ಯಾದಗಿರಿ: ಮುಸಲ್ಮಾನರ ಜಾತ್ರೆಗೆ ಹಿಂದೂಗಳದ್ದೇ ಮುಂದಾಳತ್ವ! ಆ ಮೆರವಣಿಗೆಯಲ್ಲಿ ಮೆರೆದಿದ್ದು ಅಪ್ಪಟ ಹಿಂದೂ-ಮುಸ್ಲಿಂ ಭಾವೈಕ್ಯತೆ

| Updated By: ಆಯೇಷಾ ಬಾನು

Updated on: Apr 08, 2022 | 3:27 PM

ಯರಗೋಳ ಗ್ರಾಮದ ಹಜರತ್ ಜಮಾಲುದ್ದೀನ್ ಸಾಹೇಬ್ ದೇವರ ಜಾತ್ರೆ ನಡೆಯುತ್ತೆ. ನಿನ್ನೆ ರಾತ್ರಿ ವೇಳೆ ಗ್ರಾಮದ ಮುಲ್ಲಗಳ ಮನೆಯಿಂದ ಗಂಧ ಹೊರಡುತ್ತೆ. ಈ ಗಂಧವನ್ನ ಮುಲ್ಲಗಳ ಮನೆಯಿಂದ ಆರಂಭವಾಗಿ ದರ್ಗಾದ ವರೆಗೆ ಮೆರವಣಿಗೆ ಮೂಲಕ ಸಾಗುತ್ತೆ. ಇಡೀ ಗಂಧದ ಮೆರವಣಿಗೆ ಹಾಗೂ ಜಾತ್ರೆಯನ್ನ ಹಿಂದೂ ಸಮುದಾಯದವರೇ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಯಾದಗಿರಿ: ಮುಸಲ್ಮಾನರ ಜಾತ್ರೆಗೆ ಹಿಂದೂಗಳದ್ದೇ ಮುಂದಾಳತ್ವ! ಆ ಮೆರವಣಿಗೆಯಲ್ಲಿ ಮೆರೆದಿದ್ದು ಅಪ್ಪಟ  ಹಿಂದೂ-ಮುಸ್ಲಿಂ ಭಾವೈಕ್ಯತೆ
ಯಾದಗಿರಿ: ಮುಸಲ್ಮಾನರ ಜಾತ್ರೆಗೆ ಹಿಂದೂಗಳದ್ದೇ ಮುಂದಾಳತ್ವ! ಆ ಮೆರವಣಿಗೆಯಲ್ಲಿ ಮೆರೆದಿದ್ದು ಅಪ್ಪಟ ಹಿಂದೂ-ಮುಸ್ಲಿಂ ಭಾವೈಕ್ಯತೆ
Follow us on

ಯಾದಗಿರಿ: ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಹಿಂದೂ-ಮುಸ್ಲಿಂ ವಿವಾದ ಜೋರಾಗಿ ನಡೆಯುತ್ತಿದೆ. ಹಿಂದೂ ದೆವರ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಬ್ಯಾನ್ ಮಾಡಲಾಯ್ತು. ಮುಸ್ಲಿಮರು ಮಾರಾಟ ಮಾಡುವ ಹಲಾಲ್ ಕಟ್ ಮಾಂಸವನ್ನ ಖರೀದಿ ಮಾಡಬಾರದು ಅಂತ ಅಭಿಯಾನ ನಡೆಸಲಾಯ್ತು. ಇದರ ಜೊತೆ ಮುಸ್ಲಿಮರು ಮಾರಾಟ ಮಾಡುವ ಮಾವು ಖರೀದಿ ಮಾಡಬಾರದು ಅಂತಲೂ ಸುದ್ದಿ ಜೋರಾಗಿತ್ತು. ಹಿಜಾಬ್ ವಿಚಾರಕ್ಕೆ ಶುರುವಾಗಿದ್ದ ಧರ್ಮಯುದ್ಧ ದಿನಕ್ಕೊಂದು ದಾರಿ ಹಿಡಿಯುತ್ತಿದೆ. ಇದರ ಮಧ್ಯೆ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದಲ್ಲಿ ವಿಶೇಷ ರೀತಿ ಜಾತ್ರೆ ನಡೆದಿದೆ. ಎರಡು ಧರ್ಮದ ಜನ ಸೇರಿ ಮುಸ್ಲಿಂ ದೇವರ ಜಾತ್ರೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಯರಗೋಳ ಗ್ರಾಮದ ಹಜರತ್ ಜಮಾಲುದ್ದೀನ್ ಸಾಹೇಬ್ ದೇವರ ಜಾತ್ರೆ ನಡೆಯುತ್ತೆ. ನಿನ್ನೆ ರಾತ್ರಿ ವೇಳೆ ಗ್ರಾಮದ ಮುಲ್ಲಗಳ ಮನೆಯಿಂದ ಗಂಧ ಹೊರಡುತ್ತೆ. ಈ ಗಂಧವನ್ನ ಮುಲ್ಲಗಳ ಮನೆಯಿಂದ ಆರಂಭವಾಗಿ ದರ್ಗಾದ ವರೆಗೆ ಮೆರವಣಿಗೆ ಮೂಲಕ ಸಾಗುತ್ತೆ. ಇಡೀ ಗಂಧದ ಮೆರವಣಿಗೆ ಹಾಗೂ ಜಾತ್ರೆಯನ್ನ ಹಿಂದೂ ಸಮುದಾಯದವರೇ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಗಂಧದ ಮೆರವಣಿಗೆಯಲ್ಲಿ ಹಿಂದೂ ಸಮುದಾಯದ ಯುವಕರು ಕೋಲಾಟ ಮೂಲಕ ರಂಗು ತಂದ್ರು. ಇನ್ನು ಇವತ್ತು ಬೆಳಗ್ಗೆ ಜಾತ್ರ ಮಹೋತ್ಸವ ನಡೆಯಿತು. ಗ್ರಾಮದ ಹಿಂದೂ ಮುಸ್ಲಿಂ ಸಮುದಾಯದವರು ದೇವರಲ್ಲಿ ಬೇಡಿಕೊಂಡ ಹರಕೆಯನ್ನ ಕುರಿ ಬಲಿ ಕೊಟ್ಟು ತೀರಿಸುದ್ರು. ಇನ್ನು ಹಿಂದೂ ಸಮುದಾಯದ ಜನ ಮಕ್ಕಳು ಜವಳು ಕಾರ್ಯ ಸಹ ಇದೆ ದರ್ಗಾದ ಆವರಣದಲ್ಲಿ ನೆರವೇರಿಸಿದ್ರು. ಹಣೆಗೆ ಕುಂಕುಮ ಹಚ್ಚಿಕೊಂಡು ಹಿಂದೂ ಸಮುದಾಯದ ಜನ ದರ್ಗಾಕ್ಕೆ ಬಂದು ದರ್ಶನ ಪಡೆದ್ರು. ಇದು ಕಳೆದ 45 ವರ್ಷಗಳಿಂದ ಜಾತ್ರೆ ನಡೆದುಕೊಂಡು ಬಂದಿದೆ. ಇನ್ನು ಈ ಜಾತ್ರೆ ಸಂಪೂರ್ಣ ಜವಾಬ್ದಾರಿಯನ್ನ ಹಿಂದೂ ಸಮುದಾಯದವರೇ ವಹಿಸಿಕೊಳ್ಳುತ್ತಾರೆ.

