PM Modi Yadgir Visit Highlights: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಹವಾ ಹೇಗಿತ್ತು? ಇಲ್ಲಿದೆ ಕೊಡೆಕಲ್, ಮಳಖೇಡ ಕಾರ್ಯಕ್ರಮದ ಹೈಲೈಟ್ಸ್

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 19, 2023 | 4:43 PM

ಪ್ರಧಾನಿ ನರೇಂದ್ರ ಮೋದಿ ಕಲಬುರಗಿ, ಯಾದಗಿರಿ ಭೇಟಿ Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ ಪಾಳಯದಲ್ಲಿ ಸಿದ್ಧತೆಗಳು ಚುರುಕಾಗುತ್ತಿವೆ. ಹಿರಿಯ ನಾಯಕರ ಕರ್ನಾಟಕ ಭೇಟಿಯೂ ಹೆಚ್ಚುತ್ತಿದೆ. ಪ್ರಧಾನಿ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಿದ್ದು, ಕಲ್ಯಾಣ ಕರ್ನಾಟಕದಲ್ಲಿ ಸಂಚಲನ ಮೂಡಿಸಿದೆ.

PM Modi Yadgir Visit Highlights: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಹವಾ ಹೇಗಿತ್ತು? ಇಲ್ಲಿದೆ ಕೊಡೆಕಲ್, ಮಳಖೇಡ ಕಾರ್ಯಕ್ರಮದ ಹೈಲೈಟ್ಸ್
ಯಾದಿಗಿರಿ ಜಿಲ್ಲೆ ಕೊಡೆಕಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

PM Narendra Modi Kalaburagi Yadgir Visit Live News Updates: ಪ್ರಧಾನಿ ನರೇಂದ್ರ ಮೋದಿ ಭೇಟಿ ಇದೀಗ ಕಲ್ಯಾಣ ಕರ್ನಾಟಕದಲ್ಲಿ ಸಂಚಲನ ಮೂಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಸನಿಹದಲ್ಲಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ನಡೆಯಲಿದೆ. ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಸತತ 3ನೇ ಅವಧಿಗೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದು. ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರದಲ್ಲಿರುವ ಏಕೈಕ ರಾಜ್ಯವಾದ ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ‘ಚಾಣಕ್ಯ’ ಅಮಿತ್ ಶಾ ಪಣತೊಟ್ಟಿದ್ದಾರೆ. ಕರ್ನಾಟಕಕ್ಕೆ ಈ ಇಬ್ಬರು ನಾಯಕರು ನೀಡುತ್ತಿರುವ ಭೇಟಿಯೂ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಸುಮಾರು 8 ಕಿಮೀ ರೋಡ್​ ಶೋ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಕಲ್ಯಾಣ ಕರ್ನಾಟಕದ ಕಲಬುರ್ಗಿಯಲ್ಲಿ ಮೋದಿ ಭೇಟಿಯು ಸಂಚಲನ ಸೃಷ್ಟಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಹಾಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿರುವ ಕಲಬುರ್ಗಿ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಿಕೊಳ್ಳುವ ಪ್ರಯತ್ನಕ್ಕೆ ಪಕ್ಷವು ಮುಂದಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಇಂದು ಸುಮಾರು ₹ 10,000 ಕೋಟಿ ಮೌಲ್ಯದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಚಟುವಟಿಕೆಯ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

LIVE NEWS & UPDATES

The liveblog has ended.
  • 19 Jan 2023 03:49 PM (IST)

    PM Modi Yadgir Visit Live: ಕಲಬುರಗಿ ಕಾರ್ಯಕ್ರಮದಲ್ಲಿ ಮೋದಿಗೆ ಹರಸಿ ಹಾರೈಸಿದ ಲಂಬಾಣಿ ಮಹಿಳೆ

    ಕಲಬುರಗಿ: ಸೇಡಂ ತಾಲೂಕಿನ ಮಳಖೇಡ್​ನಲ್ಲಿ ತಾಂಡಾ ನಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ನೀಡಿದರು. ಮೋದಿಗೆ ಲಂಬಾಣಿ ಜನರೇ ಮಾಡಿದ ಸ್ಮರಣಿಕೆ ಗಿಫ್ಟ್ ನೀಡಲಾಯಿತು. ಇನ್ನು ಕೆಲ ಲಂಬಾಣಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಹಕ್ಕು ಪತ್ರ ವಿತರಿಸಿದರು. ಈ ವೇಳೆ ಮಹಿಳೆಯೊಬ್ಬರು ಪ್ರಧಾನಿ ಮೋದಿ ಅವರ ತಲೆ ಮೇಲೆ ಕೈಯಿಟ್ಟಿರು.

  • 19 Jan 2023 03:42 PM (IST)

    PM Modi Yadgir Visit Live: ಮಳಖೇಡ​ ಸಮಾವೇಶ ಮುಗಿಸಿ ತೆರಳಿದ ಪ್ರಧಾನಿ ನರೇಂದ್ರ ಮೋದಿ

    ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡನಲ್ಲಿ ಆಯೋಜಿಸಿದ್ದು ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ತೆರಳಿದರು. ಕಲಬುರಗಿ ಏರ್​ಪೋರ್ಟ್​​​ನಿಂದ ಮುಂಬೈಗೆ ಪ್ರಧಾನಿ ಮೋದಿ ತೆರಳಲಿದ್ದಾರೆ.

  • 19 Jan 2023 03:22 PM (IST)

    PM Modi Yadgir Visit Live: ಬಂಜಾರ ಸಮಾಜದ ಕೊಡುಗೆ ಕೊಂಡಾಡಿದ ಪ್ರಧಾನಿ

    ಕಲಬುರಗಿ: ದೇಶದ ಅಭಿವೃದ್ಧಿಯಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ದೊಡ್ಡದಿದೆ. ಗುಜರಾತ್-ರಾಜಸ್ಥಾನ ಗಡಿಯಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಅಲ್ಲಿ ಕುಡಿಯುವ ನೀರಿಗಾಗಿ ಅನುಕೂಲ ಮಾಡಿದ್ದು ಬಂಜಾರ ಸಮಾಜ ಎಂದು ದೇಶದ ಅಭಿವೃದ್ಧಿಯಲ್ಲಿ ಬಂಜಾರ ಸಮಾಜದ ಕೊಡುಗೆ ಕೊಂಡಾಡಿದರು.

  • 19 Jan 2023 03:17 PM (IST)

    PM Modi Yadgir Visit Live: ನಿಮ್ಮ ಆಶೀರ್ವಾದದಿಂದ ಭಾರತ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ: ಮೋದಿ

    ಕಲಬುರಗಿ: ಈ ಹಿಂದಿನ ಸರ್ಕಾರಗಳು ಕೇವಲ ವೋಟ್​ ಬ್ಯಾಂಕ್ ಮಾಡಿಕೊಂಡರು. ಅನೇಕ ಜನರಿಗೆ ಬ್ಯಾಂಕ್​ ಸೇವೆ ಬಗ್ಗೆ ಅವರಿಗೆ ಗೊತ್ತೆ ಇರಲಿಲ್ಲ. ನಮ್ಮ ಸರ್ಕಾರ ಬ್ಯಾಂಕ್ ಖಾತೆ ತೆರೆದು ಹಣ ಜಮೆ ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಮುದ್ರಾ ಯೋಜನೆ ಜಾರಿಗೆ ತಂದಿದ್ದೇವೆ. ವಂಚಿತ ಸಮುದಾಯಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತೆ.. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹೊಸ ಯೋಜನೆ ಜಾರಿಗೆ ತರಲಾಗುತ್ತದೆ. 8 ವರ್ಷಗಳಲ್ಲಿ ದೇಶದ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಎಸ್​​ಸಿ, ಎಸ್​ಟಿ, ಹಿಂದುಳಿದ ಸಮುದಾಯಕ್ಕೂ ನ್ಯಾಯ ಕಲ್ಪಿಸಿದ್ದೇವೆ. ಡಬಲ್ ಇಂಜಿನ ಸರ್ಕಾರದಿಂದ ದೇಶದ ಎಲ್ಲ ಸಮಾಜಗಳ ಅಭಿವೃದ್ಧಿಯಾಗಿದೆ. ನಿಮ್ಮ ಆಶೀರ್ವಾದದಿಂದ ಭಾರತ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

  • 19 Jan 2023 03:10 PM (IST)

    PM Modi Yadgir Visit Live: ಪಿಎಂ ಆವಾಸ್ ಯೋಜನೆ ಮೂಲಕ ಎಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದ ನಮೋ

    ಕಲಬುರಗಿ: ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ವೇಗ ಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕದಲ್ಲಿ ಬಂಜಾರ ಸಮಾಜದವರಿಗೆ ಯೋಜನೆ ಸಿಗುತ್ತಿದೆ. ಪಿಎಂ ಆವಾಸ್ ಯೋಜನೆ ಮೂಲಕ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಈ ಹಿಂದಿನ ಸರ್ಕಾರಗಳು ಕೇವಲ ವೋಟ್​ ಬ್ಯಾಂಕ್ ಮಾಡಿಕೊಂಡರು. ಸರ್ಕಾರದ ಯೋಜನೆಗಳಿಂದ ವಂಚಿತರಾದವರಿಗೆ ಈಗ ಸೌಲಭ್ಯ ಸಿಗುತ್ತಿವೆ. ಡಬಲ್​ ಇಂಜಿನ್ ಸರ್ಕಾರ ನಿಮ್ಮ ಅಭಿವೃದ್ಧಿಗಾಗಿ ಶ್ರಮವಹಿಸುತ್ತಿದೆ ಎಂದರು.

  • 19 Jan 2023 03:08 PM (IST)

    PM Modi Yadgir Visit Live: ಪರೋಕ್ಷವಾಗಿ ಕಾಂಗ್ರೆಸ್​ಗೆ ಟಾಂಗ್ ಕೊಟ್ಟ ಮೋದಿ

    ಕಲಬುರಗಿ: ಬಸವಣ್ಣನವರು ಸಾಮಾಜಿಕ ನ್ಯಾಯದ ಕ್ರಾಂತಿ ಮಾಡಿದ್ದರು. ಬಸವಣ್ಣನವರ ಆಶಯದಂತೆ ಎಲ್ಲ ಸಮುದಾಯದ ಅಬಿವೃದ್ಧಿ ಮಾಡುತ್ತಿದ್ದೇವೆ. ವೇದಿಕೆಯಲ್ಲಿ ತಾಯಿ ನನಗೆ ಆಶೀರ್ವಾದ ನೀಡಿದ್ದಾರೆ. 1993ರಲ್ಲಿ ಈ ಯೋಜನೆಯನ್ನು ಶಿಫಾರಸ್ಸು ಮಾಡಲಾಗಿತ್ತು ಅದರೆ ಹಕ್ಕುಪತ್ರ ನೀಡುವ ಬಗ್ಗೆ ವಿಪಕ್ಷಗಳು ಎಂದೂ ಯೋಚಿಸಲಿಲ್ಲ ಎಂದು ಮೋದಿ ಪರೋಕ್ಷವಾಗಿ ಕಾಂಗ್ರೆಸ್​ಗೆ ಟಾಂಗ್ ಕೊಟ್ಟರು.

  • 19 Jan 2023 03:06 PM (IST)

    PM Modi Yadgir Visit Live: 1994ರ ಆ ದಿನಗಳನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ

    ಕಲಬುರಗಿ: 2023ರ ಜನವರಿ ನಿಮಗೆಲ್ಲರಿಗೂ ಮರೆಯಲಾರದ ತಿಂಗಳು. ಇಂತಹ ಪವಿತ್ರ ತಿಂಗಳಲ್ಲಿ ಸರ್ಕಾರ ಸಾಮಾಜಿಕ ನ್ಯಾಯ ನೀಡುತ್ತಿದೆ. ಲಕ್ಷಾಂತರ ಬಂಜಾರ ನಿವಾಸಿಗಳಿಗೆ ಇವತ್ತು ಬಹುದೊಡ್ಡ ದಿನ. ಕಲ್ಯಾಣ ಕರ್ನಾಟಕದ ತಾಂಡಾ ನಿವಾಸಿಗಳಿಗೆ ನನ್ನ ಅಭಿನಂದನೆ. ರಾಷ್ಟ್ರ ನಿರ್ಮಾಣದಲ್ಲಿ ಬಂಜಾರ ಸಮುದಾಯದ ಕೊಡುಗೆ ನೀಡುತ್ತಿದೆ. 1994ರ ಚುನಾವಣೆ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿದ್ದೆ ಆಗ ನನಗೆ ನೀವೆಲ್ಲಾ ಆಶೀರ್ವಾದ ನೀಡಿದ್ದೀರಿ ಎಂದು ಆ ದಿನಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡರು.

