವಿಟ್ಟು ಉತ್ತಮ ರೀತಿಯಲ್ಲಿ ಕ್ರಿಸ್ಮಸ್ ಆಚರಿಸಿ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಕರೆ ನೀಡಿದ್ದಾರೆ.
ಎರಡು ವರ್ಷದ ಅನುಭವವಿದ್ದು ಕೊರೊನಾ ಹರಡದಂತೆ ಅನೇಕ ಕ್ರಮವನ್ನೂ ತೆಗೆದುಕೊಂಡಿದ್ದೇವೆ. ಸರ್ಕಾರ ನೀಡಿದ ನಿಯಮ ಪಾಲಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಜೇಷನ್ ಮಾಡಿದ ಅನುಭವವಿದೆ. ಅಂದಿನ ದಿನದ ಅನುಭವವನ್ನು ನಾವು ಮರೆಯಬಾರದು. ನಾವು ಕ್ರಿಸ್ಮಸ್ ಹಬ್ಬ ಆಚರಣೆ ಮಾಡುವಾಗ ನಮ್ಮನ್ನು ರಕ್ಷಿಸಿಕೊಳ್ಳುವ ಇತರರನ್ನು ರಕ್ಷಿಸುವ.
ಇದನ್ನೂ ಓದಿ: ಭಾರತದಲ್ಲಿ ಹೊಸದಾಗಿ 163 ಕೊರೊನಾ ಪ್ರಕರಣಗಳು ಪತ್ತೆ
ಸಾರ್ವಜನಿಕ ಸ್ಥಳಗಳಲ್ಲಿ, ದೇವರಿಗೆ ಆರಾಧನೆ ಮಾಡುವ ಸ್ಥಳದಲ್ಲಿ ಬೇಕಾದ ಜಾಗ್ರತೆ ವಹಿಸಿ. ಜನರ ನಡುವೆ ಅಂತರವಿಟ್ಟು ಉತ್ತಮ ರೀತಿಯಲ್ಲಿ ಕ್ರಿಸ್ಮಸ್ ಹಬ್ಬ ಆಚರಿಸಬೇಕು. ದೇವರು ನಮ್ಮೊಡನೆ ಇದ್ದಾನೆ ಎಂದು ಕ್ರಿಸ್ಮಸ್ ಆಚರಿಸಬೇಕು. ನಮ್ಮ ಚರಿತ್ರೆಯ ಒಡೆಯನೇ ಅವನು. ಒಳಿತು, ಕೆಡುಕುಗಳನ್ನು ನೋಡಿ ದೇವರು ಆಶೀರ್ವಾದ ಮಾಡುತ್ತಾನೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೆದರದೆ ಸಂತೋಷದಿಂದ ಹಬ್ಬ ಆಚರಿಸಬೇಕು. ನಮ್ಮ ಮನಸ್ಸಿನಲ್ಲಿ, ಮನೆಗಳಲ್ಲಿ, ವಾತವರಣದಲ್ಲಿ ಸಂತೋಷದ ಅಲೆಯನ್ನು ಹಬ್ಬಿಸೋಣ ಎಂದು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Fri, 23 December 22