ನಾನು ಯಾರು ಗೊತ್ತಾ ನಿಮಗೆ, ನನ್ನ ಮುಂದೆ ಮಾತಾಡ್ತೀರಾ; ಎಣ್ಣೆ ಅಮಲಿನಲ್ಲಿ ಅಧಿಕಾರಿಗಳಿಗೆ ಆವಾಜ್ ಹಾಕಿದ ಯುವಕ
ಯಾದಗಿರಿ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದೆ. ಆದ್ರೆ ನೈಟ್ ಕರ್ಫ್ಯೂ ಉಲ್ಲಂಘಿಸಿ ಡಾಬಾ ತೆರೆದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಾಬಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಮಾಡಿ ದಂಡ ವಿಧಿಸಲು ಮುಂದಾದ ವೇಳೆ ಯುವಕ ಮತ್ತು ಅಧಿಕಾರಿಗಳ ಜೊತೆ ಗಲಾಟೆಯಾಗಿದೆ.

ಯಾದಗಿರಿ: ಎಣ್ಣೆ ಅಮಲಿನಲ್ಲಿ ಯುವಕನೋರ್ವ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ನಿವಾಸಿ ಭೀಮರಡ್ಡಿ ಕುರಕುಂದಿ ಎಂಬ ಯುವಕ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾನೆ.
ಯಾದಗಿರಿ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದೆ. ಆದ್ರೆ ನೈಟ್ ಕರ್ಫ್ಯೂ ಉಲ್ಲಂಘಿಸಿ ಡಾಬಾ ತೆರೆದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಾಬಾ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಮಾಡಿ ದಂಡ ವಿಧಿಸಲು ಮುಂದಾದ ವೇಳೆ ಯುವಕ ಮತ್ತು ಅಧಿಕಾರಿಗಳ ಜೊತೆ ಗಲಾಟೆಯಾಗಿದೆ. ಎಸಿ ಪ್ರಶಾಂತ್, ನಗರಸಭೆ ಆಯುಕ್ತ ಬಿಟಿ ನಾಯಕ್ ಹಾಗೂ ತಹಶೀಲ್ದಾರ್ ಜೊತೆ ಯುವಕ ಭೀಮರಡ್ಡಿ ಕುರಕುಂದಿ ಕಿರಿಕ್ ಮಾಡಿಕೊಂಡಿದ್ದಾನೆ. ನಾನು ಯಾರು ಗೊತ್ತಾ ನಿಮಗೆ, ನನ್ನ ಮುಂದೆ ಮಾತಾಡ್ತೀರಾ ಅಂತ ಏರು ಧ್ವನಿಯಲ್ಲಿ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾರೆ.

ಎಣ್ಣೆ ಅಮಲಿನಲ್ಲಿ ಅಧಿಕಾರಿಗಳಿಗೆ ಆವಾಜ್ ಹಾಕಿದ ಯುವಕ
ಇದನ್ನೂ ಓದಿ:ಕೊಪ್ಪಳದಲ್ಲಿ ಎರಡು ಲಾರಿಗಳ ನಡುವೆ ಅಪಘಾತ; ಲಾರಿಗಳ ನಡುವಲ್ಲಿ ಸಿಕ್ಕಿಕೊಂಡ ನಾಲ್ವರು