ಸರ್ಕಾರ ನೀಡಿದ ಕೋವಿಡ್ ಪರಿಹಾರ ಚೆಕ್ ಬೌನ್ಸ್! ಸುತ್ತಿ ಸುತ್ತಿ ಸುಸ್ತಾದರೂ ಪರಿಹಾರ ಹಣ ಮಾತ್ರ ಕೈಗೆ ಸಿಗ್ತಿಲ್ಲ
ಅನಿತಾ ಚೆಕ್ ಹಿಡಿದು ಹಲವು ಬ್ಯಾಂಕ್ಗಳನ್ನು ಸುತ್ತುತಿದ್ದಾರೆ. ಆದ್ರೆ ಪರಿಹಾರ ಹಣ ಮಾತ್ರ ಕೈಗೆ ಸಿಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ಇತರೆ ಕಾರಣ ಎಂದು ಬರೆದು ಚೆಕ್ ವಾಪಸ್ ನೀಡಿ ಕಳಿಸುತ್ತಿದ್ದಾರೆ. ಮತ್ತೆ ಕೆಲವು ಕಡೆ ಸರಿಯಾದ ಸ್ಪಂದನೆಯೇ ಸಿಗದೆ ಕುಟುಂಬ ನೊಂದಿದೆ.
ಯಾದಗಿರಿ: ಮಹಾಮಾರಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ನೀಡಿದ್ದ ಪರಿಹಾರ ಚೆಕ್ ಈಗ ಯಾವುದೇ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಕೈಯಲ್ಲಿ ಚೆಕ್ ಇದ್ದರೂ ಹಣ ಮಾತ್ರ ಸಿಗುತ್ತಿಲ್ಲ. ಪರಿಹಾರ ಹಣ ಸಿಗದೆ ಫಲಾನುಭವಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಅದರಂತೆಯೇ ಶಾಸಕರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗಿತ್ತು. ಆದ್ರೆ ಈಗ ಇತರೆ ಕಾರಣ ಎಂದು ಬರೆದು ಚೆಕ್ ವಾಪಸ್ ನೀಡಿ ಬ್ಯಾಂಕ್ ಸಿಬ್ಬಂದಿ ಕಳಿಸುತ್ತಿದ್ದಾರೆ. ಹತ್ತಾರು ಬಾರಿ ಬ್ಯಾಂಕ್ಗಳಿಗೆ ಸುತ್ತಿದರೂ ಪ್ರಯೋಜನವಾಗದೆ ಪರದಾಡುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿಯ ಬಸಣ್ಣಗೌಡ ಎಂಬುವವರು ಕೊರೊನಾದಿಂದ ಮೃತಪಟ್ಟಿದ್ದರು. ಪರಿಹಾರಕ್ಕಾಗಿ ಅವರ ಮಗಳು ಅನಿತಾ ಎಲ್ಲಾ ದಾಖಲೆಗಳ ಅರ್ಜಿ ಸಲ್ಲಿಸಿದ್ದರು. ಅದರಂತೆ ಅನಿತಾ ಸೇರಿದಂತೆ ಉಳಿದ ಅರ್ಹ ಅರ್ಜಿದಾರರಿಗೆ ಡಿಸೆಂಬರ್ 17ರಂದು ಸುರಪುರ ಶಾಸಕ ರಾಜುಗೌಡ ಸಮ್ಮುಖದಲ್ಲಿ ಚೆಕ್ ನೀಡಲಾಗಿತ್ತು.
ಸದ್ಯ ಅನಿತಾ ಚೆಕ್ ಹಿಡಿದು ಹಲವು ಬ್ಯಾಂಕ್ಗಳನ್ನು ಸುತ್ತುತಿದ್ದಾರೆ. ಆದ್ರೆ ಪರಿಹಾರ ಹಣ ಮಾತ್ರ ಕೈಗೆ ಸಿಗುತ್ತಿಲ್ಲ. ಬ್ಯಾಂಕ್ ಸಿಬ್ಬಂದಿ ಇತರೆ ಕಾರಣ ಎಂದು ಬರೆದು ಚೆಕ್ ವಾಪಸ್ ನೀಡಿ ಕಳಿಸುತ್ತಿದ್ದಾರೆ. ಮತ್ತೆ ಕೆಲವು ಕಡೆ ಸರಿಯಾದ ಸ್ಪಂದನೆಯೇ ಸಿಗದೆ ಕುಟುಂಬ ನೊಂದಿದೆ.
