Gurmitkal: ಗುರುಮಠಕಲ್ ಜೆಡಿಎಸ್ ಅಭ್ಯರ್ಥಿ ಧರಿಸಿದರು ಅಯ್ಯಪ್ಪಸ್ವಾಮಿ ಮಾಲೆ, ಪೂಜೆಯಲ್ಲಿ ಭಾಗಿಯಾದರು ನಿಖಿಲ್ ಕುಮಾರಸ್ವಾಮಿ
JDS: ಗುರುಮಠಕಲ್ ಜೆಡಿಎಸ್ ನ ಅಭ್ಯರ್ಥಿ ಶರಣಗೌಡ ಕಂದಕೂರ್ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ರು.
ಆ ಪಟ್ಟಣದಲ್ಲಿ ನಿನ್ನೆ ಬುಧವಾರ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಕಾರ್ಯಕ್ರಮವಿತ್ತು.. ಥೇಟ್ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಂತೆ ವೇದಿಕೆಯನ್ನ ನಿರ್ಮಾಣ ಮಾಡಲಾಗಿತ್ತು.. ಕೇರಳದ ತಂತ್ರಿ ಸ್ವಾಮಿಗಳಿಂದ ಮಹಾ ಪಡಿ ಪೂಜೆಯನ್ನ ಮಾಡಲಾಗಿದೆ.. ಇದೆ ಪಡಿ ಪೂಜೆ ಕಾರ್ಯಕ್ರಮದ ಮೂಲಕ ಜೆಡಿಎಸ್ ಅಭ್ಯರ್ಥಿ (JDS) ಚುನಾವಣೆಗೆ ಸಿದ್ದತೆ ಮಾಡಿಕೊಂಡಂತಿತ್ತು.. ಹೇಗಿತ್ತು ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ (Ayyappa Swamy Maha Padi Pooja) ಕಾರ್ಯಕ್ರಮ ಅಂತೀರಾ ಈ ಸ್ಟೋರಿ ನೋಡಿ.. ಗುರುಮಠಕಲ್ ನಡೆದಿತ್ತು ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಕಾರ್ಯಕ್ರಮ.. ಕೇರಳದ ತಂತ್ರಿ ಸ್ವಾಮಿಗಳಿಂದ ನಡೆದ ಪಡಿ ಪೂಜೆ ವಿಶೇಷ ಹೋಮ ಹವನ.. ಪಡಿ ಪೂಜೆ ಕಾರ್ಯಕ್ರಮದ ಮೂಲಕ ಚುನಾವಣಾ ಪ್ರಚಾರ (Karnataka Assembly Elections 2023) ಆರಂಭಿಸಿದ ಶರಣಗೌಡ ಕಂದಕೂರ್.. (Sharanagouda Kandkur) ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ (Yadgir) ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ.. (Gurmitkal)
ಹೌದು ಅಂದು ಇಡೀ ಗುರುಮಠಕಲ್ ಪಟ್ಟಣದಲ್ಲಿ ಸಾವಿರಾರು ಜನರಿಗೆ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವಂತ ಭಾಗ್ಯ ಸಿಕ್ಕಂತಾಗಿದೆ.. ಒಂದೆ ವೇದಿಕೆಯಲ್ಲಿ ನೂರಾರು ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳನ್ನ ಕಣ್ತುಂಬಿಕೊಳ್ಳುವಂತಹ ಅವಕಾಶವನ್ನ ಸಿಕ್ಕಂತಾಗಿತ್ತು. ಅದಕ್ಕೆ ಕಾರಣ ಅಂದ್ರೆ ಗುರುಮಠಕಲ್ ಜೆಡಿಎಸ್ ನ ಅಭ್ಯರ್ಥಿ ಶರಣಗೌಡ ಕಂದಕೂರ್ ಇದೆ ಮೊದಲ ಬಾರಿ ಅಯ್ಯಪ್ಪ ಸ್ವಾಮಿ ಮಾಲೆಯನ್ನ ಧರಿಸಿದ್ದಾರೆ.
