Shakti Scheme: ಪತ್ನಿಗೆ ಫ್ರೀ ಟಿಕೆಟ್, ಒಂದು ಪ್ಲೇಟ್ ತಿಂಡಿಯ ಹಣ ಉಳಿಯಿತು ಎಂದ ಪತಿ

ಇಂದಿನಿಂದ ರಾಜ್ಯಾದ್ಯಂತ ಐಷಾರಾಮಿ ಸರ್ಕಾರಿ ಬಸ್​ಗಳನ್ನು ಹೊರತುಪಡಿಸಿ ಉಳಿದ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಸಿಕ್ಕಿರುವುದು ಮಹಿಳಾಮಣಿಗಳ ಸಂತಸಕ್ಕೆ ಕಾರಣವಾಗಿದೆ. ಕುಟುಂಬ ಸಹಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ.

Shakti Scheme: ಪತ್ನಿಗೆ ಫ್ರೀ ಟಿಕೆಟ್, ಒಂದು ಪ್ಲೇಟ್ ತಿಂಡಿಯ ಹಣ ಉಳಿಯಿತು ಎಂದ ಪತಿ
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ
Follow us
Rakesh Nayak Manchi
|

Updated on:Jun 11, 2023 | 3:19 PM

ಯಾದಗಿರಿ: ಇಂದಿನಿಂದ ರಾಜ್ಯಾದ್ಯಂತ ಐಷಾರಾಮಿ ಸರ್ಕಾರಿ ಬಸ್​ಗಳನ್ನು ಹೊರತುಪಡಿಸಿ ಉಳಿದ ಬಸ್​ಗಳಲ್ಲಿ ಶಕ್ತಿ ಯೋಜನೆಯಡಿ (Shakti Scheme) ಉಚಿತವಾಗಿ ಪ್ರಯಾಣಿಸುವ (Free Travel) ಅವಕಾಶ ಸಿಕ್ಕಿರುವುದು ಮಹಿಳಾಮಣಿಗಳ ಸಂತಸಕ್ಕೆ ಕಾರಣವಾಗಿದೆ. ಕುಟುಂಬ ಸಹಿತವಾಗಿ ಪ್ರಯಾಣ ಬೆಳೆಸುತ್ತಿದ್ದು, ಹಲವೆಡೆ ಸರ್ಕಾರಿ ಬಸ್​ಗಳು ತುಂಬಿ ತುಳುಕಲು ಆರಂಭವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ಪ್ರಯಾಣಿಸುವ ತನ್ನ ಪತ್ನಿಯೊಂದಿಗೆ ಸಾರಿಗೆ ಬಸ್​ನಲ್ಲಿ ಪ್ರಯಾಣಿಸುತ್ತಾ, ಒಂದು ಪ್ಲೇಟ್ ತಿಂಡಿಯ ಹಣ ಉಳಿದಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಮಾರಾಯ್ರೆ.

ಹೌದು, ಯಾದಗಿರಿಯಿಂದ ಶಹಾಪುರ‌ಕ್ಕೆ ಹೊರಡುವ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಕೈಗೊಳ್ಳುತ್ತಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಪತ್ನಿಯೊಂದಿಗೆ ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವ್ಯಕ್ತಿ ಟಿಕೆಟ್ ಪಡೆದು ಪ್ರಯಾಣಿಸಿರು. ಟಿವಿ9 ಜೊತೆ ಮಾತನಾಡಿದ ಆ ವ್ಯಕ್ತಿ, ಪತ್ನಿಗೆ ಉಚಿತ‌ ಟಿಕೆಟ್ ನೀಡಿದ್ದಾರೆ ನಾನು ದುಡ್ಡು ಕೊಟ್ಟು ಟಿಕೆಟ್ ಪಡೆದಿದ್ದೇನೆ. ಪತ್ನಿಗೆ ಉಚಿತ ಟಿಕೆಟ್ ಇರುವುದರಿಂದ ಹಣ ಉಳಿಯಲಿದೆ. ಪತ್ನಿಗೆ ಫ್ರೀ ಟಿಕೆಟ್ ನೀಡಿದ್ದರಿಂದ ಒಂದು ಪ್ಲೇಟ್ ತಿಂಡಿಯ ಹಣ ಉಳಿದಿದೆ‌ ಎಂದಿದ್ದಾರೆ. ಇದೇ ವೇಳೆ ಮಹಿಳೆ, ಸರ್ಕಾರ ಹಾಗೂ ಸಿದ್ದರಾಮಯ್ಯಗೆ ಪುಣ್ಯ ಬರಲಿ ಎಂದರು.

