ಯಾದಗಿರಿ: ಕೆಇಎ ಪರೀಕ್ಷೆ ವೇಳೆ ಅಕ್ರಮ: ಬಂಧನಕೊಳ್ಳಗಾದ ಆರೋಪಿಗಳು ಬಿಚ್ಚಿಟ್ಟ ರಹಸ್ಯವೇನು?
ನಿನ್ನೆ ನಡೆದ ಕೆಇಎ ಪರೀಕ್ಷೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಪರೀಕ್ಷಾರ್ಥಿಗಳನ್ನ ಪೊಲೀಸರ ವಶಕ್ಕೆ ಪಡೆದು ಬಂಧಿಸಿದ್ದಾರೆ. 9 ಜನರನ್ನ ಬಂಧಿಸಿದ ಪೊಲೀಸರು ತನಿಖೆ ನಡೆಸಿ ಇವತ್ತು ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತಾಗಿ ಯಾದಗಿರಿ ಎಸ್ಪಿ ಜಿ.ಸಂಗೀತ ಪ್ರತಿಕ್ರಿಯಿಸಿದ್ದು, 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಬಳಿಕ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಯಾದಗಿರಿ, ಅಕ್ಟೋಬರ್ 29: ನಿನ್ನೆ ನಡೆದ ಕೆಇಎ (KAE) ಪರೀಕ್ಷೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಪರೀಕ್ಷಾರ್ಥಿಗಳನ್ನ ಪೊಲೀಸರ ವಶಕ್ಕೆ ಪಡೆದು ಬಂಧಿಸಿದ್ದಾರೆ. 9 ಜನರನ್ನ ಬಂಧಿಸಿದ ಪೊಲೀಸರು ತನಿಖೆ ನಡೆಸಿ ಇವತ್ತು ಜೈಲಿಗೆ ಕಳುಹಿಸಿದ್ದಾರೆ. ಈ ಕುರಿತಾಗಿ ಯಾದಗಿರಿ ಎಸ್ಪಿ ಜಿ.ಸಂಗೀತ ಪ್ರತಿಕ್ರಿಯಿಸಿದ್ದು, ಏಳು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಡಿವೈಸ್ ಬಳಕೆ ಮಾಡಿ ಪರೀಕ್ಷೆ ಬರೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಅಧಿಕಾರಿಗಳ ಒಂದು ತಂಡ ಮಾಡಿ ಕಾರ್ಯ ಪ್ರವೃತರಾಗಿ, 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಬಳಿಕ ಅವರನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಒಂಬತ್ತು ಜನರಿಂದ ಬ್ಲೂಟೂತ್, ಸೀಮ್ ಕಾರ್ಡ್,ಬ್ಯಾಟರಿಗಳನ್ನ ವಶಕ್ಕೆ ಪಡೆಯಲಾಗಿದೆ. ಶರ್ಟ್ನ ಕಾಲರನಲ್ಲಿ ಪ್ಯಾಕೇಟ್ ಮಾಡಿಕೊಂಡು ಬಂದಿದ್ದರು. ಬನಿಯನ್, ಅಂಡರ್ ವೆರ್‌ನಲ್ಲಿ ಬ್ಲೂಟೂತ್ ಇಟ್ಟುಕೊಂಡು ಬಂದಿದ್ದರು. ಎಂಟು ಜನರು ಕಲಬುರ್ಗಿ ಜಿಲ್ಲೆಯ ಮೂಲದವರು. ಒಬ್ಬರು ವಿಜಯಪುರ ಮೂಲದವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಯಾದಗಿರಿ: ಬ್ಲೂಟೂತ್ ಬಳಸಿ ಕೆಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ
ನಿನ್ನೆ ಮಧ್ಯಾಹ್ನದಿಂದ ಒಬ್ಬೊಬ್ಬರು ಅರೆಸ್ಟ್ ಆಗಿದ್ದಾರೆ. ಇನ್ನು ತನಿಖೆ ನಡೆಯುತ್ತಿದೆ. ಎಲ್ಲರನ್ನ ಪರೀಕ್ಷಾ ಕೇಂದ್ರದಲ್ಲಿ ವಶಕ್ಕೆ ಪಡೆದುಕೊಂಡಿದ್ದೇವೆ. ಸಿದ್ದರಾಮ ಅಲಿಯಾಸ್ ಪುಟ್ಟಪ್ಪ ಎಂಬಾತನನ್ನ ವಶಕ್ಕೆ ಪಡೆದಾಗ ಉಳಿದವರ ಬಗ್ಗೆ ಮಾಹಿತಿ ಸಿಕ್ಕಿದೆ. ಪಿಎಸ್ಐ ಅಕ್ರಮದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಸಂಬಂಧಿಕರು ಇರುವ ಮಾಹಿತಿ ಇದೆ ಇನ್ನು ಸಿಕ್ಕಿಲ್ಲ.
