ಯಾದಗಿರಿ ನ.06: ಯಾದಗಿರಿಯಲ್ಲಿ (Yadgiri) ಕೆಇಎ ನೇಮಕಾತಿ ಪರೀಕ್ಷಾ (KEA Exam) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ಮತ್ತೊಂದು ಸ್ಫೋಟಕ ಮಾಹಿತಿ ದೊರೆತಿದೆ. ಪ್ರಕರಣದ 16 ಜನ ಆರೋಪಿಗಳಲ್ಲಿ ಓರ್ವನು, “ಸರ್ಕಾರ” ಎಂದು ನಂಬರ್ ಸೇವ್ ಮಾಡಿಕೊಂಡಿದ್ದಾನೆ. ಸರ್ಕಾರ ಎಂಬ ನಂಬರ್ನಿಂದ ಪರೀಕ್ಷೆ ನಡೆಯುವ ಒಂದು ದಿನ ಮೊದಲು ಆರೋಪಿಗೆ ವಾಟ್ಸಪ್ ಕಾಲ್ ಬಂದಿದೆ.
ಈ ಸರ್ಕಾರ ಎಂಬ ಹೆಸರಿನ ವ್ಯಕ್ತಿಯೇ ಕೆಇಎ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಎಂಬ ಶೆಂಕೆ ವ್ಯಕ್ತವಾಗಿದೆ. ಸರ್ಕಾರ ಎಂಬ ಹೆಸರಿನ ವ್ಯಕ್ತಿ ಆಡಿಯೋ ಕಾಲ್ ಮಾಡಿ ಅಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದನು. ಈ ಸರ್ಕಾರ ಎಂಬ ಹೆಸರಿನ ನಂಬರ್ ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ಮೂಲದ್ದು ಎಂದು ಪೊಲೀಸ್ ಮೂಲಗಳಿಂದ ಟಿವಿ9 ಡಿಟಿಜಿಟಲ್ಗೆ ತಿಳಿದುಬಂದಿದೆ.
ಯಾದಗಿರಿ ಜಿಲ್ಲೆಯ ಐದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿತ್ತು. ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಹೋಗಿ 11 ಜನ ಬಂಧನವಾಗಿದ್ದರು. ಹೊರಗಿದ್ದು ಪರೀಕ್ಷೆ ಬರೆಯುವವರಿಗೆ ಸಹಾಯ ಮಾಡಲು ಹೋಗಿ ಐದು ಜನ ಅರೆಸ್ಟ್ ಆಗಿದ್ದರು. 16 ಜನರನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: KEA exam scam: ಬಗೆದಷ್ಟೂ ಬಯಲಾಗುತ್ತಲೇ ಇದೆ ಕೆಇಎ ಪರೀಕ್ಷಾ ಅಕ್ರಮಗಳು! ಲೇಟೆಸ್ಟ್ ಇದು
ಇನ್ನು ಪ್ರಕರಣದ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಜೊತೆ ಡಿಲ್ ಮಾಡಿಕೊಂಡಿದ್ದ ಪೋಷಕರಿಗೆ ಪೀಕಲಾಟ ಶುರುವಾಗಿದೆ. ಅತ್ತ ಮಕ್ಕಳಿಗೆ ನೌಕರಿಯು ಇಲ್ಲದೇ, ಹಣವೂ ಇಲ್ಲದೇ ಪೋಷಕರು ಅಲೆದಾಡುತ್ತಿದ್ದಾರೆ. ಹಣ ವಾಪಾಸು ಕೊಡುವಂತೆ ಅಭ್ಯರ್ಥಿಗಳ ಪೋಷಕರು ಬೀದರ್‌ನ ಹುಮನಬಾದ್ ರಸ್ತೆಯಲ್ಲಿ ಆರ್‌ಡಿ ಪಾಟೀಲ್ ಕಾರನ್ನು ಆರ್‌ಡಿ ಪಾಟೀಲ್‌ಗೆ ಅಡ್ಡಗಟ್ಟಿದ್ದರು.
ಐದು ನಿಮಿಷದಲ್ಲಿ ಹಣ ವಾಪಾಸು ಮಾಡುವೆಯೆಂದು ಆರ್.ಡಿ. ಪಾಟೀಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅಂದು ಅಲ್ಲಿಂದ ಎಸ್ಕೇಪ್ ಆಗಿದ್ದವ, ಇಲ್ಲಿಯವರೆಗೂ ನಾಪತ್ತೆಯಾಗಿದ್ದಾನೆ. ಪೋಷಕರು 25 ರಿಂದ 40 ಲಕ್ಷ ರೂಪಾಯಿವರೆಗೆ ಡಿಲ್ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