ಹೆಸರಿಗೆ ಮಾತ್ರ ಕೋವಿಡ್ ಪರಿಹಾರ ಕೈಗೆ ಬರ್ತಾಯಿಲ್ಲ ಹಣ ಇನ್ನು ಇದೇ ರೀತಿ ಮತ್ತೊಂದು ಕುಟುಂಬ ಕೂಡ ಹಣಕ್ಕಾಗಿ ಅಲೆದಾಡಿ ಹೈರಾಣಾಗಿದೆ. ಚೆಕ್ ಪಡೆದ ದೇವಿಕೇರ ಗ್ರಾಮದ ಕುಟುಂಬ ಬ್ಯಾಂಕ್ಗೆ ಅಲೆದು ಅಲೆದು ಬೇಸತ್ತಿದೆ. ಸುರಪುರ ತಾಲೂಕಿನ ದೇವಿಕೇರ ಗ್ರಾಮದ ನಾಗಪ್ಪ ಕೋವಿಡ್ನಿಂದ ಮೃತಪಟ್ಟಿದ್ದರು. ಇವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಲಾಗಿತ್ಪತು. ಆದ್ರೆ ಎಷ್ಟೋ ಬ್ಯಾಂಕ್ಗಳಿಗೆ ಅಲೆಯುತ್ತಿದ್ರು ಹಣ ಮತ್ರ ಜಮೆ ಆಗುತ್ತಿಲ್ಲ ಎಂದು ಕುಟುಂಬ ಅಳಲು ತೋಡಿಕೊಂಡಿದೆ.
ನಾನೇ ಕೆಲ ಫಲನಾಭವಿಗಳಿಗೆ ಕಳೆದ ತಿಂಗಳು ಪರಿಹಾರದ ಚೆಕ್ ವಿತರಣೆ ಮಾಡಿದ್ದೇನೆ. ಆದ್ರೆ ಜಾಲಿಬೆಂಚಿ ಹಾಗೂ ದೇವಿಕೇರದ ಕುಟುಂಬಗಳಿಗೆ ಚೆಕ್ ನೀಡಿದ್ರು ಹಣ ಖಾತೆಗೆ ಜಮಾ ಆಗಿಲ್ಲ ಎನ್ನುವ ವಿಚಾರ ಗೊತ್ತಾಗುತ್ತಿದಂತೆ ಬ್ಯಾಂಕ್ ಮ್ಯಾನೇಜರ್ ಗೆ ಮಾತಾಡಿದ್ದೇನೆ ಇದು ಬ್ಯಾಂಕ್ ನವರ ತಪ್ಪಿನಿಂದ ಆಗಿದ್ದು ಸರಿ ಪಡಿಸಲು ಹೇಳಿದ್ದೇನೆ ಎಂದು ಸುರಪುರದ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಯಾವುದೋ ಒಂದು ಜಿಲ್ಲೆಯಲ್ಲಿ ಚೆಕ್ ಬೌನ್ಸ್ ಆಗಿದೆ ಅನ್ನೋದು ಗಮನಕ್ಕೆ ಬಂದಿದೆ. ಯಾದಗಿರಿಯಲ್ಲಿ ಆ ರೀತಿಯಾಗಿದೆ ಪರಿಶೀಲನೆ ಮಾಡಿ ಕ್ರಮತೆಗೆದುಕೊಳ್ಳಲು ಹೇಳಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: South Africa vs India: ಇಂದು ಭಾರತ- ದಕ್ಷಿಣ ಆಫ್ರಿಕಾ ಎರಡನೇ ಏಕದಿನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಹುಲ್ ಪಡೆ
Published On - 8:25 am, Fri, 21 January 22