  • 19 Jan 2023 03:04 PM (IST)

    PM Modi Yadgir Visit Live: ಮಳಖೇಡ ಸಮಾವೇಶದಲ್ಲಿ ಲಂಬಾಣಿ ಭಾಷೆಯಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

    ಕಲಬುರಗಿ: ಮಳಖೇಡ ಗ್ರಾಮದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರು 5 ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದರು. ಬಳಿಕ ಲಂಬಾಣಿ ಭಾಷೆಯಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಆರಂಭದಲ್ಲಿ ಕಲಬುರಗಿ ಶರಣಬಸವೇಶ್ವರ, ಗಾಣಗಾಪುರ ದತ್ತಾತ್ರೇಯ ಸ್ಮರಿಸಿದರು.

  • 19 Jan 2023 03:03 PM (IST)

    PM Modi Yadgir Visit Live: ಲಂಬಾಣಿ ಭಾಷೆಯಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

    ಕಲಬುರಗಿ: ಲಂಬಾಣಿ ಭಾಷೆಯಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕಲಬುರಗಿ ಶರಣಬಸವೇಶ್ವರ, ಗಾಣಗಾಪುರ ದತ್ತಾತ್ರೇಯ ಸ್ಮರಿಸಿದರು. 2023ರ ಜನವರಿ ನಿಮಗೆಲ್ಲರಿಗೂ ಮರೆಯಲಾರದ ತಿಂಗಳು. ಇಂತಹ ಪವಿತ್ರ ತಿಂಗಳಲ್ಲಿ ಸರ್ಕಾರ ಸಾಮಾಜಿಕ ನ್ಯಾಯ ನೀಡುತ್ತಿದೆ. ಲಕ್ಷಾಂತರ ಬಂಜಾರ ನಿವಾಸಿಗಳಿಗೆ ಇವತ್ತು ಬಹುದೊಡ್ಡ ದಿನ. ಇಂದು ನಿಮಗೆಲ್ಲರಿಗೂ ಹಕ್ಕು ಪತ್ರ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ತಾಂಡಾ ನಿವಾಸಿಗಳಿಗೆ ನನ್ನ ಅಭಿನಂದನೆ. ರಾಷ್ಟ್ರ ನಿರ್ಮಾಣದಲ್ಲಿ ಬಂಜಾರ ಸಮುದಾಯದ ಕೊಡುಗೆ ನೀಡುತ್ತಿದೆ ಎಂದರು.

  • 19 Jan 2023 02:59 PM (IST)

    PM Modi Yadgir Visit Live: ಕಲಬುರಗಿ, ಬೀದರ್​, ರಾಯಚೂರು ಜಿಲ್ಲೆಯ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ

    ಕಲಬುರಗಿ: 5 ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆಯನ್ನು ಪ್ರಧಾನಿ ಮೋದಿ ನೀಡಿದರು. ಜಿಲ್ಲೆಯ 27,267 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದರು. ಬೀದರ್ ಜಿಲ್ಲೆಯ 7,500 ತಾಂಡಾ ನಿವಾಸಿಗಳಿಗೆ, ರಾಯಚೂರು ಜಿಲ್ಲೆಯ 3,500 ತಾಂಡಾ ನಿವಾಸಿಗಳಿಗೆ, ವಿಜಯಪುರ ಜಿಲ್ಲೆಯ 2,605 ತಾಂಡಾ ನಿವಾಸಿಗಳಿಗೆ, ಲಂಬಾಣಿ ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ವಡ್ಡರಹಟ್ಟಿ ನಿವಾಸಿಗಳಿಗೆ ಹಕ್ಕು ಪತ್ರವನ್ನು ವಿತರಿಸಿದರು. ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸಲು ಹಕ್ಕುಪತ್ರ ವಿತರಣೆ ಮಾಡಲಾಯಿತು.

  • 19 Jan 2023 02:46 PM (IST)

    PM Modi Yadgir Visit Live: ನಗಾರ್ ಬಾರಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ

    ಕಲಬುರಗಿ: ನರೇಂದ್ರ ಮೋದಿ ಅವರಿಂದ ಘೋರ್ ಬಂಜಾರ್ ನಗಾರ್ ಬಾರಿಸೋ ಮೂಲಕ ಚಾಲನೆ ನೀಡಲಾಯಿತು. ಸಂಭ್ರಮದಿಂದ ನಗಾರಿ ಬಾರಿಸಿದ ಪ್ರಧಾನಿ ಮೋದಿ.

  • 19 Jan 2023 02:44 PM (IST)

    PM Modi Yadgir Visit Live: ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ

    ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಹೆಲಿಪ್ಯಾಡ್​ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರು. ಹೆಲಿಪ್ಯಾಡ್​ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಸ್ವಾಗತಿಸಿದರು. ಸಚಿವರಾದ ಅಶೋಕ್, ಪ್ರಭು ಚೌಹಾಣ್, ಸಂಸದ ಉಮೇಶ್​ ಜಾಧವ್​, ರಾಜ್ಯಪಾಲ ಗೆಹ್ಲೋಟ್​, ಸಿಎಂ ಬೊಮ್ಮಾಯಿ ಆಗಮಿಸಿದರು. ಮಳಖೇಡ ಗ್ರಾಮದ ಸಮಾವೇಶ ಸ್ಥಳಕ್ಕೆ ಕಾರಿನಲ್ಲಿ ಪ್ರಧಾನಿ ತೆರಳಿದರು. ಲಂಬಾಣಿ ತಾಂಡಾ ಕಂದಾಯ ಗ್ರಾಮಗಳಾಗಿ ಸರ್ಕಾರ ಘೋಷಿಸಿದ್ದು, 51,000 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ.

  • 19 Jan 2023 01:35 PM (IST)

    PM Modi Karnataka Visit Live: ಲಂಬಾಣಿ ಜನರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ -ಸಚಿವ ಅಶೋಕ್

    ಸೇಡಂ ತಾಲೂಕಿನ ಮಳಖೇಡ್ ನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿದ್ದು, ಲಂಬಾಣಿ ಜನರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಂದು 51900 ಜನರಿಗೆ ಹಕ್ಕು ಪತ್ರ ನೀಡಲಾಗುತ್ತದೆ. ಮುಂದಿನ ತಿಂಗಳು ಉಳಿದವರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವದು. ಆ ಕಾರ್ಯಕ್ರಮಕ್ಕೆ ಅಮಿತ್ ಶಾ ಬರುತ್ತಾರೆ ಎಂದರು.

  • 19 Jan 2023 01:33 PM (IST)

    PM Modi Karnataka Visit Live: ಕೊಡೆಕಲ್​ ಸಮಾವೇಶ ಮುಗಿಸಿ ತೆರಳಿದ ಪ್ರಧಾನಿ ನರೇಂದ್ರ ಮೋದಿ

    ಕೊಡೆಕಲ್​ ಸಮಾವೇಶ ಮುಗಿಸಿ ಮಳಖೇಡ ಗ್ರಾಮದತ್ತ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಬೆಳೆಸಿದ್ದಾರೆ. Mi-17V5 ಹೆಲಿಕಾಪ್ಟರ್​ನಲ್ಲಿ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​ನಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮಕ್ಕೆ ತೆರಳಿದ್ದಾರೆ. ಪ್ರಧಾನಿ ಜೊತೆ ರಾಜ್ಯಪಾಲ ಗೆಹ್ಲೋಟ್​, ಸಿಎಂ ಬೊಮ್ಮಾಯಿ ಕೂಡ ಪ್ರಯಾಣಿಸುತ್ತಿದ್ದಾರೆ.

  • 19 Jan 2023 01:30 PM (IST)

    PM Modi Karnataka Visit Live: ಪ್ರಧಾನಿ ಮೋದಿ, ಐಎಎಫ್​ ಹೆಲಿಕಾಪ್ಟರ್​ ನೋಡಲು ಮುಗಿಬಿದ್ದ ಜನ

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್​ ಗ್ರಾಮದ ತಾತ್ಕಾಲಿಕ ಹೆಲಿಪ್ಯಾಡ್​ ಸುತ್ತಮುತ್ತ ಜನ ಸೇರಿದ್ದಾರೆ. ಪ್ರಧಾನಿ ಮೋದಿ, ಐಎಎಫ್​ ಹೆಲಿಕಾಪ್ಟರ್​ ನೋಡಲು ಜನರು ಮುಗಿಬಿದ್ದಿದ್ದಾರೆ. ಜನರನ್ನ ತಡೆಯಲು ಪೊಲೀಸರು ಪರದಾಡುತ್ತಿದ್ದಾರೆ.

  • 19 Jan 2023 01:26 PM (IST)

    PM Modi Yadgir Visit Live: ಪ್ರಧಾನಿ ಮೋದಿ ಬಂದಿದ್ದು ನಮಗೆಲ್ಲ ಸಂತೋಷ -ಡಿಕೆ ಶಿವಕುಮಾರ್

    ಪ್ರಧಾನಿ ಮೋದಿ ಬಂದಿದ್ದು ನಮಗೆಲ್ಲ ಸಂತೋಷ. ಆದ್ರೆ ಯುವಕರಿಗೆ ಉದ್ಯೋಗ ನೀಡಲು ಯೋಜನೆ ಮಾಡಿದ್ದಾರೆ. ರೈತರ ಆದಾಯ ಯಾಕೆ ಡಬಲ್ ಆಗಿಲ್ಲ ಎಂದು ಮೋದಿ ಹೇಳಲಿ. ಕಮಿಷನ್​​ ಕುರಿತು ಕೆಂಪಣ್ಣನ ಅರ್ಜಿಗೆ ಯಾಕೆ ಉತ್ತರ ಕೊಡಲಿಲ್ಲ? ಪಿಎಸ್​ಐ ಹಗರಣ, ಯತ್ನಾಳ್​-ನಿರಾಣಿ ಹೇಳಿಕೆಗೆ ಉತ್ತರ ಕೊಡಲಿ. ಚುನಾವಣಾ ಸಮಯದಲ್ಲಿ ಪದೇಪದೆ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಚಾಕೋಲೆಟ್ ಕೊಡಲು ಬರುತ್ತಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದ್ರೆ ಏನೂ ಆಗಲ್ಲ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ರು.

  • 19 Jan 2023 01:22 PM (IST)

    PM Modi Yadgir Visit Live: ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದು ನಾವು -ಸಿದ್ದರಾಮಯ್ಯ

    ತಾಂಡಾ ನಿವಾಸಿಗಳಿಗೆ ಮೋದಿಯಿಂದ ಹಕ್ಕುಪತ್ರ ವಿತರಣೆ ವಿಚಾರಕ್ಕೆ ಸಂಬಂಧಿಸಿ ಕಂದಾಯ ಗ್ರಾಮ ಮಾಡಬೇಕೆಂದು ಖರ್ಗೆ ಪ್ರಯತ್ನ ಮಾಡಿದ್ದರು ಎಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾಗೋಡು ತಿಮ್ಮಪ್ಪ ಮಂತ್ರಿ ಆಗಿದ್ದಾಗ ಕಾನೂನು ಜಾರಿ ಮಾಡಿದ್ರು. ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದೆ. ಬಿಜೆಪಿಯವರು ನಾವು ಅಡುಗೆ ಮಾಡಿದ್ದನ್ನು ಊಟ ಮಾಡುತ್ತಿದ್ದಾರೆ. ಮೋದಿಗೆ ತಪ್ಪು ಸಂದೇಶ ಕೊಟ್ಟು ನಾವೇ ಮಾಡಿದ್ದು ಎಂದು ಹೇಳ್ತಿದ್ದಾರೆ. ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದು ನಾವು. ಇವತ್ತು ಮೋದಿ ಕರೆಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ನಾವ ಹಕ್ಕು ಪತ್ರ ರೆಡಿ ಮಾಡಿದ್ದೆವು, ಇವರು ಹಂಚೋಕೆ ಬಂದಿದ್ದಾರೆ. ಬಿಜೆಪಿಯವರು ಮೋದಿಯಿಂದ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • 19 Jan 2023 01:19 PM (IST)

    PM Modi Karnataka Visit Live: ಬಿಜೆಪಿ ಸರ್ಕಾರ ಡಕ್ ಔಟ್ ಆಗಿದೆ -ಮೊಹಮ್ಮದ್ ನಲಪಾಡ್

    ಬಿಜೆಪಿ ಸರ್ಕಾರ ಡಕ್ ಔಟ್ ಆಗಿದೆ. ಇವಾಗ ಸೆಂಚೂರಿ ಹೊಡೆಯೋಕೆ ಇವರೇನು ತೆಂಡೂಲ್ಕರ್, ಕೊಯ್ಲಿನಾ ಎಂದು ಹುಬ್ಬಳ್ಳಿಯಲ್ಲಿ ಮೊಹಮ್ಮದ್ ನಲಪಾಡ್ ವ್ಯಂಗ್ಯವಾಡಿದ್ದಾರೆ. ನಾಲ್ಕು ವರ್ಷದಲ್ಲಿ ಏನೂ ಮಾಡದೆ ಲಾಸ್ಟ್ 100 ದಿನದಲ್ಲಿ ಏನ್ ಮಾಡ್ತಾರೆ. 100 ದಿನದಲ್ಲಿ ಸೆಂಚುರಿ ಹೊಡೆಯೋಕೆ ಇವರೇನು ತೆಂಡೂಲ್ಕರ್,ಕೊಹ್ಲಿನಾ? ಇವರು ಆಲ್ ರೆಡಿ ಡಕೌಟ್ ಆಗಿದ್ದಾರೆ. ಡಕೌಟ್ ಆದ ಗಿರಾಕಿ ಬಗ್ಗೆ ನಾನು ಮಾತಾಡಲ್ಲ ಎಂದು ನಲಪಾಡ್ ವ್ಯಂಗ್ಯವಾಡಿದ್ದಾರೆ.

