KEA exam scam: ಬಗೆದಷ್ಟೂ ಬಯಲಾಗುತ್ತಲೇ ಇದೆ ಕೆಇಎ ಪರೀಕ್ಷಾ ಅಕ್ರಮಗಳು! ಲೇಟೆಸ್ಟ್ ಇದು

ಈ ಹಿಂದೆ ವರದಿಯಾಗಿದ್ದಂತೆ ಕಲಬುರಗಿ, ಯಾದಗಿರಿ ಕೇಂದ್ರಗಳಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದದಿತ್ತು. ಹಾಗಾದರೆ ವೈರಲ್ ಆಗಿರುವ ಓ.ಎಂ.ಆರ್‌. ಶೀಟ್ ನೋಡಿದಾಗ ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿದೆಯಾ? ಎಂಬ ಅನುಮಾನ ಮೂಗಿಗೆ ಬಡಿಯುತ್ತಿದೆ. ಇಷ್ಟೊಂದು ಧಾರ್ಷ್ಯ ತೋರಿದ್ದಾದರೂ ಯಾರು? ಎಂಬ ಪ್ರಶ್ನೆ ಎದುರಾಗಿದೆ

KEA exam scam: ಬಗೆದಷ್ಟೂ ಬಯಲಾಗುತ್ತಲೇ ಇದೆ ಕೆಇಎ ಪರೀಕ್ಷಾ ಅಕ್ರಮಗಳು! ಲೇಟೆಸ್ಟ್ ಇದು
ಬಗೆದಷ್ಟೂ ಬಯಲಾಗುತ್ತಲೇ ಇದೆ ಕೆಇಎ ಪರೀಕ್ಷಾ ಅಕ್ರಮಗಳು!
Follow us
| Updated By: ಸಾಧು ಶ್ರೀನಾಥ್​

Updated on: Nov 02, 2023 | 12:28 PM

ಕಲಬುರಗಿ, ನವೆಂಬರ್ 2: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority- KEA) ಇತ್ತೀಚೆಗೆ ನಡೆಸಿದ್ದ ಪರೀಕ್ಷೆಗಳಲ್ಲಿ ಮಾಮೂಲಿಯಂತೆ ಮತ್ತೆ ಅಕ್ರಮಗಳು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯೂಟೂತ್ ಮೂಲಕ ಅಕ್ರಮ ನಡೆಸುತ್ತಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚಿ, ಅರೆಸ್ಟ್​ ಮಾಡಲಾಗಿದೆ. ಅದಾದ ನಂತರ ಈಗ ಅದೇ ಪರೀಕ್ಷೆಯ OMR ಆನ್ಸರ್​​​​ ಶೀಟ್ (Optical Mark Recognition -OMR sheet) ಇದೀಗ ವೈರಲ್ ಆಗಿದೆ.

ಅಭ್ಯರ್ಥಿಯೊಬ್ಬನ ಓ.ಎಂ.ಆರ್. ಶೀಟ್ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯಿಂದ ಈ ಓ.ಎಂ.ಆರ್‌. ಶೀಟ್ ವೈರಲ್ ಆಗಿರುವ ಶಂಕೆ ವ್ಯಕ್ತವಾಗಿದೆ. ಪರೀಕ್ಷಾ ಕೇಂದ್ರದೊಳಗೆ ಕ್ಯಾಮರಾ, ಮೊಬೈಲ್ ನಿಷೇಧವಿದೆ. ಹಾಗಿದ್ದರೂ ವೈರಲ್ ಆಗಿರುವ ಓ.ಎಂ.ಆರ್ ಶೀಟ್ ನೋಡಿದಾಗ ಅದರ ಫೋಟೋ ತೆಗೆದಿದ್ದು ಹೇಗೆ? ಎಂಬ ಪ್ರಶ್ನೆ ಕಾಡತೊಡಗಿದೆ. ಇದರೊಂದಿಗೆ ಬಗೆದಷ್ಟೂ ಬಯಲಾಗುತ್ತಲೇ ಇದೆ ಕೆಇಎ ಪರೀಕ್ಷಾ ಅಕ್ರಮಗಳು. ಅಕ್ಟೋಬರ್​ 28 ರಂದು ಕೆಇಎ ನಡೆಸಿದ್ದ ಎಫಡಿಎ ಪರೀಕ್ಷೆಯನ್ನು ಇಬ್ಬರು ಅಭ್ಯರ್ಥಿಗಳು ಬ್ಲೂಟೂತ್ ಡಿವೈಸ್ ಬಳಸಿ ಬರೆದಿದ್ದರು.

ಅಕ್ರಮಕ್ಕೆ ಪುಷ್ಠಿ ನೀಡುತ್ತಿದೆ ಓ.ಎಂ.ಆರ್.ಶೀಟ್ ವೈರಲ್ ಪ್ರಕರಣ:

ಈ ಹಿಂದೆ ವರದಿಯಾಗಿದ್ದಂತೆ ಕಲಬುರಗಿ, ಯಾದಗಿರಿ ಕೇಂದ್ರಗಳಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದದಿತ್ತು. ಹಾಗಾದರೆ ವೈರಲ್ ಆಗಿರುವ ಓ.ಎಂ.ಆರ್‌. ಶೀಟ್ ನೋಡಿದಾಗ ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿಯೂ ಅಕ್ರಮ ನಡೆದಿದೆಯಾ? ಎಂಬ ಅನುಮಾನ ಮೂಗಿಗೆ ಬಡಿಯುತ್ತಿದೆ. ರಾಜ್ಯದ ಬೇರೆ ಬೇರೆ ಕಡೆಯೂ ಅಕ್ರಮ ನಡೆದಿರುವ ಶಂಕೆಗೆ ಪುಷ್ಠಿ ನೀಡುತ್ತಿದೆ ಈ ಫೋಟೋ.

ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಸಂಚುಕೋರನೇ ಎಫ್‌ಡಿಎ ಅಕ್ರಮಕ್ಕೂ ಕಿಂಗ್‌ಪಿನ್‌!

ಓಎಂಆರ್ ಶೀಟ್ ಜೊತೆ ಅಭ್ಯರ್ಥಿಯ ಹಾಲ್ ಟಿಕೆಟ್ ಇಟ್ಟು ಫೋಟೋ ತೆಗೆದಿರುವುದು ಇನ್ನೂ ಹೆಚ್ಚಿನ ಅನುಮಾನಕ್ಕೆ ಕಾರಣವಾಗಿದೆ. ಇಷ್ಟೊಂದು ಧಾರ್ಷ್ಯ ತೋರಿದ್ದಾದರೂ ಯಾರು? ಈ ಫೋಟೋ ಹೊರಗಡೆ ಇರುವವರಿಗೆ ಕಳುಹಿಸಿದರೆ ಯಾವ ಅಭ್ಯರ್ಥಿಗೆ ಯಾವ ಪ್ಯಾರ್ಟನ್ ಪ್ರಶ್ನೆಗಳಿವೆ ಎನ್ನುವುದು ಉತ್ತರ ಹೇಳುವವರಿಗೆ ಸುಲಭವಾಗುತ್ತದೆ ಎಂಬುದು ಗಮನಾರ್ಹ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