ಕೆಲವರು 6,8,10 ಲಕ್ಷ ರೂ. ಕೊಟ್ಟಿದ್ದೆವೆ ಅಂತ ವಿಚಾರಣೆಯಲ್ಲಿ ಮಾಹಿತಿ ಸಿಕ್ಕಿದೆ. ಲಾಡ್ಜ್ನಲ್ಲಿ ಕುಳಿತುಕೊಂಡು ಉತ್ತರ ಹೇಳುತ್ತಿದ್ದರು. ಆದ್ರೆ ಲಾಡ್ಜ್ ಮೇಲೆ ದಾಳಿ ಮಾಡಿದ್ದಾಗ ಎಸ್ಕೇಪ್ ಆಗಿದ್ದಾರೆ. ಬ್ಲೂಟೂತ್ 4, ರೀಷಿವರ್ 5 ಸೇರಿದಂತೆ ನಾನಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: KPSC ಪರೀಕ್ಷೆ ವೇಳೆ ಅಕ್ರಮ: ಫುಲ್ ತೋಳಿನ ಶರ್ಟ್ ಧರಿಸಿದವರಿಗೆ ನೋ ಎಂಟ್ರಿ, ತೋಳಿಗೆ ಕತ್ತರಿ ಹಾಕಿದ ಅಭ್ಯರ್ಥಿಗಳು
ಇಎನ್‌ಟಿ ಡಾಕ್ಟರ್ಗೆ ಕರೆಸಿ ಕಿವಿಯಲ್ಲಿ ಹಾಕಿದ್ದ ರಿಷಿವರ್ ತೆಗೆಸಲಾಗಿದೆ. ನಿನ್ನೆ ಬೆಳಗ್ಗೆ ನಡೆದ ಪರೀಕ್ಷೆ ವೇಳೆ ನಾವು ಮೆಟಲ್ ಡಿಟೆಕ್ಟರ್ ಬಳಕೆ ಮಾಡಿಲ್ಲ. ಅಕ್ರಮ ಬಯಲು ಆಗಿದ್ದ ಕೂಡಲೇ ಮೆಟಲ್ ಡಿಟೆಕ್ಟರ್ ಬಳಕೆ ಮಾಡಿದ್ದೇವೆ. ಮೆಟಲ್ ಡಿಟೆಕ್ಟರ್ನಿಂದ ಟ್ರೇಸ್ ಮಾಡಲು ಆಗಿಲ್ಲ. ಕಿವಿಯಲ್ಲಿ ಬಳಕೆ ಮಾಡಿದ್ದ ರಿಷಿವರ್ ಮಾತ್ರ ಡಿಟೆಕ್ಟ್ ಆಗಿಲ್ಲ ಎಂದು ಹೇಳಿದ್ದಾರೆ.
ಇದೆ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಇಷ್ಟು ಮಟ್ಟದಲ್ಲಿ ಪರೀಕ್ಷೆ ವೇಳೆ ಅಕ್ರಮವೆಸಗಿ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ. ಹೀಗಾಗಿ ಪೊಲೀಸರು 9 ಜನರ ಜೊತೆ ಇನ್ನು ಎಷ್ಟು ಜನ ಶಾಮೀಲಾಗಿದ್ದಾರೆ ಜೊತೆಗೆ ಇದರ ಕಿಂಗ್ ಪಿನ್ ಯಾರು ಪತ್ತೆ ಹಚ್ಚಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.