  • 19 Jan 2023 01:13 PM (IST)

    PM Modi Karnataka Visit Live: ಪಿಎಂ ಮೋದಿ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ

    ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಹಿನ್ನೆಲೆ ಪಿಎಂ ಮೋದಿ ವಿರುದ್ಧ ಸಿದ್ದರಾಮಯ್ಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ‘ನ್ಯಾಯಬೇಕು ಮೋದಿ’ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಗುತ್ತಿಗೆದಾರ ಸಂತೋಷ್​ ಪಾಟೀಲ್ ಬದುಕಿದ್ದಾಗಲಂತೂ ನ್ಯಾಯ ಸಿಗ್ಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿಯವರೇ? ಮೆಟ್ರೋ ಪಿಲ್ಲರ್​ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ. ಚೀಫ್ ಇಂಜಿನಿಯರ್ ಮೇಲೆ ಕ್ರಮ ಯಾವಾಗ ಮೋದಿಯವರೇ? ಕಮಿಷನ್​ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಪ್ರಸಾದ್ ಮೃತಪಟ್ಟ. ಈ ಸಾವಿನ ಸರಣಿ ಕೊನೆಗಾಣಿಸುವವರು ಯಾರು ಮೋದಿಯವರೇ? ನಮ್ಮ ರೈತನ ನಂದಿನಿ ಮೇಲೆ ಗುಜರಾತ್​ನ ಅಮುಲ್​ ಕಣ್ಣು ಬಿದ್ದಿದೆ. ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ಬುದ್ಧಿ ಬಿಡುವುದು ಯಾವಾಗ? ಶರಾವತಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ? ಎಂದು ಟ್ವೀಟ್​ ಮೂಲಕ ಮೋದಿಗೆ ಸಿದ್ದರಾಮಯ್ಯ ಹಲವು ಪ್ರಶ್ನೆ ಕೇಳಿದ್ದಾರೆ.

  • 19 Jan 2023 01:09 PM (IST)

    PM Modi Yadgir Visit Live: ಉತ್ತರ ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಳ -ಮೋದಿ

    ದೇಶದ ಎರಡು ದೊಡ್ಡ ಬಂದರು ನಗರಿಗಳ ಸಂಪರ್ಕ ಮುಂದಿನ ದಿನಗಳಲ್ಲಿ ಸುಧಾರಿಸಲಿದೆ. ಇದರಿಂದ ಉದ್ಯೋಗಾವಕಾಶ ಹೆಚ್ಚಾಗಲಿದೆ. ಪ್ರವಾಸೋದ್ಯಮಕ್ಕೆ ಹೊಸ ಒತ್ತು ಸಿಗಲಿದೆ. ಮೂಲಸೌಕರ್ಯದ ವಿಚಾರದಲ್ಲಿ ಡಬಲ್ ಎಂಜಿನ್ ಸರ್ಕಾರದ ಪರಿಶ್ರಮದಿಂದಾಗಿ ಕರ್ನಾಟಕಕ್ಕೆ ಹೂಡಿಕೆಗಳು ಹರಿದು ಬರುತ್ತಿವೆ. ಉತ್ತರ ಕರ್ನಾಟಕಕ್ಕೂ ಈ ಹೂಡಿಕೆಯ ಲಾಭ ಸಿಕ್ಕೇ ಸಿಗುತ್ತದೆ. ಇನ್ನೊಮ್ಮೆ ಇದೇ ರೀತಿ ನಮಗೆ ಆಶೀರ್ವದಿಸಿ ಎಂದು ಕೋರುತ್ತೇನೆ. ಇಂಥ ಹಲವು ಯೋಜನೆಗಳಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

  • 19 Jan 2023 01:08 PM (IST)

    PM Modi Yadgir Visit Live: ರಾಗಿ ಸ್ಮರಿಸಿದ ಮೋದಿ

    ಎಥೆನಾಲ್ ನೀತಿಯಲ್ಲಿ ಶೀಘ್ರ ಜಾರಿಗೊಳಿಸುತ್ತೇವೆ. ಇದನ್ನು ಸಾಧಿಸಲು ಕರ್ನಾಟಕದ ಕಬ್ಬು ಬೆಳೆಗಾರರ ಕೊಡುಗೆ ಅತ್ಯಗತ್ಯ. ನಾವು 2023ನೇ ಇಸವಿಯನ್ನು ಕಿರುಧಾನ್ಯಗಳ ವರ್ಷವಾಗಿ ಘೋಷಿಸಿದ್ದೇವೆ. ರಾಗಿ ಸೇರಿದಂತೆ ಹಲವು ಕಿರುಧಾನ್ಯಗಳನ್ನು ಬೆಳೆಯುವ ಕರ್ನಾಟಕ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಕರ್ನಾಟಕಕ್ಕೆ ಹೆಚ್ಚು ಲಾಭವಾಗಲಿದೆ.

  • 19 Jan 2023 01:05 PM (IST)

    PM Modi Yadgir Visit Live: ದೇಶದ ಆರ್ಥಿಕತೆಗೆ ಉತ್ತರ ಕರ್ನಾಟಕದ ಕೊಡುಗೆ ದೊಡ್ಡದು -ಮೋದಿ

    ನಾನು ಇಂದು ಯಾದಗಿರಿ ಬಂದು ಕರ್ನಾಟಕಕ್ಕೆ ಮತ್ತೊಂದು ಕೃತಜ್ಞತೆ ಅರ್ಪಿಸುತ್ತೇನೆ. ಇದು ತೊಗರಿಯ ಕಣಜ. ಕಳೆದ ಕೆಲ ವರ್ಷಗಳಲ್ಲಿ ತೊಗರಿಗಾಗಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ದೇಶದ ಆರ್ಥಿಕತೆಯ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಬೆಳವಣಿಗೆ. ಇದಕ್ಕಾಗಿ ನಾನು ಉತ್ತರ ಕರ್ನಾಟಕದ ರೈತರಿಗೆ ಅಭಾರಿಯಾಗಿದ್ದೇನೆ. ತೊಗರಿ ಬೆಳೆಗಾರರಿಗಾಗಿ ₹ 7,000 ಕೋಟಿ ಪ್ರೋತ್ಸಾಹ ಧನ ನೀಡಿದ್ದೇವೆ. ಖಾದ್ಯತೈಲದಲ್ಲಿಯೂ ದೇಶ ಸ್ವಾವಲಂಬನೆಯತ್ತ ಸಾಗುತ್ತಿದೆ. ಇದರಲ್ಲಿಯೂ ಕರ್ನಾಟಕದ ಕೊಡುಗೆ ದೊಡ್ಡದು.

  • 19 Jan 2023 01:03 PM (IST)

    PM Modi Yadgir Visit Live: ಡಬಲ್ ಎಂಜಿನ್​ನಿಂದ ಡಬಲ್ ಬೆನಿಫಿಟ್ -ಮೋದಿ

    ನಾವು ಹೊಸ ಶಿಕ್ಷಣ ನೀತಿ ಜಾರಿ ಮಾಡಿದೆವು, ಕರ್ನಾಟಕ ಸರ್ಕಾರ ವಿದ್ಯಾನಿಧಿ ಜಾರಿ ಮಾಡಿತು. ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದರೆ ಕರ್ನಾಟಕ ಸರ್ಕಾರವು ಅವೆಲ್ಲವನ್ನೂ ಸಮರ್ಪಕವಾಗಿ ಬಳಸಿಕೊಂಡಿದೆ. ನಾವು ಮುದ್ರಾ ಯೋಜನೆಯಡಿ ಉದ್ಯಮಗಳಿಗೆ ಪ್ರೋತ್ಸಾಹ ಕೊಡುತ್ತೇವೆ. ಕೊವಿಡ್​ನಿಂದ ಬಾಧಿತರಾದ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರ ನೆರವಾಗಿದೆ. ವಂಚಿತ ಕುಟುಂಬಗಳಿಗೆ, ಸಣ್ಣ ರೈತರಿಗೆ ಈವರೆಗೆ ಕೃಷಿ ನೀತಿಯಲ್ಲಿ ಆದ್ಯತೆ ಸಿಗುತ್ತಿರಲಿಲ್ಲ. ಆದರೆ ಈಗ ನಾವು ಡ್ರೋಣ್​, ನ್ಯಾನೊ ಯೂರಿಯಾದಂಥ ಆಧುನೀಕರಣಕ್ಕೆ ನೆರವಾಗುತ್ತಿದ್ದೇವೆ. ಇದರ ಜೊತೆಜೊತೆಗೆ ಸಹಜ-ಸಾವಯವ ಕೃಷಿಗೂ ಪ್ರೋತ್ಸಾಹಿಸುತ್ತಿದ್ದೇವೆ.

  • 19 Jan 2023 01:00 PM (IST)

    PM Modi Yadgir Visit Live: ಮಕ್ಕಳ ಜೀವ ಉಳಿಸುವ ಶುದ್ಧ ನೀರು -ಮೋದಿ

    ಜಲಜೀವನ್ ಮಿಷನ್​ನ ಮತ್ತೊಂದು ಮುಖ್ಯ ಉದ್ದೇಶವೆಂದರೆ ಮಕ್ಕಳ ಜೀವ ಉಳಿಸುವುದು. ಶುದ್ಧ ಕುಡಿಯುವ ನೀರು ಪೂರೈಕೆಯಾದರೆ ಲಕ್ಷಾಂತರ ಮಕ್ಕಳ ಜೀವ ಉಳಿಯುತ್ತದೆ. ಮಕ್ಕಳ ಜೀವ ಉಳಿಸುವುದಕ್ಕಿಂತಲೂ ಶ್ರೇಷ್ಠವಾದ ಕೆಲಸ ಯಾವುದಿದೆ? ಎಲ್ಲ ಮನೆಗಳಿಗೂ ನೀರು ಸಂಪರ್ಕ ಒದಗಿಸುವುದು ಡಬಲ್ ಎಂಜಿನ್ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಡಬಲ್ ಎಂಜಿನ್ ಎಂದರೆ ಡಬಲ್ ವೇಗ, ಡಬಲ್ ಲಾಭ. ಇದರಿಂದ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ.