ನಮ್ಮ ಯಜಮಾನರಿಗೂ ಟಿಕೆಟ್ ಫ್ರೀ ಆಗಿದ್ರೇ ಅನುಕೂಲ ಆಗ್ತಿತ್ತು

ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಬೆಳಗಾವಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಮನೆ ದೇವರ ದರ್ಶನ ಮಾಡಲು ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ಟಿಕೆಟ್ ಫ್ರೀ ಆಗಿದ್ದಕ್ಕೆ ಬೆಳಗಾವಿ ವಡಗಾವಿಯಿಂದ ಮೈಲಾರ ದೇವರ ದರ್ಶನಕ್ಕೆ ಹೊರಟ್ಟಿದ್ದೇವೆ. ನಮ್ಮ ಯಜಮಾನರಿಗೂ ಟಿಕೆಟ್ ಫ್ರೀ ಆಗಿದ್ದಿದ್ದರೆ ಅನುಕೂಲ ಆಗುತ್ತಿತ್ತು. ಇಂದು ಉಚಿತವಾಗಿ ಪ್ರಯಾಣ ಮಾಡಿದ್ದಕ್ಕೆ ಬಹಳ ಖುಷಿ ಆಗುತ್ತಿದೆ. ಫ್ರೀ ಇದ್ದ ದಿನ ಮನೆ ದೇವರಿಗೆ ಹೋಗಿ ಬಂದರೆ ಆಯ್ತು ಅಂತಾ ಹೋಗುತ್ತಿದ್ದೇವೆ ಎಂದರು.

ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ, ಬಸ್ ಹತ್ತುವ ಮುನ್ನ ಇದು ನಿಮ್ಮ ಬಳಿ ಇರ್ಬೇಕು

ಇದೊಂದು ಕಡೆಯದಾರೆ, ಇತ್ತ ಬಸ್ ಹತ್ತಿಸಲು ಮಹಿಳೆಯರ ಕೊರತೆ ಉಂಟಾಗಿ ಶಕ್ತಿ ಯೋಜನೆಗೆ ಚಾಲನೆ ನೀಡಲು ಸಚಿವ ಕೆಹೆಚ್ ಮುನಿಯಪ್ಪ ಅವರು ಪರದಾಡಿದ ಘಟನೆ ನಡೆಯಿತು ಮಾರಾಯ್ರೆ. ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಬಸ್ ಹತ್ತಿಸಲು ಮಹಿಳೆಯರಿಗಾಗಿ ಕಾದು ನಿಂತ ಸಚಿವರು ಕೊನೆಗೆ ಒಂದು ಬಸ್​ನಿಲ್ಲಿದ್ದ ಮಹಿಳೆಯರನ್ನೇ ನಾಲ್ಕು ಬಸ್​ಗಳಿಗೆ ಹತ್ತಿಸಿ ಹಾಗೋ ಹೀಗೋ ಯೋಜನೆಗೆ ಚಾಲನೆ ನೀಡಿದರು. ಪಾಪ ಮಹಿಳೆಯರು, ಆ ಬಸ್​ನಿಂದ ಈ ಬಸ್​ಗೆ, ಈ ಬಸ್​ನಿಂದ ಆ ಬಸ್​ಗೆ ಹತ್ತಿ ಸುಸ್ತಾದರು.

ಐಡಿ ಇಲ್ಲದೇ ಬಸ್ ಹತ್ತಿದ ಮಹಿಳೆಯಿಂದ ಹಣ ಪಡೆದು ಟಿಕೆಟ್ ಕೊಟ್ಟ ಕಂಡಕ್ಟರ್

ನಮಗೆ ಉಚಿತ ಪ್ರಯಾಣ ಅಂತ ಐಡಿ ಇಲ್ಲದೆ ಬಸ್​ನಲ್ಲಿ ಪ್ರಯಾಣಿಸಲು ಮುಂದಾದ ಮಹಿಳೆಯೊಬ್ಬರಿಗೆ ಬಸ್ ಕಂಡಕ್ಟರ್ ಹಣ ಪಡೆದು ಟಿಕೆಟ್ ನೀಡಿದ ಘಟನೆಯೂ ನಡೆದಿದೆ. ಗುರುತಿನ ಚೀಟಿ ಇಲ್ಲದ ಮಹಿಳೆಯೊಬ್ಬರು ಚಿತ್ರದುರ್ಗದಿಂದ ಹೊಸದುರ್ಗಕ್ಕೆ ತೆರಳುತ್ತಿದ್ದರು. ಈ ವೇಳೆ ಐಡಿ ಇಲ್ಲಾ ಅಂತ ಮಹಿಳೆಯಿಂದ ಹಣ ಪಡೆದು ಟಿಕೆಟ್ ನೀಡಿದ್ದಾರೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಬಳಿಕ ಕಂಡಕ್ಟರ್​ ಹಣವನ್ನು ಮಹಿಳೆಗೆ ವಾಪಸ್ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Sun, 11 June 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