ಹೀಗಾಗಿ ಈ ಭಾಗದಲ್ಲಿ ಅಯ್ಯಪ್ಪ ಸ್ವಾಮಿಯ ಬಗ್ಗೆ ಮಾಹಿತಿ ಸಿಗಲಿ ಎನ್ನುವ ಕಾರಣಕ್ಕೆ ಖುದ್ದ ಶರಣಗೌಡ ಅವರೇ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ರು.. ವಿಶೇಷವಾಗಿ ಕೇರಳಿಂದ 10 ಜನ ತಂತ್ರಿ ಸ್ವಾಮಿಗಳನ್ನ ಕರೆಸಿ ಮಹಾ ಪಡೆ ಪೂಜೆಯನ್ನ ಮಾಡಿಸಿದ್ರು.. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಡುವಿಲ್ಲದೆ ವಿಶೇಷ ಹೋಮ ಹವನ ನಡೆದಿದೆ. ಜೊತೆಗೆ ಪೂಜೆಯಲ್ಲಿ ಭಾಗಿಯಾಗಿದ್ದ ಜಿಲ್ಲೆ ಸೇರಿದಂತೆ ನಾನಾ ಕಡೆಯಿಂದ ಬಂದಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸ್ವಾಮಿಯೇ ಅಯ್ಯಪ್ಪ ಅಂತ ಘೋಷಣೆ ಕೂಗುತ್ತಿದ್ರು..
ಗುರುಮಠಕಲ್ ಪಟ್ಟಣದಲ್ಲಿರುವ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರ ಕಚೇರಿ ಬಳಿಯೇ ಬೃಹತ್ ವೇದಿಕೆಯನ್ನ ಸಿದ್ದಪಡಿಸಲಾಗಿತ್ತು.. ಸಾವಿರಾರು ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನ ಮಾಡಲಾಗಿತ್ತು.. ಹೀಗಾಗಿ ಇದೆ ಮೊದಲ ಬಾರಿ ಈ ಭಾಗದಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಮಹಾ ಪಡಿ ಪೂಜೆ ಕಾರ್ಯಕ್ರಮ ಮಾಡಿದ್ದು ವಿಶೇಷವಾಗಿತ್ತು.. ಮಾಲಾಧಾರಿಗಳಲ್ಲದೆ ಸಾವಿರಾರು ಜನ ಅಯ್ಯಪ್ಪ ಸ್ವಾಮಿಯ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.. ಜೊತೆಗೆ ಶಬರಿಮಲೆಗೆ ಹೋಗುವ ಬದಲು ಇಲ್ಲೇ ಅಯ್ಯಪ್ಪ ಸ್ವಾಮಿಯ ದರ್ಶನವನ್ನ ಪಡೆದು ಪುನೀತರಾದ್ರು.
ಇನ್ನು ವಿಶಾಲವಾದ ವೇದಿಕೆಯ ಪ್ರಧಾನ ವೇದಿಕೆಯ ಮೇಲೆ ಸಿದ್ದಗೊಂಡ ಸುವರ್ಣ ವರ್ಣದ ಸಾಕ್ಷಾತ್ ಅಯ್ಯಪ್ಪ ಸ್ವಾಮಿ ತದ್ರೂಪಿ ಸನ್ನಿಧಾನವನ್ನು ಸ್ಥಾಪಿಸಲಾಗಿತ್ತು. ಮಧ್ಯೆದಲ್ಲಿ ಅಯ್ಯಪ್ಪಸ್ವಾಮಿ, ಎಡಬಲದಲ್ಲಿ ವಿಘ್ನೇಶ್ವರ, ಕುಮಾರಸ್ವಾಮಿಯ ವಿಗ್ರಹಗಳನ್ನು ಸ್ಥಾಪನೆ ಮಾಡಲಾಗಿತ್ತು. ಅಯ್ಯಪ್ಪನ ಸನ್ನಿಧಾನಕ್ಕೆ ಕೇರಳದಿಂದ ಆಗಮಿಸಿದ ಹತ್ತು ಜನರ ತಂತ್ರಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗಿ
ಬೆಳಿಗ್ಗೆಯಿಂದಲೇ ಪ್ರಧಾನ ವೇದಿಕೆಯಲ್ಲಿ ಕೇರಳದಿಂದ ಆಗಮಿಸಿದ ತಂತ್ರಿಗಳ ಸಮ್ಮುಖದಲ್ಲಿ ಅಯ್ಯಪ್ಪಸ್ವಾಮಿಗೆ ವಿವಿಧ ಪೂಜೆ, ಕೈಂಕರ್ಯಗಳು ಜರುಗಿದವು. ಪೂಜೆಯು ಶ್ರದ್ಧಾಭಕ್ತಿಯೊಂದಿಗೆ ಅಪಾರ ಜನಸ್ತೋಮದ ಮಧ್ಯೆ ಅದ್ಧೂರಿಯಾಗಿ ಜರುಗಿತು. ಸ್ವಾಮಿಯೇ ಅಯ್ಯಪ್ಪ… ಸ್ವಾಮಿಯೇ ಶರಣಂ ಅಯ್ಯಪ್ಪ… ಎಂಬ ಉದ್ಘೋಷ ಎಲ್ಲೆಡೆ ನಿನಾದವು ಮುಗಿಲು ಮುಟ್ಟಿತ್ತು.