  • 19 Jan 2023 01:00 PM (IST)

    PM Modi Yadgir Visit Live: ಮಹಿಳೆಯರ ಆಶೀರ್ವಾದ ಮೋದಿಗೆ ಸಿಗುತ್ತಿದೆ

    ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಜಲ್​ಜೀವನ್ ಮಿಷನ್​ ಉತ್ತಮ ಉದಾಹರಣೆಯಾಗಿದೆ. ನಾವು ಕಾರ್ಯಕ್ರಮ ಆರಂಭಿಸಿದಾಗ 3 ಕೋಟಿ ಮನೆಗಳಿಗೆ ಮಾತ್ರವೇ ನಲ್ಲಿ ಸಂಪರ್ಕ ಇತ್ತು. ಈಗ ದೇಶದಲ್ಲಿ 11 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 8 ಕೋಟಿ ಹೊಸ ಕುಟುಂಬಗಳಿಗೆ ಪೈಪ್​ಗಳ ಸಂಪರ್ಕ ಬಂದಿದೆ. ಇದರಲ್ಲಿ ಕರ್ನಾಟಕದ ಲಕ್ಷಾಂತರ ಕುಟುಂಬಗಳು ಸೇರಿವೆ. ಕರ್ನಾಟಕ ಮತ್ತು ದೇಶದ ಎಲ್ಲ ಮನೆಗಳಿಗೂ ನಾವು ನೀರು ಒದಗಿಸುತ್ತೇವೆ. ನಲ್ಲಿಯಿಂದ ನೀರು ಮನೆಗೆ ಬಂದಾಗ ತಾಯಂದಿರು ಮೋದಿಗೆ ಮನಃಪೂರ್ವಕ ಆಶೀರ್ವಾದ ಕೊಡ್ತಾರೆ.

  • 19 Jan 2023 12:59 PM (IST)

    PM Modi Yadgir Visit Live: ಹನಿಹನಿ ನೀರು ಬಳಸೋಣ -ಮೋದಿ

    ಈಗ ದೇಶದಲ್ಲಿ ‘ಪರ್ ಕ್ರಾಪ್, ಮೋರ್ ಕ್ರಾಪ್’ ಹಾಗೂ ‘ಮೈಕ್ರೋ ಇರಿಗೇಶನ್’ (ಪ್ರತಿ ಹನಿಗೆ ಹೆಚ್ಚು ಬೆಳೆ) ಯೋಜನೆಯನ್ನು ಆದ್ಯತೆಯೊಂದಿಗೆ ಜಾರಿಗೊಳಿಸುತ್ತಿದ್ದೇವೆ. ಕರ್ನಾಟಕದಲ್ಲಿಯೂ ಈ ಯೋಜನೆ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ. ಡಬಲ್ ಎಂಜಿನ್ ಸರ್ಕಾರವು ಅಂತರ್ಜಲ ವೃದ್ಧಿಗೂ ಸತತ ಪ್ರಯತ್ನ ಮಾಡುತ್ತಿದೆ. ಕೆರೆ-ಕುಂಟೆಗಳ ಪುನರುಜ್ಜೀವನಕ್ಕೆ ಒತ್ತು ಕೊಡುತ್ತಿದೆ.

  • 19 Jan 2023 12:54 PM (IST)

    PM Modi Yadgir Visit Live: ಹಲವು ಹೊಸ ಯೋಜನೆಗಳ ಅನುಷ್ಠಾನ

    ಯಾದಗಿರಿಯಲ್ಲಿ ಈಗ ಹಲವು ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಆಹಾರ ಉದ್ಯಮಗಳಿಗೆ ಇಲ್ಲಿ ಉತ್ತೇಜನ ಸಿಗುತ್ತಿದೆ. ಭಾರತವು ಅಭಿವೃದ್ಧಿಹೊಂದಲು ರಕ್ಷಣೆ ಮತ್ತು ಆಂತರಿಕ ಭದ್ರತೆಯೊಂದಿಗೆ ಉತ್ತಮ ಆಡಳಿತವೂ ಅತ್ಯಗತ್ಯ. ಡಬಲ್ ಎಂಜಿನ್ ಸರ್ಕಾರವು ಈ ಆಶಯ ಈಡೇರಿಸುತ್ತಿದೆ. ನಾವು ಘೋಷಿಸಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಹಳೆಯ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದೇವೆ. ಕರ್ನಾಟಕದಲ್ಲಿ ಹಲವು ಹೊಸ ಯೋಜನೆಗಳು ನಡೆಯುತ್ತಿವೆ. ನದಿಗಳ ಜೋಡಣೆಯಿಂದ ಬರಪೀಡಿತ ಪ್ರದೇಶಗಳ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದೇವೆ.

  • 19 Jan 2023 12:52 PM (IST)

    PM Modi Yadgir Visit Live: ಸುಧಾರಿಸುತ್ತಿದೆ ಯಾದಗಿರಿ -ಮೋದಿ

    ಯಾದರಿಗಿಯಲ್ಲಿ ಮಕ್ಕಳ ಪೌಷ್ಟಿಕತೆ ವರ್ಧಿಸಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಸೇವೆ ಸಿಗುತ್ತಿದೆ. ಶಿಕ್ಷಣ, ಆರೋಗ್ಯ, ಸಂಪರ್ಕದಲ್ಲಿ ಯಾದಗಿರಿಯು ಇಂದು ಟಾಪ್-10 ಆಕಾಂಕ್ಷಿ ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ಈ ಸಾಧನೆಗಾಗಿ ಯಾದಗಿರಿಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವನ್ನು ಶ್ಲಾಘಿಸುತ್ತೇನೆ.

  • 19 Jan 2023 12:51 PM (IST)

    PM Modi Yadgir Visit Live: ನಾವು ವೋಟ್​ ಬ್ಯಾಂಕ್ ರಾಜಕಾರಣ ಮಾಡಲ್ಲ -ಮೋದಿ

    ನಾವು ಎಂದಿಗೂ ವೋಟ್​ಬ್ಯಾಂಕ್ ರಾಜಕಾರಣ ಮಾಡಲ್ಲ. ಅಭಿವೃದ್ಧಿಗೆ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ. ಯಾದರಿಗಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ಆಕಾಂಕ್ಷಿ ಜಿಲ್ಲೆ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ.

  • 19 Jan 2023 12:51 PM (IST)

    PM Modi Yadgir Visit Live: ಹಿಂದಿನ ಸರ್ಕಾರಗಳಿಂದ ರಾಜ್ಯಕ್ಕೆ ನಷ್ಟ -ಮೋದಿ

    ಈ ಕ್ಷೇತ್ರವು ಅಭಿವೃದ್ಧಿ ಯಾತ್ರೆಯಲ್ಲಿ ಬಹಳ ಹಿಂದೆ ಬಿದ್ದಿತ್ತು. ಹಿಂದೆ ಇದ್ದ ಸರ್ಕಾರಗಳು ಯಾದಗಿರಿಯಂಥ ಹಲವು ಜಿಲ್ಲೆಗಳನ್ನು ಹಿಂದುಳಿದಿವೆ ಎಂದು ಘೋಷಿಸಿ ಕೈತೊಳೆದುಕೊಂಡಿದ್ದವು. ಆದರೆ ನಾವು ಹಾಗಲ್ಲ. ಈ ಜಿಲ್ಲೆಗಳು ಹಿಂದುಳಿದಿರುವ ಕಾರಣಗಳನ್ನು ಹುಡುಕಿ, ಪರಿಹರಿಸಲು ಯತ್ನಿಸಿದೆವು. ಆದರೆ ಹಿಂದಿದ್ದವರು ಅವನ್ನು ಹುಡುಕಲು ಸಮಯ ಕೊಡಲೇ ಇಲ್ಲ. ರಸ್ತೆ, ವಿದ್ಯುತ್, ನೀರಿನಂಥ ಸೌಕರ್ಯ ಒದಗಿಸಲು ಹಿಂದಿನ ಸರ್ಕಾರಗಳು ವಿಫಲವಾದವು. ಅವರು ಮತಬ್ಯಾಂಕ್ ರಾಜಕಾರಣಕ್ಕೇ ಒತ್ತು ಕೊಟ್ಟರು. ಜಾತಿ, ಮತಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರು. ಇದರಿಂದ ಇಡೀ ಕರ್ನಾಟಕ, ನೀವೆಲ್ಲರೂ ಕಷ್ಟ-ನೋವು ಅನುಭವಿಸುವಂತೆ

  • 19 Jan 2023 12:48 PM (IST)

    PM Modi Yadgir Visit Live: ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು -ಮೋದಿ

    ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗುತ್ತಿರುವ ಕೆಲಸಗಳು ಶ್ಲಾಘನೀಯ. ಇದಕ್ಕಾಗಿ ಬೊಮ್ಮಾಯಿ ಮತ್ತು ಅವರ ಸಚಿವರನ್ನು ಅಭಿನಂದಿಸುತ್ತೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಮುಂದಿನ 25 ವರ್ಷಗಳ ಕನಸು ಹೊತ್ತು ನಾವು ಮುನ್ನಡೆಯುತ್ತಿದ್ದೇವೆ. ಇದು ನಮಗೆಲ್ಲರಿಗೂ ಅಮೃತ ಕಾಲ. ಈ ಅಮೃತ ಕಾಲದಲ್ಲಿ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಿದೆ. ಭಾರತದ ಎಲ್ಲ ನಾಗರಿಕರಿಗೆ, ಕುಟುಂಬಗಳಿಗೆ, ರಾಜ್ಯಗಳು ಅಭಿಯಾನದ ಭಾಗವಾದಾಗ ಮಾತ್ರ ಭಾರತ ವಿಕಸಿತವಾಗಲಿದೆ. ರೈತರು, ಕಾರ್ಮಿಕರು ಮತ್ತು ಎಲ್ಲರ ಬದುಕು ಸುಧಾರಿಸಿದಾಗ ಮಾತ್ರ ಭಾರತ ವಿಕಸಿತವಾಗಲಿದೆ. ಕೃಷಿಯಲ್ಲಿ ಫಸಲು ಚೆನ್ನಾಗಿ ಬರಬೇಕು, ಕೈಗಾರಿಕೆಯಲ್ಲಿ ಉತ್ಪಾದನೆ ಚೆನ್ನಾಗಿ ಆಗಬೇಕು. ಆಗಷ್ಟೇ ಭಾರತ ವಿಕಸಿತವಾಗಲಿದೆ.

  • 19 Jan 2023 12:45 PM (IST)

    PM Modi Yadgir Visit Live: ಯಾದಗಿರಿಯ ಅಭಿವೃದ್ಧಿಗೆ ನಾವು ಬದ್ಧ -ಮೋದಿ

    ಕರ್ನಾಟಕದಲ್ಲಿಂದು ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ನಾರಾಯಣಪುರ ಎಡದಂಡೆ ಯೋಜನೆಯ ವಿಸ್ತರಣೆ, ಆಧುನೀಕರಣಗೊಳಿಸಲಾಗಿದೆ. ಇದರಿಂದ ಮೂರು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೇರ ಲಾಭವಾಗಲಿದೆ. ಯಾದರಿಗಿಯ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ಸೂರತ್-ಚೆನ್ನೈ ಎಕನಾಮಿಕ್ ಕಾರಿಡರ್​ನ ಕರ್ನಾಟಕದ ಭಾಗದ ಕೆಲಸವು ಇಂದಿನಿಂದ ಆರಂಭವಾಗಲಿದೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಜನಜೀವನ ಸುಧಾರಿಸಲಿದೆ. ಉದ್ಯಮಗಳು ಹೆಚ್ಚಾಗಲಿವೆ.

  • 19 Jan 2023 12:45 PM (IST)

    PM Modi Yadgir Visit Live: ಸುರಪುರದ ಇತಿಹಾಸ ಸ್ಮರಿಸಿದ ಮೋದಿ

    ಯಾದಗಿರಿಯು ಸಮೃದ್ಧ ಇತಿಹಾಸ ಹೊಂದಿದೆ. ರಟ್ಟಿಹಳ್ಳಿಯ ಸ್ಮಾರಕದ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಹಲವು ಅಂಶಗಳು ಇಲ್ಲಿದೆ. ಸುರಪುರದ ಹೋರಾಟಗಾರರು, ಮಹಾನ್ ರಾಜಾ ವೆಂಕಟಪ್ಪನಾಯಕ ಸ್ವರಾಜ್ಯದ ಹೋರಾಟದಲ್ಲಿ ವಿಖ್ಯಾತರಾದವರು. ಈ ನೆಲದ ಬಗ್ಗೆ ನಮಗೆ ಗರ್ವವಿದೆ.

  • 19 Jan 2023 12:44 PM (IST)

    PM Modi Yadgir Visit Live: ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ -ಪ್ರಧಾನಿ ಮೋದಿ

    ನನ್ನ ದೃಷ್ಟಿ ಎಷ್ಟು ದೂರ ಹೋಗಬಹುದೋ ಅಷ್ಟೂ ದೂರಕ್ಕೆ ಜನರೇ ಕಾಣಿಸುತ್ತಿದ್ದಾರೆ. ಹೆಲಿಪ್ಯಾಡ್​ನಲ್ಲಿಯೂ ಜನರೋ ಜನರು. ಇಲ್ಲಿಯೂ ಅಷ್ಟೇ. ಪೆಂಡಾನ್​ನ ಹೊರಗೂ ಸಾವಿರಾರು ಜನರು ಬಿಸಿಲಿನಲ್ಲಿ ನಿಂತಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ.