ಕಳೆದ 45 ವರ್ಷಗಳಿಂದ ನಮ್ಮೂರಿನ ಜಾತ್ರೆಯನ್ನ ಮಾಡ್ತಾಯಿದ್ದೆವೆ. ಮುಸ್ಲಿಂ ಸಮುದಾಯದ ದರ್ಗಾ ಆದ್ರು ಇಲ್ಲಿ ಹಿಂದೂಗಳೆ ಮುಂದಾಳತ್ವ ವಹಿಸಿಕೊಂಡು ಜಾತ್ರೆ ಮಾಡುತ್ತಾರೆ. ನಮ್ಮೂರಲ್ಲಿ ಯಾವುದೇ ಜಾತಿ ಧರ್ಮ ಭೇದ ಭಾವ ಇಲ್ಲ ಎನುತ್ತಾರೆ ಗ್ರಾಮಸ್ಥ ಗ್ರಾಮದ ಮಹೆಬೂಬ್ ಸಾಬ್.

ನಮ್ಮೂರಲ್ಲಿನ ಜಮಾಲೋದ್ದೀನ್ ದರ್ಗಾದ ಜಾತ್ರೆಯನ್ನ ಮುಸ್ಲಿಂ ಭಾಂದವರು ಚಾಲನೆ ನೀಡ್ತಾರೆ. ಆದ್ರೆ ಇಡೀ ಜಾತ್ರೆಯನ್ನ ನಾವೆ ಮುಂದಾಳತ್ವ ವಹಿಸಿಕೊಂಡು ಮಾಡುತ್ತೆವೆ. ನಮ್ಮೂರಲ್ಲಿ ಎಲ್ಲಾ ಸಮೂದಾಯದವರು ಒಗ್ಗಟ್ಟಾಗಿದ್ದೆವೆ ಎನ್ನುತ್ತಾರೆ ಹಿಂದೂ ಸಮುದಾಯದ ನಿಂಗಾರೆಡ್ಡಿ ಮಾನೇಗಾರ.

ವರದಿ: ಅಮೀನ್, ಟಿವಿ9 ಯಾದಗಿರಿ

ಹಜರತ್ ಜಮಾಲುದ್ದೀನ್ ಸಾಹೇಬ್ ದರ್ಗಾ

ಯಾದಗಿರಿ: ಮುಸಲ್ಮಾನರ ಜಾತ್ರೆಗೆ ಹಿಂದೂಗಳದ್ದೇ ಮುಂದಾಳತ್ವ! ಆ ಮೆರವಣಿಗೆಯಲ್ಲಿ ಮೆರೆದಿದ್ದು ಅಪ್ಪಟ ಹಿಂದೂ-ಮುಸ್ಲಿಂ ಭಾವೈಕ್ಯತೆ

ಇದನ್ನೂ ಓದಿ: ಸಂಪರ್ಕ ಭಾಷೆಯಾಗಿ ಹಿಂದಿ ಬಳಸಬೇಕೆಂದು ಸಚಿವ ಅಮಿತ್​ ಶಾ ಫರ್ಮಾನು -ಸರಣಿ ಟ್ವೀಟ್ ಮೂಲಕ ಗುಡುಗಿದ ಸಿದ್ದರಾಮಯ್ಯ

ಚಿರು ಸರ್ಜಾ ಕೊನೇ ಸಿನಿಮಾಗೆ ಕಂಠದಾನ ಮಾಡಿದ ಧ್ರುವ ಸರ್ಜಾ