ಯಾದಗಿರಿ: ಪ್ರೀತಿಸಿ ಮದುವೆಯಾಗಿದ್ದ ಯುವತಿಗೆ ಯುವಕ ಮೋಸ (Love dokha) ಮಾಡಿರುವ ಪ್ರಸಂಗ ನಡೆದಿದೆ. ಮದುವೆಯಾಗಿ ಒಂದು ಮಗುವಾದ ಬಳಿಕ ಯುವಕ ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಶರಣು ದೋರನಹಳ್ಳಿ ಮೋಸ ಮಾಡಿದ ಯುವಕ ಎಂದು ತಿಳಿದುಬಂದಿದೆ. ದೂರದ ರಾಮನಗರ ಜಿಲ್ಲೆಯ ಕನಕಪುರದ ಯುವತಿ (Kanakapura woman) ಸಿಂಧೂ ಮೋಸ ಹೋದ ಯುವತಿ (Yadagiri police).
ಶರಣು ದೋರನಹಳ್ಳಿ ಮತ್ತು ಸಿಂಧೂ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಮದುವೆ ಬಳಿಕ ದಂಪತಿಗೆ ಒಂದು ಗಂಡು ಮಗು ಜನಿಸಿದೆ. ಆದರೆ ಶರಣು ಇತ್ತೀಚೆಗೆ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ಮಾಡಿ ಹೆಂಡತಿ ಸಿಂಧೂಳನ್ನು ಮನೆಯಿಂದ ಹೊರ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಶರಣು ವಿರುದ್ಧ ಜನವರಿ 10 ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ 307 ಕಲಂ ಅಡಿ ಕೇಸ್ ದಾಖಲಾಗಿದೆ. ಸಿಂಧೂ ಮನೆಯಿಂದ ಹೊರ ಹಾಕಿ ಶರಣು ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎಂದು ಸಿಂಧೂ ಆರೋಪ ಮಾಡಿದ್ದಾಳೆ. ಸಿಂಧೂಗೆ ವಿಚ್ಛೇದನ ನೀಡದೆ ಮತ್ತೊಂದು ಮಾಡಿಕೊಂಡಿದ್ದಾನೆ ಎಂಬುದು ಆರೋಪವಾಗಿದೆ. ಹೀಗಾಗಿ ನ್ಯಾಯಕ್ಕಾಗಿ ಸಿಂಧೂ ಹಾಗೂ ಪೋಷಕರು ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?
2014 ರಲ್ಲಿ ಇಬ್ಬರು ಬೆಂಗಳೂರಿನಲ್ಲಿ ಪರಸ್ಪರ ಪರಿಚಯವಾಗಿದ್ದರು. ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆಯುವಾಗ ಇಬ್ಬರದೂ ಪರಿಚಯವಾಗಿದೆ. ಆರು ವರ್ಷದ ಪ್ರೀತಿಯ ಬಳಿಕ 2020 ರಲ್ಲಿ ಹಿರಿಯರ ಸಮ್ಮುಖದಲ್ಲಿ ಸಿಂಧೂ ಹಾಗೂ ಶರಣು ಮದುವೆಯಾಗಿದ್ದಾರೆ. ಆದರೆ ತನಗೆ ಮೋಸ ಮಾಡಿ ಇನ್ನೊಂದು ಮದುವೆಯಾಗಿದ್ದಾನೆ ಎಂದು ಸಿಂಧೂ ಆರೋಪ ಮಾಡಿದ್ದಾಳೆ. ಶರಣುನನ್ನು ಬಂಧಿಸಿ, ನ್ಯಾಯ ಕೊಡಿಸುವಂತೆ ಸಿಂಧೂ ಹಾಗೂ ಪೋಷಕರು ಯಾದಗಿರಿ ಪೊಲೀಸರನ್ನು ಆಗ್ರಹಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:10 pm, Fri, 2 February 24