  • 19 Jan 2023 12:43 PM (IST)

    PM Modi Yadgir Visit Live: ಕನ್ನಡದಲ್ಲಿ ಮೋದಿ ಭಾಷಣ ಆರಂಭ

    ‘ಕರ್ನಾಟಕದಲ್ಲಿ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು’ ಎಂದು ಮೋದಿ ಕೈಮುಗಿದರು. ಜನರು ‘ಮೋದಿ ಮೋದಿ’ ಎಂದು ಹರ್ಷೋದ್ಗಾರ ಮಾಡಿದರು.

  • 19 Jan 2023 12:40 PM (IST)

    PM Modi Yadgir Visit Live: ಸೂರತ್-ಚೆನ್ನೈ ಹೆದ್ದಾರಿಗೆ ಶಿಲಾನ್ಯಾಸ

    ಯಾದಗಿರಿ ಮತ್ತು ಕಲಬುರ್ಗಿ ಮಾರ್ಗವಾಗಿ ಹಾದುಹೋಗುವ ಸೂರತ್-ಚೆನ್ನೈ ಹೆದ್ದಾರಿಯ ಹಲವು ಕಾಮಗಾರಿಗಳಿಗೂ ಇದೇ ವೇಳೆ ಶಿಲಾನ್ಯಾಸ ನೆರವೇರಿಸಲಾಯಿತು. ಈ ಯೋಜನೆಗಳಿಗೆ ಒಟ್ಟು ₹ 4,110 ಕೋಟಿ ವೆಚ್ಚವಾಗಲಿದೆ. ಈ ಯೋಜನೆಯಿಂದ ಕೃಷಿ ಹಾಗೂ ಕೈಗಾರಿಕೆ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.

  • 19 Jan 2023 12:34 PM (IST)

    PM Modi Yadgir Visit Live: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ

    ಪ್ರಧಾನಿ ನರೇಂದ್ರ ಮೋದಿ ಅವರು ಯಾದಗಿರಿ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿದರು. ₹ 2,004 ಕೋಟಿ ಮೊತ್ತದಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸಲಾಗುತ್ತದೆ. 117 ಎಂಎಲ್​ಡಿ ಸಾಮರ್ಥ್ಯದ ಜಲ ಶುದ್ಧೀಕರಣ ನಿರ್ಮಿಸಲಾಗುತ್ತದೆ. ಇದರಿಂದ 15.84 ಲಕ್ಷ ಜನರಿಗೆ ಅನುಕೂಲವಾಗಲಿದೆ. 710 ಗ್ರಾಮೀಣ ವಸತಿ ಪ್ರದೇಶಗಳು, 3 ಪಟ್ಟಣಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.

  • 19 Jan 2023 12:32 PM (IST)

    PM Modi Yadgir Visit Live: ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯ ಹತ್ತಾರು ವೈಶಿಷ್ಟ್ಯ

    ಈ ಯೋಜನೆಯಡಿ ಮುಖ್ಯ ಕಾಲುವೆಯನ್ನು ಸಮಗ್ರವಾಗಿ ಪುನಃಶ್ಚೇತನಗೊಳಿಸಲಾಗಿದೆ. ಸ್ವಯಂಚಾಲಿತ ಗೇಟುಗಳನ್ನು ಅಳವಡಿಸಿರುವುದರಿಂದ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ಸಮಾನವಾಗಿ ನೀರು ಸಿಗುತ್ತದೆ. 3 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾಗುತ್ತದೆ.

  • 19 Jan 2023 12:31 PM (IST)

    PM Modi Yadgir Visit Live: ಪ್ರಧಾನಿ ಮೋದಿಯಿಂದ ಆಧುನೀಕರಣಗೊಂಡ ಎಡದಂಡೆ ಕಾಲುವೆ ಲೋಕಾರ್ಪಣೆ

    ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. ಎಡದಂಡೆ ಕಾಲುವೆಯ ವಿಸ್ತರಣೆ, ಪುನಃಶ್ಚೇತನ ಹಾಗೂ ಆಧುನೀಕರಣ ಯೋಜನೆಯನ್ನು ₹ 4,699 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿದೆ. 10,000 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯವಿರುವ ಈ ಕಾಲುವೆಯು ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 4.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತದೆ.

  • 19 Jan 2023 12:30 PM (IST)

    PM Modi Yadgir Visit Live: ನೀರಾವರಿ ದಶಕ ಘೋಷಿಸಿದ ಸಿಎಂ ಬೊಮ್ಮಾಯಿ

    ಮುಂದಿನ ದಶಕವನ್ನು ನೀರಾವರಿ ದಶಕ ಎಂದು ಘೋಷಿಸಿ ಹೆಚ್ಚು ಸಂಪನ್ಮೂಲ, ಹಣ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಸಂಕಲ್ಪ ಮಾಡುತ್ತೇವೆ ಎಂದು ಭಾಷಣದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.

  • 19 Jan 2023 12:27 PM (IST)

    PM Modi Yadgir Visit Live: ನೀರಿನ ಸಮರ್ಪಕ ಬಳಕೆಗೆ ಒತ್ತು: ಬೊಮ್ಮಾಯಿ

    ಅತಿಹೆಚ್ಚು ನೀರುಕೊಟ್ಟು ಸವುಳು ಜವುಳು ಆಗುವುದನ್ನು ತಪ್ಪಿಸಬಹುದು. ದೇಶದಲ್ಲಿ ಅಷ್ಟೇಕೆ, ಏಷ್ಯಾದಲ್ಲಿಯೇ ಅತಿಹೆಚ್ಚು ಸ್ಕಾಡಾ ತಂತ್ರಜ್ಞಾನ ಅಳವಡಿಕೆಯಾದ ಯೋಜನೆ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ. ನೀರಿನ ಸಮರ್ಪಕ ವಿತರಣೆಯ ಪ್ರಧಾನಿಯ ಕನಸು ಈ ಯೋಜನೆಯ ಮೂಲಕ ಸಾಕಾರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯೂ ಇಂಥ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ ಎಲ್ಲ ಊರುಗಳಿಗೆ ಸಮರ್ಪಕ ನೀರು ಒದಗಿಸಲು ಚಿಂತನೆ ನಡೆಸಿದ್ದೇವೆ.

  • 19 Jan 2023 12:24 PM (IST)

    PM Modi Yadgir Visit Live: ಅಚ್ಚುಕಟ್ಟು ಪ್ರದೇಶದ ಎಲ್ಲರಿಗೂ ನೀರು: ಬೊಮ್ಮಾಯಿ

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. 4.5 ಲಕ್ಷ ಹೆಕ್ಟರ್ ವಿಸ್ತೀರ್ಣದಲ್ಲಿ ಕೊನೆಯ ಹಂತದಲ್ಲಿ ನೀರು ತಲುಪುತ್ತಲೇ ಇರಲಿಲ್ಲ. ಇಂದು ಎಲ್ಲ ಶಾಖಾ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಈ ಯೋಜನೆಯು ಹೀಗಾಗಿ ಬಹಳ ಮುಖ್ಯವಾಗುತ್ತದೆ. ನಮ್ಮ ನಾಲೆಗಳಲ್ಲಿ ಶೇ 20ರಷ್ಟು ಹೆಚ್ಚು ನೀರು ಹರಿಸಲು ಸಾಧ್ಯವಾಗುತ್ತಿದೆ. ನೀರು ಹರಿಯುವ ಸಮಗ್ರ ಮಾಹಿತಿ ದಾಖಲಾಗುವುದರಿಂದ ನಿರ್ವಹಣೆ ಸುಲಭವಾಗುತ್ತದೆ.

  • 19 Jan 2023 12:22 PM (IST)

    PM Modi Yadgir Visit Live: ಪ್ರತಿ ಹನಿಯ ಸಮಗ್ರ ಬಳಕೆಗೆ ಒತ್ತು: ಮೋದಿ ಆಶಯ ವಿವರಿಸಿದ ಬೊಮ್ಮಾಯಿ

    ಪ್ರತಿ ಹನಿ ನೀರನ್ನೂ ಸಮಗ್ರವಾಗಿ ಬಳಸಬೇಕು ಎಂಬ ಮೋದಿ ಅವರ ಆಶಯವನ್ನು ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಆರಂಭವಾಗಿತ್ತು. ಆದರೆ ನಂತರ ಯುಪಿಎ ಸರ್ಕಾರದಿಂದ ನಮಗೆ ಬರಬೇಕಿದ್ದ ಈ ಯೋಜನೆ ತಡವಾಯಿತು. ಮುಂದೆ 2014ರಲ್ಲಿ ಮೋದಿ ಪ್ರಧಾನಿಯಾದ ನಂತರ 2015ರಲ್ಲಿ ತ್ವರಿತಗತಿಯ ಯೋಜನೆಯಲ್ಲಿ ಈ ಕಾಮಗಾರಿ ಆರಂಭವಾಯಿತು ಎಂದರು.

  • 19 Jan 2023 12:21 PM (IST)

    PM Modi Yadgir Visit Live: ರಾಜಾ ವೆಂಕಟಪ್ಪ ನಾಯಕರನ್ನು ಸ್ಮರಿಸಿದ ಸಿಎಂ ಬೊಮ್ಮಾಯಿ

    ಬೋಲೋ ಭಾರತ್ ಮಾತಾ ಕಿ ಜೈ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಆರಂಭಿಸಿದರು. ಈ ವೇಳೆ ಅವರು, ಸುರಪುರದ ರಾಜಮನೆತನದ ಕೊಡುಗೆಯನ್ನು ಸ್ಮರಿಸಿದರು. ರಾಜಾ ವೆಂಕಟಪ್ಪನಾಯಕರ ಸ್ವಾತಂತ್ರ್ಯ ಹೋರಾಟವನ್ನು ವಿವರಿಸಿದರು.

  • 19 Jan 2023 12:21 PM (IST)

    PM Modi Yadgir Visit Live: ದೇಶದಲ್ಲೀಗ ಬಸವಣ್ಣನ ಆಡಳಿತ -ಕಾರಜೋಳ

    11 ಮಂದಿ ಮಹಿಳೆಯರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಅವಕಾಶ ಸಿಕ್ಕಿದೆ. ದೇಶದಲ್ಲಿ ಈಗ ಬಸವಣ್ಣನ ಆಡಳಿತವೇ ಬಂದಂಥ ಭಾವನೆ ಬಂದಿದೆ. ಪ್ರಧಾನಿಗಳು ಸಣ್ಣ ಹಳ್ಳಿಗೆ ಬಂದು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದಾರೆ. ಬಡವರಿಗಾಗಿ ಪ್ರಧಾನಿಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತಿದ್ದಾರೆ ಎಂದು ಕಾರಜೋಳ ಹೆಮ್ಮೆ ವ್ಯಕ್ತಪಡಿಸಿದರು.

  • 19 Jan 2023 12:19 PM (IST)

    PM Modi Yadgir Visit Live: ಭಾಷಣದ ವೇಳೆ ಕೃಷ್ಣ ನ್ಯಾಯಾಧಿಕರಣ ಉಲ್ಲೇಖಿಸಿದ ಕಾರಜೋಳ

    ಕರ್ನಾಟಕದಲ್ಲಿ ಸುಮಾರು 40.6 ಲಕ್ಷ ಹೆಕ್ಟೇರ್ ನೀರಾವರಿಗೆ ಅವಕಾಶವಿದೆ. 30 ಲಕ್ಷ ಹೆಕ್ಟೇರ್​ಗೆ ಈಗಾಗಲೇ ನೀರಾವರಿಗೆ ಸೌಲಭ್ಯ ಸಿಕ್ಕಿದೆ. ಕೃಷ್ಣ ನ್ಯಾಯಾಧಿಕರಣದ ವಿಚಾರವನ್ನು ಪ್ರಧಾನಿ ಗಮನಕ್ಕೆ ತರಲು ಬಯಸುತ್ತೇನೆ. ಅವರೇ ಈ ಯೋಜನೆಗೆ ಅಡಿಗಲ್ಲು ಹಾಕಬೇಕು ಎಂದು ಕಾರಜೋಳ ವಿನಂತಿಸಿದರು.

