ಯಾದಗಿರಿ: ಯಾದಗಿರಿ (Yadgiri) ನಗರದಲ್ಲಿ ಸಚಿವ ಪ್ರಭು ಚೌಹಾಣ್ (Prabhu Chauhan) ಅವರು ವಿದ್ಯಾರ್ಥಿಗಳೊಂದಿಗೆ (Students) ಸರ್ಕಾರಿ ಬಸ್ (Government Bus) ನಲ್ಲಿ ಪ್ರಯಾಣ ಮಾಡಿದ್ದಾರೆ. ನಗರದಲ್ಲಿ ಕಾಲೇಜು (College) ವಿದ್ಯಾರ್ಥಿಗಳಿಗೆ ವಸತಿ ನಿಲಯದಿಂದ ಕಾಲೇಜಿಗೆ ತೆರಳಲು ಬಸ್ ಇರಿಲಿಲ್ಲ. ಇಂದು (ಜುಲೈ 9) ಕಲ್ಯಾಣ ಕರ್ನಾಟಕ (Kalyan Karnataka) ಸಾರಿಗೆ ಸಂಸ್ಥೆಯಿಂದ ವಸತಿ ನಿಲಯದಿಂದ ಗಂಜ್ ಸರ್ಕಲ್ವರೆಗೆ ಬಸ್ ಸಂಚಾರ ಆರಂಭಗೊಂಡಿತ್ತು. ಇದಕ್ಕೆ ಚಾಲನೆ ನೀಡಿದ ಸಚಿವ ಪ್ರಭು ಚೌಹಾಣ್ ಅವರು ವಸತಿ ನಿಲಯದಿಂದ ಗಂಜ್ ಸರ್ಕಲ್ವರೆಗೆ ಸರ್ಕಾರಿ ಬಸ್ನಲ್ಲಿ ಟಿಕೆಟ್ ಪಡೆದು ವಿದ್ಯಾರ್ಥಿಗಳೊಂದಿಗೆ ತೆರಳಿದಿರು.
ಜಮೀನಿಗೆ ನುಗ್ಗಿದ KSRTC ಬಸ್, ತಪ್ಪಿದ ಭಾರಿ ದುರಂತ
ಮಂಡ್ಯ: ಕೆಎಸ್ಆರ್ಟಿಸಿ ಬಸ್ವೊಂದು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಜಮೀನಿಗೆ ನುಗ್ಗಿರುವ ಘಟನೆ ಮಂಡ್ಯ ತಾಲೂಕಿನ ದುದ್ದ ಗ್ರಾಮದ ಸಮೀಪ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ನಲ್ಲಿದ್ದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
KSRTC ಬಸ್ ಮೇಲುಕೋಟೆಯಿಂದ ಮಂಡ್ಯಗೆ ವೇಗವಾಗಿ ಬರುತ್ತಿತ್ತು. ದುದ್ದ ಗ್ರಾಮದ ಬಳಿ ಏಕಾಏಕಿ ಟ್ರ್ಯಾಕ್ಟರ್ ಅಡ್ಡ ಬಂದಿದೆ. ಆಗ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯಲು ತಪ್ಪಿಸಲು ಹೋಗಿ ಚಾಲಕ ಬಸ್ ನಿಯಂತ್ರಣ ಕಳೆದುಕೊಂಡಿದ್ದಾನೆ. ಆಗ ಬಸ್ ಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದ ಬಸ್ನಲ್ಲಿದ್ದ 70 ಜನ ವಿದ್ಯಾರ್ಥಿಗಳಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 4:18 pm, Sat, 9 July 22