ಓಟಿಡಿ ದೇವಸ್ಥಾನದ ನಾದವೃಂದದಿಂದ ವಿಶೇಷ ಗಾಯನ ಸುಧೆ ಜರುಗಿತು. ವೇದಿಕೆಯ ಮುಂಭಾಗದಲ್ಲಿ ಸಹಸ್ರರಾರು ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡು ಭಜನೆ ಮಾಡಿದರು. ಇನ್ನು ಮಾಲಾಧಾರಿಗಳು ಹಾಗೂ ಸಾವಿರಾರು ಭಕ್ತರಿಗೆ ಭರ್ಜರಿ ಭೋಜನದ ವ್ಯವಸ್ಥೆಯನ್ನ ಮಾಡಲಾಗಿತ್ತು.. ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕೂಡ ಭಾಗವಹಿಸಿದ್ರು. ವೇದಿಕೆ ಮೇಲೆ ಅಯ್ಯಪ್ಪ ಸ್ವಾಮಿಯ ದರ್ಶನ ಕೂಡ ಪಡೆದ್ರು..
ಇನ್ನು ಇದೆ ವೇದಿಕೆಯನ್ನ ಚುನಾವಣಾ ಪ್ರಚಾರಕ್ಕಾಗಿ ಸಹ ಬಳಕೆ ಮಾಡಿಕೊಂಡಿದ್ದು ಗಮನ ಹರಿಸುವ ಸಂಗತಿಯಾಗಿತ್ತು.. ಆರಂಭದಲ್ಲಿ ಧಾರ್ಮಿಕ ಕಾರ್ಯಕ್ರಮ ತರಹ ಕಂಡಿದ್ದು ನಾನಾ ಪಕ್ಷದ ಮುಖಂಡರು ಪೂಜೆಯಲ್ಲಿ ಭಾಗವಹಿಸಿದ್ರು.. ಆದ್ರೆ ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಜೆಡಿಎಸ್ ಪ್ರಚಾರ ಸಭೆ ಕೂಡ ಆಗಿ ಬದಲಾಗಿತ್ತು.. ಭಾಷಣ ಮಾಡುತ್ತಾ ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.. ಇನ್ನು ಗುರುಮಠಕಲ್ ಕ್ಷೇತ್ರದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಶಬರಿಮಲೆಗೆ ಹೋಗುವ ವಾಹನ ವ್ಯವಸ್ಥೆಯನ್ನ ಮಾಡಿದ್ದಾರೆ. ಮಾಲಾಧಾರಿಯಾಗಿರುವ ಶರಣಗೌಡ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.
ಒಟ್ನಲ್ಲಿ ಗಿರಿನಾಡು ಯಾದಗಿರಿ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಕಾರ್ಯಕ್ರಮ ಆಯೋಜನೆಯಾಗಿತ್ತು.. ಇನ್ನು ಇದೇ ವೇದಿಕೆ ಮೂಲಕ ಗುರುಮಠಕಲ್ ನಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಕೂಡ ಆರಂಭಿಸಿದೆ ಅಂದ್ರೆ ತಪ್ಪಾಗಲಾರದು.
ವರದಿ: ಅಮೀನ್ ಹೊಸುರ್, ಟಿವಿ 9, ಯಾದಗಿರಿ
Published On - 6:41 pm, Thu, 22 December 22