  • 19 Jan 2023 12:18 PM (IST)

    PM Modi Yadgir Visit Live: ಗೋವಿಂದ ಕಾರಜೋಳರಿಂದ ಸ್ವಾಗತ ಭಾಷಣ

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವೇದಿಕೆಯ ಮೇಲಿದ್ದ ಗಣ್ಯರನ್ನು ನೀರಾವರಿ ಸಚಿವ ಗೋವಿಂದ ಕಾರಜೋಳ ಸ್ವಾಗತಿಸಿದರು. ಕಾಲುವೆಯ ಕೊನೆಯ ಭಾಗದಲ್ಲಿರುವ ರೈತರಿಗೆ, ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ನೀರು ಸಿಗಬೇಕೆಂಬ ಉದ್ದೇಶದಿಂದ ಸ್ಕಾಡಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಕೇಂದ್ರದಿಂದ ₹ 1,010 ಕೋಟಿ ಅನುದಾನ ಬಂದಿದೆ ಎಂದು ಸ್ಮರಿಸಿದರು.

  • 19 Jan 2023 12:10 PM (IST)

    PM Modi Yadgir Visit Live: ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಆರಂಭ

    ಸೇಡಂ ತಾಲೂಕಿನ ಮಳಖೇಡ್ ನಲ್ಲಿ ಪ್ರಧಾನಿ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ಆರಂಭವಾಗಿದೆ. ಬೆಂಗಳೂರು ಮೂಲದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.

  • 19 Jan 2023 12:08 PM (IST)

    PM Modi Yadgir Visit Live: ಕೊಡೆಕಲ್​ನ ಸಮಾವೇಶದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್​ನ ಸಮಾವೇಶದ ವೇದಿಕೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಪ್ರಧಾನಿ ಜೊತೆ ರಾಜ್ಯಪಾಲ ಗೆಹ್ಲೋಟ್​, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ್​ ಖೂಬಾ, ಸಚಿವ ಗೋವಿಂದ ಕಾರಜೋಳ, ಶಾಸಕರಾದ ರಾಜುಗೌಡ, ಎ.ಎಸ್.ಪಾಟೀಲ್ ನಡಹಳ್ಳಿ ಉಪಸ್ಥಿತರಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

  • 19 Jan 2023 12:04 PM (IST)

    PM Modi in Kalaburagi Live: ಮಳಖೇಡ ಕಡೆಗೆ ಹೊರಟ ಬಂಜಾರ ಸಮುದಾಯದ ಜನ

    ಮೋದಿ ಕಾರ್ಯಕ್ರಮ ಹಿನ್ನೆಲೆ ರಾಷ್ಟ್ರಕೂಟರ ರಾಜ್ಯಧಾನಿ ಮಳಖೇಡ ಕಡೆಗೆ ಬಂಜಾರ ಸಮುದಾಯದ ಜನ ಹೊರಟಿದ್ದಾರೆ. ಸರಕಾರಿ ಬಸ್ ಕಾರು ಕ್ರೂಸರ್ ಮೂಲಕ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಕಾಗಿಣಾ ನದಿಯ ತಟದಲ್ಲಿರುವ ಪುಣ್ಯಭೂಮಿ ಮಳಖೇಡದಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಂದಾಯ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ತಾಂಡಾಗಳ ಕಂದಾಯ ಗ್ರಾಮ ಘೋಷಣೆ 51 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತೆ. ಹೀಗಾಗಿ ಬಂಜಾರ ಸಮುದಾಯದ ಉಡುಗೆಯಲ್ಲಿ ಕಾರ್ಯಕ್ರಮದ ಕಡೆಗೆ ಹೊರಟಿದ್ದಾರೆ.

  • 19 Jan 2023 11:58 AM (IST)

    PM Modi in Kalaburagi Live: ಪ್ರಧಾನಿ ಮೋದಿ ಆಗಮನಕ್ಕೂ ಮುನ್ನವೇ ಅಧಿಕಾರಿಗಳಿಂದ ಹಕ್ಕು ಪತ್ರ ವಿತರಣೆ

    ಸೇಡಂ ತಾಲೂಕಿನ ಮಳಖೇಡ್ ನಲ್ಲಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಗೆ ನೀಡಲು ಹಕ್ಕುಪತ್ರ ತಂದಿದ್ದು ಪ್ರಧಾನಿ ಮೋದಿ ಆಗಮನಕ್ಕೂ ಮುನ್ನವೇ ಅಧಿಕಾರಿಗಳೇ ಲಂಬಾಣಿ ತಾಂಡಾ ನಿವಾಸಿಗಳಿಗೆ ಕಂದಾಯ ಗ್ರಾಮ ನಿವೇಶನದ ಹಕ್ಕುಪತ್ರ ನೀಡಿದ್ದಾರೆ. ಪ್ರಧಾನಿ ಬಂದ ನಂತರ ಎಲ್ಲರೂ ಹಕ್ಕು ಪತ್ರ ತೋರಿಸುವಂತೆ ಸೂಚಿಸಿದ್ದಾರೆ.

  • 19 Jan 2023 11:55 AM (IST)

    PM Modi in Kalaburagi Live: ಕೊಡೆಕಲ್​ಗೆ ಬಂದು ಇಳಿದ ಮೋದಿ

    ಪ್ರಧಾನಿ ನರೇಂದ್ರ ಮೋದಿ ಯಾದಗಿರಿಯ ಕೊಡೆಕಲ್ ಬಳಿ ನಿರ್ಮಾಣ ಮಾಡಿರೋ ಹೆಲಿಪ್ಯಾಡ್ ಗೆ ಬಂದು ಇಳಿದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್ ಮಳಖೇಡದಲ್ಲಿ ಪ್ರಧಾನಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ್ದಾರೆ.

  • 19 Jan 2023 11:32 AM (IST)

    PM Modi in Kalaburagi Live: ನಿನ್ನೆಯಿಂದ ನಮ್ಮ ಜನರು ಯಾರೂ ಕೂಡಾ ನಿದ್ದೆ ಮಾಡಿಲ್ಲ

    ಮಳಖೇಡ್ ನಲ್ಲಿ ಪ್ರಧಾನಿ ಮೋದಿ ಲಂಬಾಣಿ ನಿವಾಸಿಗಳಿಗೆ ಕಂದಾಯ ಹಕ್ಕುಪತ್ರ ವಿತರಣೆ ಮಾಡಲಿದ್ದು ವೇದಿಕೆಗೆ ಲಂಬಾಣಿ ಮಹಿಳೆಯರು ಲಂಬಾಣಿ ಸಾಂಪ್ರದಾಯಿಕ ದಿರಿಸಿನಲ್ಲಿ ವೇದಿಕೆಗೆ ಆಗಮಿಸಿದ್ದಾರೆ. ಸಂಸದ ಡಾ.ಉಮೇಶ್ ಜಾಧವ್ ತಮ್ಮ ಸಮಾಜದ ಜನರನ್ನು ಸ್ವಾಗತಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸ್ವತಂತ್ರ ಸಿಕ್ಕಾಗಿನಿಂದ ನಮಗೆ ಕಂದಾಯ ಗ್ರಾಮ ಸ್ಥಾನಮಾನ ಸಿಕ್ಕಿರಲಿಲ್ಲ. ಇದರಿಂದ ನಮ್ಮ ಜನ ಪಡಬಾರದ ಕಷ್ಟ ಪಟ್ಟಿದ್ದಾರೆ. ಇವತ್ತು ಅವರಿಗೆ ಸ್ವತಂತ್ರ ಸಿಕ್ಕಿದೆ. ನಿನ್ನೆಯಿಂದ ನಮ್ಮ ಜನರು ಯಾರೂ ಕೂಡಾ ನಿದ್ದೆ ಮಾಡಿಲ್ಲ. ಹಲವು ವರ್ಷಗಳ ಕನಸು ನನಸಾಗಿದೆ. ಇಂದು ಯಾವುದೇ ರಾಜಕೀಯ ಕಾರ್ಯಕ್ರಮ ಇಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಂದೆ ಮೋದಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಾರೆ. ಎರಡು ಯೋಜನೆಗಳು ಸಿದ್ಧತಾ ಹಂತದಲ್ಲಿವೆ ಎಂದರು.

  • 19 Jan 2023 11:04 AM (IST)

    PM Modi in Kalaburagi Live: ಕಲಬುರಗಿ ಏರ್​ಪೋರ್ಟ್​ನಿಂದ ಕೊಡೆಕಲ್​ಗೆ ಮೋದಿ ಪ್ರಯಾಣ

    ಕಲಬುರಗಿ ಏರ್​ಪೋರ್ಟ್​ನಿಂದ ಪ್ರಧಾನಿ ಮೋದಿ ಕೊಡೆಕಲ್​ಗೆ ತೆರಳಿದ್ದಾರೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​ ಗ್ರಾಮಕ್ಕೆ MI ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿ ಮೋದಿ ಜೊತೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಕೂಡ ತೆರಳಿದ್ದಾರೆ.

  • 19 Jan 2023 11:02 AM (IST)

    PM Modi in Kalaburagi Live: ಮೋದಿ ಭಾವಚಿತ್ರವಿರುವ ಟೀ ಶರ್ಟ್ ಧರಿಸಿ ಬಂದ ಅಭಿಮಾನಿಗಳು

    ಮಳಖೇಡ್ ನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಮೋದಿ ಅಭಿಮಾನಿಗಳು ಪ್ರಧಾನಿ ಮೋದಿ ಭಾವಚಿತ್ರ ವಿರುವ ಟೀ ಶರ್ಟ್ ಹಾಕಿಕೊಂಡು ಬಂದಿದ್ದಾರೆ. ಮೋದಿರನ್ನು ಟಿವಿಯಲ್ಲಿ ನೋಡಿದ್ದೆವು. ಆದ್ರೆ ಇದೀಗ ಹತ್ತಿರದಿಂದ ನೋಡೋ ಅವಕಾಶ ಸಿಕ್ಕಿದೆ. ನಮಗೆಲ್ಲಾ ಹಬ್ಬದ ದಿನ ಅಂತ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಪರ ಜೈಕಾರ ಹಾಕಿದ್ದಾರೆ.

  • 19 Jan 2023 10:59 AM (IST)

    PM Modi in Kalaburagi Live: ಕಲಬುರಗಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ

    ಕಲಬುರಗಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಿನ್ನೆಲೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಪ್ರಧಾನಿ ಮೋದಿಯನ್ನು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಸ್ವಾಗತಿಸಿದರು.

  • 19 Jan 2023 10:48 AM (IST)

    PM Modi Yadgir Visit Live: ಮೋದಿ ಕಾರ್ಯಕ್ರಮದಲ್ಲಿ ಬುರ್ಖಾ ಹಾಕಿದವರಿಗಿಲ್ಲ ಅವಕಾಶ

    ನಾರಾಯಣಪುರ ಡ್ಯಾಂನ ಎಡದಂಡೆ‌ ಕಾಲುವೆಗಳ ಸ್ಕಾಡಾ ಗೇಟ್ ಉದ್ಘಾಟನೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಬುರ್ಖಾ ಧರಿಸಿ ಬರುವವರಿಗೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಹೀಗಾಗಿ ಬುರ್ಖಾ ತಗೆದಿಟ್ಟು ಕಾರ್ಯಕ್ರಮದ ವೇದಿಕೆಯತ್ತ ಮಹಿಳೆಯರು ತೆರಳುತ್ತಿದ್ದಾರೆ. ಬುರ್ಖಾ, ಕಪ್ಪು ವೇಲ್, ಕಪ್ಪು ಬಟ್ಟೆ ಹಾಕಿರುವವರಿಗೆ ನಿರ್ಬಂಧ ಹೇರಲಾಗುತ್ತಿದೆ.

  • 19 Jan 2023 10:39 AM (IST)

    PM Modi in Kalaburagi Live: ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲ ಆಗಮನ

    ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದ್ದಾರೆ. ಕಲಬುರಗಿ ಏರ್​ಪೋರ್ಟ್​ನಲ್ಲಿ ಮೋದಿ ಸ್ವಾಗತಕ್ಕೆ ಅದ್ಧೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • 19 Jan 2023 10:34 AM (IST)

    PM Modi in Kalaburagi Live: ಖರ್ಗೆ ಟಾರ್ಗೆಟ್ ಮಾಡುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿಗಿಲ್ಲ

    ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಪ್ರಧಾನಿ ಆಗಮಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಂತ್ಯೋದಯದ ಪರಿಕಲ್ಪನೆಯನ್ನು ಹೊಂದಿದೆ. ಕಾಂಗ್ರೆಸ್​​ ಸುದೀರ್ಘ ಆಡಳಿತ ನಡೆಸಿದೆ, ಆದ್ರೆ ಅಭಿವೃದ್ಧಿ ಮಾಡಿಲ್ಲ. 75 ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಡಬಲ್​ ಇಂಜಿನ್ ಸರ್ಕಾರ ಆಡಳಿತ ನಡೆಸುತ್ತಿದೆ. ಖರ್ಗೆ ಟಾರ್ಗೆಟ್ ಮಾಡುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿಗಿಲ್ಲ. ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮೋದಿ ಬರುತ್ತಿದ್ದಾರೆ ಎಂದು ಕಲಬುರಗಿ ಏರ್​ಪೋರ್ಟ್​​ನಲ್ಲಿ ನಳಿನ್ ಕುಮಾರ್ ಕಟೀಲು ಹೇಳಿದರು.

