AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಂತರ ಮಳೆ, ಯಾದಗಿರಿ ಜಿಲ್ಲೆಯಾದ್ಯಂತ ಇಂದು ಶಾಲೆಗಳಿಗೆ ರಜೆ ಘೋಷಣೆ

ಕಳೆದ ಮೂರು ದಿನಗಳಿಂದ ಯಾದಗಿರಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳೀಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ನಿರಂತರ ಮಳೆ, ಯಾದಗಿರಿ ಜಿಲ್ಲೆಯಾದ್ಯಂತ ಇಂದು ಶಾಲೆಗಳಿಗೆ ರಜೆ ಘೋಷಣೆ
ಸಾಂದರ್ಭಿಕ ಚಿತ್ರ
ಅಮೀನ್​ ಸಾಬ್​
| Updated By: ರಮೇಶ್ ಬಿ. ಜವಳಗೇರಾ|

Updated on:Jul 21, 2023 | 6:43 AM

Share

ಯಾದಗಿರಿ, (ಜುಲೈ 21): ಜೂನ್​ನಲ್ಲಿ ಕೈಕೊಟ್ಟಿ ಮುಂಗಾರು ಮಳೆ (Rain) ಜುಲೈ ಅಂತ್ಯದಲ್ಲಿ ವರುಣದೇವ ಕೃಪೆ ತೋರಿದ್ದಾನೆ. ಕಳೆದ ಮೂರು ದಿನಗಳಿಂದ ಯಾದಗಿರಿ(Yadagir) ಜಿಲ್ಲೆಯಾದ್ಯಂತ 3 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು (ಜುಲೈ 21) ಯಾದಗಿರಿ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ (School Holiday) ಘೋಷಣೆ ಮಾಡಲಾಗಿದೆ. ಯಾದಗಿರಿ, ಸುರಪುರ, ಹುಣಸಗಿ, ಶಹಾಪುರ, ವಡಗೇರಾ ಹಾಗೂ ಗುರಮಠಕಲ್ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ, ಅನುದಾನ ರಹಿತ ಶಾಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇಂದಿನ ಬದಲಿಗೆ ಭಾನುವಾರ ಶಾಲೆಗಳ್ನು ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Karnataka Rain: ಕರ್ನಾಟಕದ ಹಲವೆಡೆ ಸುರಿದ ಮಳೆ, ಯಾದಗಿರಿ ಮೇಲೆ ಬೀರದ ವರುಣನ ಕೃಪೆ 

ಕಳೆದ ಹಲವು ದಿನಗಳಿಂದ ಕರ್ನಾಟಕದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಸಹ ಯಾದಗಿರಿಯಲ್ಲಿ ಮಾತ್ರ ಮಳೆ ಅಭಾವದಿಂದ ರೈತರು ಸಂಕಷ್ಟ ಎದುರಿಸುವಂತಾಗಿತ್ತು. ತಮ್ಮ ಜಿಲ್ಲೆಗೆ ವರುಣ ದೇವನ ಕೃಪೆ ಯಾವಾಗ ಆಗಲಿದೆ ಎಂದು ಅನ್ನದಾತರು ಯೋಚಿಸುತ್ತಿದ್ದರು. ಕೊನೆಗೂ ಮಳೆರಾಯ ಯಾದಗಿರಿ ಜಿಲ್ಲೆ ರೈತರ ಪಾಲಿಗೆ ಬಂದಿದ್ದು, ಕಳೆದ ಮೂರು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಇದರಿಂದ ಹೊ;-ಗದ್ದೆಗಳು ಹಸಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ತೀರ್ಥಹಳ್ಳಿಯಲ್ಲಿ ಹಲವು ಶಾಲೆಗಳಿಗೆ ರಜೆ

ಶಿವಮೊಗ್ಗ, (ಜುಲೈ 21): ಶಿವಮೊಗ್ಗದಲ್ಲೂ ಸಹ ಭಾರಿ ಮಳೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಪಟ್ಟಣದ ವಾಗ್ದೇವಿ, ಸೆಂಟ್ ಮೇರಿಸ್ ಹಾಗೂ ಸಹ್ಯಾದ್ರಿ ಶಾಲೆಗಳಿಗೆ ಇಂದು ರಜೆ ನೀಡಿ ಬಿಇಒ ಗಣೇಶ್ ಆದೇಶ ಹೊರಡಿಸಿದ್ದಾರೆ. ಉಳಿದ ಶಾಲೆಗಳಿಗೆ ಪರಿಸ್ಥಿತಿ ನೋಡಿ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:41 am, Fri, 21 July 23