ಯಾದಗಿರಿ: ಮತ್ತೆ ಸದ್ದು ಮಾಡಿದ ಸ್ಯಾಟಲೈಟ್ ಫೋನ್, ಪಾಕಿಸ್ತಾನಕ್ಕೆ ಕರೆ ಶಂಕೆ

ಎರಡು ವರ್ಷದ ಹಿಂದೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಡಗಿಮುದ್ರ ಗ್ರಾಮದಿಂದ ಸ್ಯಾಟಲೈಟ್ ಕರೆ ಹೋಗಿತ್ತು. ಈಗ ಮತ್ತೆ ಇದೇ ಗ್ರಾಮದಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲ್ಲೆಯಲ್ಲಿ ಸ್ಥಳಕ್ಕೆ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾದಗಿರಿ: ಮತ್ತೆ ಸದ್ದು ಮಾಡಿದ ಸ್ಯಾಟಲೈಟ್ ಫೋನ್, ಪಾಕಿಸ್ತಾನಕ್ಕೆ ಕರೆ ಶಂಕೆ
ಸಾಂದರ್ಭಿಕ ಚಿತ್ರ
Edited By:

Updated on: Dec 15, 2023 | 10:18 AM

ಯಾದಗಿರಿ, ಡಿಸೆಂಬರ್​​​ 15: ಜಿಲ್ಲೆಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ (Satellite Phone) ಸದ್ದು ಮಾಡಿದೆ. ಸುರಪುರ (Surpur) ತಾಲೂಕಿನ ಶೆಳ್ಳಗಿ ಗ್ರಾಮದಿಂದ ಪಾಕಿಸ್ತಾನಕ್ಕೆ ಸೆಪ್ಟೆಂಬರ್​​ 17ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಸ್ಯಾಟಲೈಟ್ ಕರೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಜಿಪಿಎಸ್ ಲೊಕೇಷನ್ ಆಧಾರದ ಮೇಲೆ ಸ್ಥಳಕ್ಕೆ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ವಾಪಸ್​ ಆಗಿದ್ದಾರೆ. ಚೀನಾ ನಿರ್ಮಿತ ಸ್ಯಾಟಲೈಟ್ ಫೋನ್​ ಮೂಲಕ ಪಾಕಿಸ್ತಾನಕ್ಕೆ ಕರೆ ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಎರಡು ವರ್ಷದ ಹಿಂದೆ ಹೆಡಗಿಮುದ್ರ ಗ್ರಾಮದಿಂದ ಸ್ಯಾಟಲೈಟ್ ಕರೆ ಹೋಗಿತ್ತು. ಈಗ ಮತ್ತೆ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿರುವ ಶಂಕೆ ವ್ಯಕ್ತವಾಗಿದೆ. 2014 ರಲ್ಲೂ ಮೋಸ್ಟ್ ವಾಂಟೆಡ್ ಉಗ್ರರು ಯಾದಗಿರಿಯಲ್ಲಿ ಅಡಗಿದ್ದಾರೆ ಎಂದು ಶಂಕಿಸಿ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸಿದ್ದರು.

ಹೆಚ್ಚಿನ ಮಾಹಿತಿ ಅಪ್ಡೇಟ್​ ಮಾಡಲಾಗುತ್ತಿದೆ..

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:54 am, Fri, 15 December 23