  • 19 Jan 2023 10:31 AM (IST)

    PM Modi in Kalaburagi Live: ಕಲಬುರಗಿ ವಿಮಾನ ನಿಲ್ದಾಣ ತಲುಪಿದ ಸಿಎಂ ಬೊಮ್ಮಾಯಿ

    ವಿಶೇಷ ವಿಮಾನದಲ್ಲಿ ಸಿಎಂ ಬೊಮ್ಮಾಯಿ ಕಲಬುರಗಿ ವಿಮಾನ ನಿಲ್ದಾಣ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಸಿಎಂ ಬೊಮ್ಮಾಯಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಸಿಎಂಗೆ ಸಾಥ್ ನೀಡಿದ್ದಾರೆ.

  • 19 Jan 2023 10:29 AM (IST)

    PM Modi in Kalaburagi Live: ಕಲಬುರಗಿ ವಿಮಾನ ನಿಲ್ದಾಣ ಪ್ರವೇಶಕ್ಕೆ ಶಾಸಕರಿಗೆ ನಿರ್ಬಂಧ, ಪೊಲೀಸರ ಜೊತೆ ವಾಗ್ವಾದ

    ಕಲ್ಬುರ್ಗಿ ವಿಮಾನ ನಿಲ್ದಾಣ ಪ್ರವೇಶಕ್ಕೆ ಶಾಸಕರಿಗೆ ನಿರ್ಬಂಧ ಹೇರಲಾಗಿದ್ದು ಪೊಲೀಸ್ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಏರು ಧ್ವನಿಯಲ್ಲಿ ಪೋಲಿಸರಿಗೆ ಶಾಸಕ ರಾಜಕುಮಾರ ಪಾಟೀಲ್ ತೇಲ್ಕುರ ಅವಾಜ್ ಹಾಕಿದ್ದಾರೆ. ಶಾಸಕರಾದ ಬಸವರಾಜ್ ಮತ್ತಿಮೂಡ, ರಾಜಕುಮಾರ್ ಪಾಟೀಲ್ ಗೆ ಪೋಲಿಸರು ತಡೆದಿದ್ರು. ಪಾಸ್ ಇಲ್ಲದ ಹಿನ್ನಲೆ ಶಾಸಕರಿಗೆ ಪ್ರವೇಶಕ್ಕೆ ಪ್ರನಿರ್ಭಂದಿಸಿದ್ರು. ವಿಮಾನ ನಿಲ್ದಾಣದ ಎದುರು ಅರ್ಧ ಗಂಟೆ ಕಾದು ಶಾಸಕರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.

  • 19 Jan 2023 10:26 AM (IST)

    PM Modi Yadgir Visit Live: ಕೆಲವೇ ಹೊತ್ತಿನಲ್ಲಿ ಕೊಡೆಕಲ್​ ಗ್ರಾಮಕ್ಕೆ ಪ್ರಧಾನಿ ಮೋದಿ ಆಗಮನ

    ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​​ನಲ್ಲಿ ನಡೆಯಲಿರುವ ಸಮಾವೇಶಕ್ಕೆ ನರೇಂದ್ರ ಮೋದಿಯವರು ಕೆಲವೇ ಹೊತ್ತಿನಲ್ಲಿ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಸಮಾವೇಶಕ್ಕೆ ಜನಸಾಗರವೇ ಹರಿದು ಬರುತ್ತಿದೆ. 1 ಕಿ.ಮೀ. ದೂರದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಸ್ಕಾಡಾ ಗೇಟ್​ಗಳ ಉದ್ಘಾಟನೆ, ಜಲಧಾರೆ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ.

  • 19 Jan 2023 10:01 AM (IST)

    PM Modi in Kalaburagi Live: ಮೋದಿ ಭೇಟಿ ಹಿನ್ನೆಲೆ ಕಲಬುರಗಿಯಲ್ಲಿ ಹಬ್ಬದ ಸಂಭ್ರಮ

    ಮಳಖೇಡ್ ಕ್ಕೆ ಇಂದು ಪ್ರಧಾನಿ ಮೋದಿ ಆಗಮಿಸುತ್ತಿರೋ ಹಿನ್ನೆಲೆ ಪ್ರಧಾನ ವೇದಿಕೆ ಮುಂಭಾಗದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಡೊಳ್ಳು ಕುಣಿತ, ಕಹಳೆ ಊದಿ ಕಲಾವಿದರ ತಂಡಗಳು ಸಂಭ್ರಮಿಸುತ್ತಿವೆ. ಕಲಬುರಗಿ ಜಿಲ್ಲೆಯ ವಿವಿದೆಡೆಯಿಂದ ಕಲಾ ತಂಡಗಳು ಬಂದಿವೆ.

  • 19 Jan 2023 09:37 AM (IST)

    PM Modi in Kalaburagi Live: ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ವೇದಿಕೆ ಮೇಲೆ ತಪಾಸಣೆ

    ಮಳಖೇಡ್​ನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ವೇದಿಕೆ ಮೇಲೆ ತಪಾಸಣೆ ನಡೆಯುತ್ತಿದೆ. ವೇದಿಕೆ ಮತ್ತು ಸುತ್ತಮುತ್ತಲಿನ ಸ್ಥಳದಲ್ಲೇ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸ್ತಿದ್ದಾರೆ.

  • 19 Jan 2023 09:35 AM (IST)

    PM Modi in Kalaburagi Live: ವೇದಿಕೆ ಮೇಲೆ ಪ್ರಮುಖ ಸಮುದಾಯದ ಮಹನೀಯರ ಭಾವಚಿತ್ರ

    ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಮಳಖೇಡ್ ನಲ್ಲಿ ಲಂಬಾಣಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದ ಮೂಲಕ ಮತಗಳಿಗೆ ಲೆಕ್ಕಾಚಾರ ಹಾಕಿದೆ. ಮುಖ್ಯ ವೇದಿಕೆ ಮೇಲ್ಭಾಗದಲ್ಲಿ ಅಂಬೇಡ್ಕರ್ ಭಾವಚಿತ್ರ, ಬಸವಣ್ಣ, ಸಂತ ಸೇವಾಲಾಲ್, ಕನಕದಾಸರು, ಶರಣ ಹರಳಯ್ಯನವರ ಭಾವಚಿತ್ರ ಇರಿಸಲಾಗಿದೆ. ಪ್ರಮುಖ ಸಮುದಾಯದ ಮಹನೀಯರ ಭಾವಚಿತ್ರ ಇರಿಸಲಾಗಿದೆ. ವೇದಿಕೆ ಮಧ್ಯಭಾಗದಲ್ಲಿ ಪ್ರಧಾನಿ ಮೋದಿ, ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್ ಭಾವಚಿತ್ರ ಇರಲಿದೆ.

  • 19 Jan 2023 09:29 AM (IST)

    PM Modi in Kalaburagi Live: ಮಳಖೇಡದಲ್ಲಿ ಮೋದಿ ಕಾರ್ಯಕ್ರಮದ ವೇದಿಕೆ ಸುತ್ತ ಬಿಗಿ ಭದ್ರತೆ

    ವೇದಿಕೆ ಮುಂದೆ ಸುಮಾರು 50 ಮೀಟರ್‌‌ ವರೆಗೆ ನಿಷೇಧ ಹೇರಲಾಗಿದೆ. ತಂತಿ ಬೇಲಿ‌ ಹಾಕಿ ಜನ ಒಳ ಹೋಗದಂತೆ ವ್ಯವಸ್ಥೆ ಮಾಡಲಾಗಿದೆ. ಕೇವಲ ಎಸ್‌ಪಿಜಿ ಅಧಿಕಾರಿಗಳಿಗೆ ಮಾತ್ರ ವೇದಿಕೆ ಬಳಿ ತೆರೆಳೋಕೆ ಅವಕಾಶ.

  • 19 Jan 2023 09:26 AM (IST)

    PM Modi Yadgir Visit Live: ಯಾದಗಿರಿಯಲ್ಲೂ 1500 ಸಿಬ್ಬಂದಿಯಿಂದ ತಯಾರಾಗುತ್ತಿದೆ ಅಡುಗೆ

    ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್​ನಲ್ಲಿ ಇಂದು ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆ ಸಮಾವೇಶಕ್ಕೆ ಬರುವವರಿಗೆ ಪಲಾವ್, ಮೊಸರನ್ನ, ಪಾಯಸ ವ್ಯವಸ್ಥೆ ಮಾಡಲಾಗಿದೆ. ಸುಮಾರು 300 ಕೌಂಟರ್ ಮೂಲಕ ಊಟ ಸಿಬ್ಬಂದಿ ಬಡಿಸಲಿದ್ದಾರೆ. ಸಮಾವೇಶಕ್ಕೆ ಬರುವ ಸುಮಾರು 3 ಲಕ್ಷ ಜನರಿಗೆ ಊಟ ತಯಾರಿ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬರುವ ಗಣ್ಯರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 200 ಗಣ್ಯರಿಗೆ ಸಿಬ್ಬಂದಿ ಊಟ ಸಿದ್ಧಪಡಿಸುತ್ತಿದ್ದಾರೆ. ಸಮಾವೇಶಕ್ಕೆ ಬರುವ ವಿಐಪಿಗಳಿಗೆ ಮೆಂತ್ಯ ಚಪಾತಿ, ಹೋಳಿಗೆ, ಕುರ್ಮಾ, ಹೆಸರುಕಾಳು ಪಲ್ಯ, ಅನ್ನ ಸಾಂಬರ್, ಮೊಸರು ಬಜ್ಜಿ ಸಿದ್ಧವಾಗುತ್ತಿದೆ.

  • 19 Jan 2023 09:22 AM (IST)

    PM Modi in Kalaburagi Live: ಕಲಬುರಗಿ ಕಾರ್ಯಕ್ರಮದಲ್ಲಿ ಮೂರು ಲಕ್ಷ ಜನರಿಗೆ ಸಿದ್ಧವಾಗುತ್ತಿದೆ ಆಹಾರ

    ಮಳಖೇಡ್​ನಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದವರಿಗೆ ಪಲಾವ್ ಸಿದ್ಧವಾಗುತ್ತಿದೆ. ಐನೂರಕ್ಕೂ ಹೆಚ್ಚು ಸಿಬ್ಬಂದಿ ಅಡುಗೆ ತಯಾರಿಯಲ್ಲಿ ಮುಳುಗಿದ್ದಾರೆ. ಮೂರು ಲಕ್ಷ ಜನರಿಗೆ ಆಗುವಷ್ಟು ಆಹಾರ ಸಿದ್ದವಾಗುತ್ತಿದೆ. ಮುನ್ನೂರು ಕ್ವಿಂಟಲ್ ಅಕ್ಕಿ, ಇಪ್ಪತ್ತು ಕ್ವಿಂಟಲ್ ತರಕಾರಿ, ಆರು ಸಾವಿರ ಲೀಟರ್ ಎಣ್ಣೆ ಬಳಕೆ ಮಾಡಲಾಗುತ್ತಿದೆ. ಮೂರು ಲಕ್ಷ ಮೈಸೂರು ಪಾಕ್ ಸಿದ್ದಗೊಳ್ಳುತ್ತಿದೆ. ಊಟ ನೀಡಲು ಇನ್ನೂರು ಕೌಂಟರ್ ಸಿದ್ದವಾಗಿದೆ. ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದಕ್ಲಾಗಿಯೇ ನಿಯೋಜಿಸಲಾಗಿದೆ.

  • 19 Jan 2023 09:14 AM (IST)

    PM Modi Karnataka Visit Live: ಕನ್ನಡದಲ್ಲಿ ಟ್ವೀಟ್ ಮಾಡಿದ ನರೇಂದ್ರ ಮೋದಿ

    ಕನ್ನಡದಲ್ಲೇ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.

  • 19 Jan 2023 09:12 AM (IST)

    PM Modi in Kalaburagi Live: ಕಲಬುರಗಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್​ಎಎಲ್​ ಏರ್​ಪೋರ್ಟ್​ನಿಂದ ವಿಶೇಷ ವಿಮಾನದಲ್ಲಿ ಕಲಬುರಗಿಗೆ ತೆರಳಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಭಾಗಿಯಾಗಲಿದ್ದಾರೆ.

  • 19 Jan 2023 09:10 AM (IST)

    PM Modi in Kalaburagi Live: ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಿದ್ಧವಾಗಿದೆ ಭವ್ಯ ವೇದಿಕೆ

    ಸುಮಾರು 65 ಎಕರೆ ಪ್ರದೇಶದಲ್ಲಿ ಭವ್ಯವಾದ ವೇದಿಕೆಯನ್ನ ನಿರ್ಮಾಣ ಮಾಡಲಾಗುತ್ತಿದೆ. ವೇದಿಕೆಯನ್ನ 40 ಅಡಿ ಉದ್ದ 60 ಅಡಿ ಅಗಲ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನು ಮೋದಿ ಕಾರ್ಯಕ್ರಮಕ್ಕಾಗಿ ಸುಮಾರು 2 ಲಕ್ಷ ಜನ ಬರುವ ನಿರೀಕ್ಷೆಯಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಸುಮಾರು 1.10 ಲಕ್ಷ ಆಸನದ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿಕೊಂಡಿದೆ. ಇನ್ನು ಕಾರ್ಯಕ್ರಮದ ವೇದಿಕೆ ಹಿಂಭಾಗದಲ್ಲಿ ಸುಮಾರು 300 ಮೀಟರ್ ದೂರದಲ್ಲಿ ಮೂರು ಹೆಲಿಫ್ಯಾಡ್ ಗಳನ್ನ ನಿರ್ಮಾಣ ಮಾಡಲಾಗಿದೆ.

  • 19 Jan 2023 09:06 AM (IST)

    PM Modi in Kalaburagi Live: ಕಲಬುರಗಿ ಜಿಲ್ಲೆಯಲ್ಲಿಂದು ಸರ್ಕಾರಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ

    ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಇಂದು ಸರ್ಕಾರಿ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಕರಾರು ಒಪ್ಪಂದದ ಮೇಲೆ ನೀಡಿರೋ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಇಂದು ರಾತ್ರಿ ವರೆಗೂ ಈ ಸಮಸ್ಯೆ ಇರಲಿದೆ. ಕಾರ್ಯಕ್ರಮದ ಫಲಾನುಭವಿಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. 2300 ಬಸ್ ಗಳನ್ನು ಕರಾರು ಒಪ್ಪಂದದ ಮೇಲೆ ಕೆಕೆಆರ್​ಟಿಸಿ ನೀಡಿದೆ.

  • 19 Jan 2023 09:02 AM (IST)

    PM Modi in Kalaburagi Live: ಮೋದಿಯವರಿಗೆ ಅನುಭವ ಮಂಟಪದಲ್ಲಿ ಶರಣರು ಚರ್ಚೆ ನಡೆಸುತ್ತಿರುವ ಚಿತ್ರ ಗಿಫ್ಟ್​

    ಮಳಖೇಡ ಗ್ರಾಮದಲ್ಲಿ ಇಂದು ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಮೋದಿಗೆ ಅನುಭವ ಮಂಟಪ ಚಿತ್ರದ ಫೋಟೋ ಫ್ರೇಮ್​ ಗಿಫ್ಟ್​ ಮಾಡಲು ಕಲಬುರಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಚಿತ್ರ ಕಲಾವಿದ ಜೆ.ಎಸ್.ಖಂಡೇರಾವ್ ರಚಿಸಿರುವ ಅನುಭವ ಮಂಟಪದಲ್ಲಿ ಶರಣರು ಚರ್ಚೆ ನಡೆಸುತ್ತಿರುವ ಚಿತ್ರಕ್ಕೆ ಫ್ರೇಮ್ ಹಾಕಿಸಿ ಗಿಫ್ಟ್​ ಮಾಡಲು ತಯಾರಿ ನಡೆದಿದೆ. ನೇಗಿಲು ಜತೆ ಉಡುಗೊರೆಯಾಗಿ ಅನುಭವ ಮಂಟಪದ ಚಿತ್ರ ಗಿಫ್ಟ್​ ಮಾಡಲು ಕಲಬುರಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

  • 19 Jan 2023 08:57 AM (IST)

    PM Modi Karnataka Visit Live: ಕಾರ್ಯಕ್ರಮದ ವೇದಿಕೆ ಮೇಲೆ 18 ಗಣ್ಯರು ಕೂರುವುದಕ್ಕೆ ಅವಕಾಶ

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಟಿ.ಸಿ.ಗೆಹ್ಲೋಟ್​, ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ವೇದಿಕೆ ಮೇಲೆ 18 ಗಣ್ಯರು ಕೂರುವುದಕ್ಕೆ ಅವಕಾಶವಿದೆ.

  • 19 Jan 2023 08:54 AM (IST)

    PM Modi in Kalaburagi Live: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರುವವರಿಗೆ ಹಲವು ನಿರ್ಬಂಧ

    ಇಂದು ಕಲಬುರಗಿ, ಯಾದಗಿರಿ ಜಿಲ್ಲೆಗೆ ಮೋದಿ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರುವವರಿಗೆ ಕೆಲವು ನಿರ್ಬಂಧ ಹೇರಲಾಗಿದೆ. ನೀರಿನ ಬಾಟಲಿ, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಮಾದಕವಸ್ತು, ಗುಟ್ಕಾ, ಅಪಾಯಕಾರಿ ವಸ್ತುಗಳನ್ನ ಕಾರ್ಯಕ್ರಮ ಸ್ಥಳಕ್ಕೆ ತರುವಂತಿಲ್ಲ. ಭದ್ರತಾ ಸಿಬ್ಬಂದಿ, ಪೊಲೀಸರಿಗೆ ಸಹಕರಿಸಬೇಕು ಎಂದು ಸೂಚಿಸಲಾಗಿದೆ. ನಿಗದಿ ಪಡಿಸಿದ ಸ್ಥಳದಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಯಾವುದೇ ಸಂಘ ಸಂಸ್ಥೆಗಳು ಪ್ರತಿಭಟನೆ, ಮೆರವಣಿಗೆ ನಡೆಸುವಂತಿಲ್ಲ. ಘೋಷಣೆ ಕೂಗುವುದು, ಸಂಚಾರಕ್ಕೆ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮುಖಂಡರು, ಸಂಘ ಸಂಸ್ಥೆಯವರು ಹಾರ ತುರಾಯಿ ತರುವಂತಿಲ್ಲ. ಕಾರ್ಯಕ್ರಮಕ್ಕೆ ಬರುವವರು ಕಪ್ಪು ಬಟ್ಟೆ, ಕಪ್ಪು ಶಾಲು ತರುವಂತಿಲ್ಲ ಎಂದು ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

  • 19 Jan 2023 08:52 AM (IST)

    PM Modi Yadgir Visit Live: ಗಿನ್ನಿಸ್ ರೆಕಾರ್ಡ್ ಸೇರಲಿದೆ ಮೋದಿ ಕಾರ್ಯಕ್ರಮ

    ಮಳಖೇಡ್​ನಲ್ಲಿ ಇಂದು ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮ ಗಿನ್ನಿಸ್ ರೆಕಾರ್ಡ್ ಬುಕ್ ಗೆ ಸೇರಲಿದೆ. ಏಕ ಕಾಲಕ್ಕೆ ಹಕ್ಕು ಪತ್ರ ನೀಡ್ತಿರೋದು ಇದೇ ಮೊದಲು. ಕಂದಾಯ ಇಲಾಖೆ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಅಂತ ಘೋಷಿಸುತ್ತಿದೆ. ಇಂದು ಕಂದಾಯ ಇಲಾಖೆ ವತಿಯಿಂದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯುತ್ತೆ. 52 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತೆ. ಹೀಗಾಗಿ ಇದು ಗಿನ್ನಿಸ್ ರೆಕಾರ್ಡ್ ಆಗಲಿದೆ ಎಂದು ಸಚಿವ ಆಶೋಕ್ ತಿಳಿಸಿದ್ದಾರೆ.

  • 19 Jan 2023 08:47 AM (IST)

    PM Modi in Kalaburagi Live: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಪ್ರಧಾನಿ ಮೋದಿ

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ರಾಜಕೀಯವಾಗಿ ಯಾವ ರೀತಿ ಟಕ್ಕರ್ ಕೊಡ್ತಾರೆ ಅನ್ನೋ ಕುತೂಹಲ ಹೆಚ್ಚಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲಬುರಗಿಗೆ ಪ್ರಧಾನಿ ಮೋದಿ ಬರ್ತಿದ್ದಾರೆ. ಖರ್ಗೆ ಅವರ ತವರು ಜಿಲ್ಲೆಯಲ್ಲಿ ಖರ್ಗೆ ಕಟ್ಟಿಹಾಕಲು ಪ್ರಧಾನಿ ಮೋದಿ ಪ್ಲ್ಯಾನ್ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಖರ್ಗೆಗೆ ಹಿನ್ನಡೆ ಉಂಟು ಮಾಡೋ ಲೆಕ್ಕಾಚಾರವಿದೆ. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ಎದುರಿಸಲು ಸಿದ್ದತೆ ನಡೆದಿದೆ.

  • 19 Jan 2023 08:44 AM (IST)

    PM Modi Yadgir Visit Live: ಯಾದಗಿರಿ ಜಿಲ್ಲೆಗೆ ಇಂದು ಪ್ರಧಾನಿ ಮೋದಿ ಆಗಮನ

    ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಬಳಿಕ ಕಲಬುರ್ಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೊಡೆಕಲ್ ನಲ್ಲಿ ನಿರ್ಮಾಣ ಮಾಡಿರುವ ಹೆಲಿಫ್ಯಾಡ್ ಗೆ ಬಂದಿಳಿಯಲಿದ್ದಾರೆ. ಮೋದಿ ಜೊತೆಗೆ ರಾಜ್ಯದ ರಾಜಪಾಲರು, ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಹಲವು ಜನ ಸಚಿವರು ಹಾಗೂ ಶಾಸಕರು ಬರಲಿದ್ದಾರೆ.

  • 19 Jan 2023 08:40 AM (IST)

    PM Modi Kalyana Karnataka Visit Live: ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಸಿಎಂ ಭೇಟಿ

    ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಪ್ರಧಾನಿ ಮೋದಿ ಆಗಮನ ಹಿನ್ನಲೆ ಮೋದಿ ಭಾಗಿಯಾಗೋ ಎರಡು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ವಿಶೇಷ ವಿಮಾನ ಮೂಲಕ ಬೆಂಗಳೂರಿನಿಂದ ಕಲಬುರಗಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಮುಂಜಾನೆ 9.40 ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಿಎಂ ಆಗಮಿಸಲಿದ್ದು ಮುಂಜಾನೆ 11 ಗಂಟೆಗೆ ಪ್ರಧಾನಿ ಮೋದಿರನ್ನು ಸ್ವಾಗತಿಸಲಿದ್ದಾರೆ. ಮುಂಜಾನೆ 11-5 ಕ್ಕೆ ಪ್ರಧಾನಿ ಜೊತೆ ಕೊಡೆಕಲ್ ಗೆ ಹೋಗಿ ಅಲ್ಲಿ ನಡೆಯಲಿರೋ ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಭಾಗಿಯಾಗಲಿದ್ದರೆ. ಮಧ್ಯಾಹ್ನ 2 ಗಂಟೆಗೆ ಮಳಖೇಡ್ ಗೆ ಪ್ರಧಾನಿ ಜೊತೆ ತೆರಳಿ ಮಳಖೇಡ್ ನಲ್ಲಿ ನಡೆಯಲಿರೋ ಕಾರ್ಯಕ್ರಮ ದಲ್ಲಿ ಭಾಗಿ. ಮಧ್ಯಾಹ್ನ 3.05ಕ್ಕೆ ಮಳಖೇಡ್ ನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಂಜೆ 4.30ಕ್ಕೆ ವಿಶೇಷ ವಿಮಾನ ಮೂಲಕ ಮರಳಿ ಬೆಂಗಳೂರಿಗೆ ಹೋಗಲಿದ್ದಾರೆ.

  • Published On - Jan 19,2023 8:27 AM

    Follow us
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?